ಜಮ್ಮು-ಕಾಶ್ಮೀರ: ಮೂರನೇ ಉಗ್ರನನ್ನು ಹೊಡೆದುರುಳಿಸಿದ ಸೇನೆ
ಪುಲ್ವಾಮಾ(ಜಮ್ಮು-ಕಾಶ್ಮೀರ), ಜುಲೈ 4: ಜಮ್ಮು ಕಾಶ್ಮೀರದ ಪುಲ್ವಾಮಾದ ಬಾಮ್ನೂ ಎಂಬಲ್ಲಿ ನಿನ್ನೆ(ಜುಲೈ 3)ತಾನೆ ಇಬ್ಬರು ಉಗ್ರರನ್ನು ಬಲಿಹಾಕಿದ್ದ ಭಾರತೀಯ ಸೇನೆ, ಇಂದು ಒಬ್ಬ ಭಯೋತ್ಪಾದಕನನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ.
ಪುಲ್ವಾಮಾ ಭಾಗದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಗುಪ್ತಚರ ವರದಿಯ ಪ್ರಕಾರ ಭದ್ರತಾ ಪಡೆ ಈ ಭಾಗದಲ್ಲಿ ಗಸ್ತು ತಿರುಗುತ್ತಿತ್ತು. ನಿನ್ನೆ ತಾನೇ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದ ಭಾರತೀಯ ಸೇನೆಗೆ ಆ ಭಾಗದಲ್ಲಿ ಮತ್ತಷ್ಟು ಭಯೋತ್ಪಾದಕರು ಅಡಗಿ ಕುಳಿತಿರುವ ಮಾಹಿತಿ ಲಭಿಸಿತ್ತು.

ಇದೀಗ ಮೂರನೇ ಉಗ್ರನನ್ನು ಹತ್ಯೆಗೈದಿರುವ ಭಾರತ ಭಯೋತ್ಪಾದಕರಿಗೆ ದಿಟ್ಟ ಸಂದೇಶ ರವಾನಿಸಿದೆ.












Click it and Unblock the Notifications