Get Updates
Get notified of breaking news, exclusive insights, and must-see stories!

ರಸ್ತೆಗಳಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 9 ಗಂಟೆವರೆಗೆ ಇರುವುದು ಅತ್ಯಂತ ಅಪಾಯಕಾರಿ

ನವದೆಹಲಿ, ಜ. 02: ರಸ್ತೆ ಅಪಘಾತಗಳ ಬಗ್ಗೆ ಸರ್ಕಾರವು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಕಳೆದ ಐದು ವರ್ಷಗಳಲ್ಲಿ ನಡೆದ ರಸ್ತೆ ಅಪಘಾತಗಳನ್ನು ಗಮನಿಸಿದ 2021 ರಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 9 ಗಂಟೆವರೆಗೆ ಅತೀ ಹೆಚ್ಚು ಅವಘಡಗಳು ಸಂಭವಿಸಿವೆ ಎಂದು ಹೇಳಿದೆ.

ಸಂಜೆ 6 ರಿಂದ ರಾತ್ರಿ 9 ಗಂಟೆಯ ನಡುವಿನ ಸಮಯದಲ್ಲಿ ಗರಿಷ್ಠ ಸಂಖ್ಯೆಯ ರಸ್ತೆ ಅಪಘಾತಗಳು ವರದಿಯಾಗಿವೆ. ಮಧ್ಯಾಹ್ನ 3 ರಿಂದ ಸಂಜೆ 6 ರ ನಡುವಿನ ಅವಧಿಯಲ್ಲಿ ಎರಡನೇ ಅತ್ಯಧಿಕ ಅಪಘಾತಗಳು ಸಂಭವಿಸಿವೆ.

ಒಟ್ಟು ದಾಖಲಾದ ರಸ್ತೆ ಅಪಘಾತಗಳಲ್ಲಿ ಸುಮಾರು 39% ನಷ್ಟು ಮಧ್ಯಾಹ್ನ 3 ರಿಂದ ರಾತ್ರಿ 9 ಗಂಟೆಯ ಸಮಯದಲ್ಲಿ ನಡೆದಿದ್ದು, ಈ ಸಮಯದಲ್ಲಿ ರಸ್ತೆಯಲ್ಲಿರುವುದು ಅತ್ಯಂತ ಅಪಾಯಕಾರಿಯಾಗಿದೆ.

3pm - 9pm riskiest to be on national highway roads

ಮತ್ತೊಂದೆಡೆ, 2021 ರಲ್ಲಿ ದಾಖಲಾದ ಒಟ್ಟು ರಸ್ತೆ ಅಪಘಾತಗಳಲ್ಲಿ 10% ಕ್ಕಿಂತ ಕಡಿಮೆಯಿರುವ ಕಾರಣ ಮಧ್ಯರಾತ್ರಿ 12 ರಿಂದ ಬೆಳಗಿನ 6 ಗಂಟೆಯ ಅವಧಿಯನ್ನು ಸುರಕ್ಷಿತವೆಂದು ಪರಿಗಣಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 'ಭಾರತದಲ್ಲಿ ರಸ್ತೆ ಅಪಘಾತಗಳು - 2021' ಎಂಬ ಶೀರ್ಷಿಕೆ ಅಡಿಯಲ್ಲಿ ವಾರ್ಷಿಕ ವರದಿ ಬಿಡುಗಡೆ ಮಾಡಿದೆ.

ಇನ್ನು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತಗಳಿಂದ ಉಂಟಾದ ಅಧಿಕ ಸಾವುಗಳು ಉತ್ತರ ಪ್ರದೇಶದಲ್ಲಿ ವರದಿಯಾಗಿವೆ. 2021 ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ತಮಿಳುನಾಡಿನಲ್ಲಿ ಸಂಭವಿಸಿವೆ.

ಈ ವರದಿಯಲ್ಲಿ ರಸ್ತೆ ಅಪಘಾತಗಳು ಮತ್ತು ಅಪಘಾತ ಸಂಬಂಧಿತ ಸಾವುಗಳು ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವರದಿಯಾಗಿವೆ ಎಂದು ಒತ್ತಿಹೇಳಿದೆ.

3pm - 9pm riskiest to be on national highway roads

2021 ರಲ್ಲಿ, ಸುಮಾರು 69 ಪ್ರತಿಶತದಷ್ಟು ರಸ್ತೆ ಅಪಘಾತಗಳ ಸಾವು ಗ್ರಾಮೀಣ ಪ್ರದೇಶದಲ್ಲಿ ಸಂಭವಿಸಿವೆ. ಆದರೆ ನಗರ ಪ್ರದೇಶವು ದೇಶದ ಒಟ್ಟು ಸಾವುಗಳಲ್ಲಿ 31 ಪ್ರತಿಶತವನ್ನು ಹೊಂದಿದೆ" ಎಂದು ವರದಿ ಬಹಿರಂಗಪಡಿಸಿದೆ.

2021 ರಲ್ಲಿ, ಭಾರತದಲ್ಲಿ ರಸ್ತೆ ಅಪಘಾತಗಳು ಸುಮಾರು 1.5 ಲಕ್ಷ ಜೀವಗಳು ಬಲಿಯಾಗಿವೆ. 3.8 ಲಕ್ಷಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದಾರೆ. ರಸ್ತೆ ಅಪಘಾತಗಳಲ್ಲಿ 18 ರಿಂದ 45 ವರ್ಷದವರು ಹೆಚ್ಚು ಸಾವಿಗೀಡಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆಯಲ್ಲಿ 2021 ರಲ್ಲಿ ತಮಿಳುನಾಡಿನಲ್ಲಿ 16,869 ಅಪಘಾತಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿ 14,540 ಅಪಘಾತಗಳನ್ನು ವರದಿ ಮಾಡಿದ ಉತ್ತರ ಪ್ರದೇಶವಿದೆ. ಮೂರನೇ ಸ್ಥಾನದಲ್ಲಿ ಕರ್ನಾಟಕವಿದ್ದು, ಇಲ್ಲಿ 11,462 ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿವೆ. ಮಧ್ಯಪ್ರದೇಶದಲ್ಲಿ 11,030, ಆಂಧ್ರ ಪ್ರದೇಶದಲ್ಲಿ 8,241, ಕೇರಳದಲ್ಲಿ 8,048, ಮಹಾರಾಷ್ಟ್ರದಲ್ಲಿ 7,501, ತೆಲಂಗಾಣದಲ್ಲಿ 7,214, ರಾಜಸ್ಥಾನದಲ್ಲಿ 6,424 ಮತ್ತು ಬಿಹಾರದಲ್ಲಿ 4,349 ಅಪಘಾತಗಳು ವರದಿಯಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+