Get Updates
Get notified of breaking news, exclusive insights, and must-see stories!

ಪಿಯುಸಿ ಪ್ರವೇಶಕ್ಕೆ ಅನರ್ಹರಾದ 10ನೇ ತರಗತಿ ಅರ್ಧಕ್ಕೆ ಬಿಟ್ಟ-ಅನುತ್ತೀರ್ಣ 35ಲಕ್ಷ ವಿದ್ಯಾರ್ಥಿಗಳು

ಬೆಂಗಳೂರು, ಮೇ 31: ಈ ಹಿಂದಿನ 2021-2022ರ ಸಾಲಿನಲ್ಲಿ 10 ನೇ ತರಗತಿಗೆ ದಾಖಲಾದ ಸರಿಸುಮಾರು 35 ಲಕ್ಷ ವಿದ್ಯಾರ್ಥಿಗಳ ಪೈಕಿ ಬಹುತೇಕರು 11ನೇ ತರಗತಿಗೆ ಪ್ರವೇಶವಾಗಿಲ್ಲ. 35 ಲಕ್ಷ ವಿದ್ಯಾರ್ಥಿಗಳ ಪೈಕಿ 27.5 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, 7.5 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಗೆ ಹಾಜರಾಗಿಲ್ಲ ಎಂಬ ಅಂಕಿ ಅಂಶಗಳು ಶಿಕ್ಷಣ ಸಚಿವಾಲಯ (MoE) ನಡೆಸಿದ ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಮತ್ತು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಸೇರಿದಂತೆ ಸೆಂಟ್ರಲ್ ಬೋರ್ಡ್‌ಗಳಲ್ಲಿ ವಿದ್ಯಾರ್ಥಿಗಳ ವೈಫಲ್ಯ ಪ್ರಮಾಣ ಶೇಕಡ 5 ಕ್ಕಿಂತ ಕಡಿಮೆ ಇದ್ದು, ರಾಜ್ಯ ಮಂಡಳಿಗಳಲ್ಲಿ ವಿದ್ಯಾರ್ಥಿಗಳ ವೈಫಲ್ಯ ಪ್ರಮಾಣವು ಶೇಕಡಾ 16ರಷ್ಟಿದೆ ಅಧಿಕವಾಗಿದೆ ಎಂದು ವಿಶ್ಲೇಷಣಾ ವರದಿ ತಿಳಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.

35 Lakh Students Fail-Dropout SSLC, Their Unable To Entry To PUC: Education Ministry Analysis

ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸಂಜಯ್ ಕುಮಾರ್ ಮಾತನಾಡಿ, ವಿವಿಧ ಬೋರ್ಡ್‌ಗಳಲ್ಲಿ ಕಲಿಸುವ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳ ಮಧ್ಯೆದ ಮೀತಿ ಇದೆ. ಇದು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಸೇರಿದಂತೆ ರಾಷ್ಟ್ರೀಯ ಮಟ್ಟದ ಸಾಮಾನ್ಯ ಪರೀಕ್ಷೆಗಳಿಗೆ ಅಡ್ಡಿಪಡಿಸುತ್ತದೆ. ಜಂಟಿ ಪ್ರವೇಶ ಪರೀಕ್ಷೆ (JEE), ಮತ್ತು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET)ಇದರಿಂದ ತೊಂದರೆ ಆಗುತ್ತಿದೆ ಎಂದರು.

NEET ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳ ಬಗ್ಗೆ ಸಚಿವಾಲಯ ಈಗ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ ಮಾಹಿತಿ ಪಡೆಯುತ್ತಿದೆ. ಈ ಮೂಲಕ ನೀಟ್‌ನಲ್ಲಿ ಯಾವ ಮಂಡಳಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿಶ್ಲೇಷಿಸಲು ಸಚಿವಾಲಯ ಮುಂದಾಗಿದೆ. 10 ನೇ ತರಗತಿ ಪರೀಕ್ಷೆಗಳಲ್ಲಿ ಫೇಲಾದ ಅಥವಾ ಹಾಜರಾಗಲು ಸಾಧ್ಯವಾಗದ 35 ಲಕ್ಷ ವಿದ್ಯಾರ್ಥಿಗಳ ಪೈಕಿ ಕೇವಲ 4.5 ಲಕ್ಷ ವಿದ್ಯಾರ್ಥಿಗಳು ಮಾತ್ರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಮೂಲಕ ಪರೀಕ್ಷೆಗೆ ಹಾಜರಾಗುತ್ತಾರೆ. ಆ ಪರೀಕ್ಷೆಯಲ್ಲಿ ಬಳಿಕ ಕಂಡು ಬರುತ್ತಿರುವ ಅನುತ್ತೀರ್ಣ ಪ್ರಮಾಣವು ಶೇಕಡಾ 47ರಿಂದ ಶೇಕಡಾ 55ರಷ್ಟು ಇದೆ ಎಂದು ಅವರು ವಿವರಿಸಿದರು.

35 Lakh Students Fail-Dropout SSLC, Their Unable To Entry To PUC: Education Ministry Analysis

ಉತ್ತೀರ್ಣ-ಅನುತ್ತೀರ್ಣ ರಾಜ್ಯವಾರು ವಿಶ್ಲೇಷಣೆ

ಎಸ್‌ಎಸ್‌ಎಲ್‌ಸಿ ಬಳಿಕ ಶೈಕ್ಷಣಿಕ ಹಾದಿಯಿಂದ ಮರೆಯಾಗುತ್ತಿದ್ದಾರೆ. ಕೆಲವೇ ಕೆಲವು ವಿದ್ಯಾರ್ಥಿಗಳು ವ್ಯಾಸಂಗ ಮುಂದುವರಿಸುತ್ತಿದ್ದಾರೆ. ಹೀಗೆ ಮರೆಯಾಗುವ ವಿದ್ಯಾರ್ಥಿಗಳ ಸಮೂಹವನ್ನು ಮತ್ತೆ ಶೈಕ್ಷಣಿಕ ಹಾದಿಯತ್ತ ಸೆಳೆಯಬೇಕಿದೆ.

ಶಿಕ್ಷಣ ಸಚಿವಾಲಯವು 10 ಮತ್ತು 12 ನೇ ತರಗತಿಗಳಲ್ಲಿ ಉತ್ತೀರ್ಣರಾಗುವ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳ ರಾಜ್ಯವಾರು ದತ್ತಾಂಶದ ವಿಶ್ಲೇಷಣೆ ಮಾಡಿದೆ. ಅದರಲ್ಲಿ ದೇಶದಲ್ಲಿ 60 ರಾಜ್ಯ ಮಂಡಳಿಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಫಲಿತಾಂಶಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಿನ್ನತೆ ಹೊಂದಿದೆ ಎಂದು ಹೇಳುತ್ತದೆ ಎಂದರು.

ದೇಶದಲ್ಲಿ ಮಧ್ಯದಲ್ಲಿಯೇ ಶಾಲೆ ಬಿಟ್ಟ ಸುಮಾರು 30 ಲಕ್ಷ (85%) ವಿದ್ಯಾರ್ಥಿಗಳ ಸಂಖ್ಯೆ ಇದೆ. ಇಷ್ಟು ಮಂದಿ ಮಕ್ಕಳು 11 ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ, ಹರಿಯಾಣ, ಗುಜರಾತ್, ತಮಿಳುನಾಡು, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿದ್ಯಾರ್ಥಿಗಳಾಗಿದ್ದಾರೆ.

ರಾಜ್ಯವಾರು ನೋಡುವುದಾದರೆ, ಮೇಘಾಲಯದಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಶೇ 57 ರಷ್ಟು ಕಡಿಮೆ, ಮಧ್ಯಪ್ರದೇಶದಲ್ಲಿ ಶೇ.61ರಷ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.62ರಷ್ಟಿದ್ದರೆ, ಪಂಜಾಬ್‌ ನಲ್ಲಿ ಶೇಕಡಾ 97.8 ರಷ್ಟಿದೆ. ಕೇರಳದಲ್ಲಿ ಉತ್ತೀರ್ಣ ಪ್ರಮಾಣ ಶೇಕಡಾ 99.85ರಷ್ಟು ಕಂಡು ಬಂದಿದೆ ಎಂದು ವಿಶ್ಲೇಷಣಾ ವರದಿ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+