ಚೀನಾದಲ್ಲಿ ಕೊರೊನಾ ಭಯದಲ್ಲಿದ್ದ ಭಾರತೀಯರನ್ನು ಕರೆತಂದ ವೈದ್ಯರು

Recommended Video

      Coronavirus : 324 Indians rescued from China | AirAsia | China | India | Rescued

      ನವದೆಹಲಿ, ಫೆಬ್ರವರಿ 1: ಚೀನಾದ ವುಹಾನ್‌ನಲ್ಲಿ ಕೊರೊನಾ ಭಯದಲ್ಲಿದ್ದ 324 ಭಾರತೀಯರನ್ನು ವೈದ್ಯರು ಭಾರತಕ್ಕೆ ಕರೆತಂದಿದ್ದಾರೆ.

      ಚೀನಾದಲ್ಲಿ 324 ಭಾರತೀಯರು ಕೊರೊನಾ ವೈರಸ್​ನಿಂದ ಪ್ರಾಣರಕ್ಷಣೆ ಮಾಡಿಕೊಳ್ಳುವುದಕ್ಕೆ ಕಾಯುತ್ತಿದ್ದರು. ಅವರನ್ನು ಭಾರತಕ್ಕೆ ಕರೆತರಲೆಂದು ಬೋಯಿಂಗ್​ 747 ವಿಮಾನ ರಾಷ್ಟ್ರ ರಾಜಧಾನಿ ದೆಹಲಿಯಿಂದ ತೆರಳಿತ್ತು.

      ಮಾಸ್ಕ್, ಗ್ಲೌಸ್​, ಔಷಧಿಗಳನ್ನು ವಿಮಾನದ ಪ್ರತಿ ಆಸನದಲ್ಲೂ ಇರಿಸಲಾಗಿದ್ದು, ಇಬ್ಬರು ವಿಶೇಷ ವೈದ್ಯರನ್ನು ಸಹ ಜತೆಯಲ್ಲಿ ಕಳುಹಿಸಿಕೊಡಲಾಗುತ್ತಿದೆ. ವುಹಾನ್​ನಲ್ಲಿ ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗಿದೆ. ಒಂದು ವೇಳೆ ಯಾವುದೇ ವ್ಯಕ್ತಿಯಲ್ಲಿ ಕೊರೊನಾ ವೈರಸ್​ ಕಂಡುಬಂದಲ್ಲಿ ಅಂತಹ ವ್ಯಕ್ತಿಯನ್ನು ವಿಮಾನದೊಳಗೆ ಬಿಡಲಾಗುವುದಿಲ್ಲ ಎಂದು ಕೂಡ ಹೇಳಿದ್ದರು.

      324 Indians Are Being Taken Into Haryana Medical Camp

      ಚೀನಾದಲ್ಲಿ ಕೊರೊನಾ ವೈರಸ್​ನಿಂದಾಗಿ ಈಗಾಗಲೇ 200ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. 9,000ಕ್ಕೂ ಹೆಚ್ಚಿನ ಜನರಲ್ಲಿ ವೈರಸ್​ ಕಂಡುಬಂದಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಒಟ್ಟಾರೆಯಾಗಿ 15 ದೇಶಗಳಲ್ಲಿ ಕೊರೊನಾ ವೈರಸ್​ ಪತ್ತೆಯಾಗಿರುವುದು ದಾಖಲಾಗಿದೆ.

      324 Indians Are Being Taken Into Haryana Medical Camp

      ವಿಮಾನ ನಿಲ್ದಾಣದಲ್ಲಿಯೇ ವಿದ್ಯಾರ್ಥಿಗಳನ್ನು ಮೂರು ತಂಡವನ್ನಾಗಿ ಮಾಡಿ ಸ್ಕ್ರೀನಿಂಗ್ ನಡೆಸಲಾಗಿದೆ. ದೆಹಲಿ ಏರ್‌ಪೋರ್ಟ್‌ನಿಂದ ಅವರನ್ನು ನೇರವಾಗಿ ಇಂಡೋ-ಟಿಬೆಟಿಯನ್ ಪೊಲೀಸರು ಹರಿಯಾಣದಲ್ಲಿರುವ ಛಾವ್ಲಾ ವಿಶೇಷ ಕ್ಯಾಂಪ್‌ಗೆ ಬಸ್‌ನಲ್ಲಿ ಕರೆದೊಯ್ದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+