ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಪೋಟ: 30 ಸಾವು

Written By:
Subscribe to Oneindia Kannada

ಉತ್ತರಾಖಂಡ, ಜುಲೈ, 01: ಉತ್ತರಾಖಂಡದಲ್ಲಿ ಮೇಘಸ್ಫೋಟವಾಗಿದ್ದು 30 ಮಂದಿ ಸಾವನ್ನಪ್ಪಿದ್ದು, ನೂರಾರು ಜನ ನಾಪತ್ತೆಯಾಗಿದ್ದಾರೆ. ಉತ್ತರಾಖಂಡದ ಛಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಕನ್ನಡಿಗರು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ವರದಿಯಾಗಿಲ್ಲ.

ಮಳೆ ಪರಿಣಾಮ ಪವಿತ್ರ ಗಂಗಾನದಿ ಉಕ್ಕಿ ಹರಿಯುತ್ತಿದೆ. ಪಿಥೋರ್ ಘಡದ ಸುತ್ತಮುತ್ತಲಿನ ಸುಮಾರು 7ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣ ಜಲಾವೃತ್ತವಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ.[ಕಳೆದ ವರ್ಷದ ಭೀಕರ ಮಳೆಯ ಚಿತ್ರಗಳು]

rain

ಕೇದಾರನಾಥ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಗಂಗೋಲ್ ಗಾಂವ್ ಹೆದ್ದಾರಿ ಕೂಡ ಭೂಕುಸಿತದಿಂದ ಸ್ಥಗಿತಗೊಂಡಿದೆ. ಭೂಕುಸಿತದಿಂದ ಜನ ಆತಂಕಕ್ಕೆ ಸಿಲುಕಿದ್ದು ಸೇನೆ ಮತ್ತು ವಿಪತ್ತು ನಿರ್ವಹಣಾ ದಳ ಪರಿಹಾರ ಕಾರ್ಯ ಕೈಗೆತ್ತಿಕೊಂಡಿವೆ.[ಉತ್ತರಾಖಂಡ ಕಾಡ್ಗಿಚ್ಚಿಗೆ ಮೂಲ ಕಾರಣ ಯಾರು?]

ಕಳೆದ ತಿಂಗಳಷ್ಟೇ ಉತ್ತರಾಖಂಡದಲ್ಲಿ ಮೇಘಸ್ಫೋಟವಾಗಿ ಪವಿತ್ರ ಯಾತ್ರಾ ಸ್ಥಳಗಳ ಮಾರ್ಗ ಸ್ಥಗಿತವಾಗಿತ್ತು. ಇದೀಗ ಮತ್ತೆ ಛಮೋಲಿಯಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, ಮತ್ತೆ ಯಾತ್ರೆಗೆ ಅಡ್ಡಿಯುಂಟಾಗಿದೆ.

ಅಮರನಾಥ ಯಾತ್ರೆ ಆರಂಭ
ಜುಲೈ 2 ಶನಿವಾರರಿಂದ ಜಮ್ಮು-ಕಾಶ್ಮೀರದಲ್ಲಿ ಅಮರನಾಥ್ ಯಾತ್ರೆ ಪ್ರಾರಂಭವಾಗಲಿದ್ದು, 1,138 ಯಾತ್ರಾರ್ಥಿಗಳ ಮೊದಲ ತಂಡ ಹೊರಟಿದೆ. ಅಮರನಾಥ ಯಾತ್ರೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜುಲೈ2 ರಂದು ಅಮರನಾಥ ಗುಹೆಯಲ್ಲಿ ಶಿವನ ಲಿಂಗದ ದರ್ಶನ ಪಡೆಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Atleast 30 persons were killed and many were missing as heavy rain continued to wreak havoc in areas in Uttarakhand's Pithoragarh and Chamoli districts.Heavy rains triggered landslides and flash floods leading to people getting buried under the debris in their sleep.
Please Wait while comments are loading...