ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಲು ಯತ್ನಿಸಿದ ಮಹಿಳೆ

|
Google Oneindia Kannada News

ತಿರುವನಂತಪುರಂ, ನವೆಂಬರ್ 20 ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯವನ್ನು 10 ರಿಂದ 50 ವರ್ಷದ ಮಹಿಳೆಯರಿಗೆ ಪ್ರವೇಶಿಸಲು ನಿರ್ಬಂದವಿರುವುದು ಗೊತ್ತಿದ್ದರೂ 31 ವರ್ಷದ ಮಹಿಳೆಯೊಬ್ಬರು ಪ್ರವೇಶಿಸುವುದಕ್ಕೆ ಯತ್ನಿಸಿದ್ದಾರೆ.

ಮತ್ತೆ ಶಬರಿಮಲೆ ಸುದ್ದಿ, ಮಹಿಳೆ ಪ್ರವೇಶ ಅರ್ಜಿ ಸಾಂವಿಧಾನಿಕ ಪೀಠಕ್ಕೆಮತ್ತೆ ಶಬರಿಮಲೆ ಸುದ್ದಿ, ಮಹಿಳೆ ಪ್ರವೇಶ ಅರ್ಜಿ ಸಾಂವಿಧಾನಿಕ ಪೀಠಕ್ಕೆ

ಆಂಧ್ರಪ್ರದೇಶ ಮೂಲದ 31 ವರ್ಷದ ಪಾರ್ವತಿ ಎಂಬ ಹೆಸರಿನ ಮಹಿಳೆ ಬೇರೆ ದಾರಿಯಲ್ಲಿ ನೇರವಾಗಿ ಸನ್ನಿಧಾನಕ್ಕೆ ಬಂದಿದ್ದರು. ಮಹಿಳೆಯನ್ನು ದೇವಾಲದ 18 ಮೆಟ್ಟಿಲುಗಳು ಬಳಿ ತಡೆಹಿಡಿಯಲಾಗಿದ್ದು, ವಾಪಸ್ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

31-year-old woman makes unsuccessful attempt to enter Ayyappa temple in Sabarimala

ಮಹಿಳೆ ಜತೆಗೆ ಗಂಡ, ಇಬ್ಬರು ಮಕ್ಕಳು ಮತ್ತು ಗ್ರಾಮದ 11 ಮಂದಿ ಇದ್ದರು. ಪೊಲೀಸರು ಕೂಡಲೇ ಅವರನ್ನು ತಡೆದು ಹಿಂದಕ್ಕೆ ಕಳುಹಿಸಿದರು.

ದೇವಸ್ಥಾನಕ್ಕೆ ನಿರ್ದಿಷ್ಟ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿದೆ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಮಹಿಳೆ ತಿಳಿಸಿದರು ಎಂದು ಪಟ್ಟಣಂತಿಟ್ಟ ಡೆಪ್ಯೂಟಿ ಪೊಲೀಸ್‌ ಕಮೀಷನರ್‌ ಎಸ್‌. ಸತೀಶ್‌ ಬಿನೋ ತಿಳಿಸಿದರು.

ಅಯ್ಯಪ್ಪನನ್ನು ನೈಷ್ಠಿಕ ಬ್ರಹ್ಮಚಾರಿ ಎಂದು ಪರಿಗಣಿಸಲಾಗಿದ್ದು, ಇದರಿಂದ ಅಯ್ಯಪ್ಪ ಸನ್ನಿಧಾನವನ್ನು ಪ್ರವೇಶಿಸಲು 10-50 ವಯಸ್ಸಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

English summary
A 31-year-old woman on Sunday made a vain attempt to enter the famous Lord Ayyappa Temple, where female devotees in the 10-50 years age group are not permitted. The woman, a native of neighbouring Andhra Pradesh, was stopped near 'Pathinettam Padi'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X