ಅಸ್ಸಾಮಿನಲ್ಲಿ ಸ್ಫೋಟ, ಮೂವರು ಯೋಧರ ಸಾವು

ದಿಗ್ಬಾಯ್(ಅಸ್ಸಾಂ), ನವೆಂಬರ್ 19: ಅಸ್ಸಾಮಿನ ತಿನ್ಸುಕಿಯಾ ಜಿಲ್ಲೆಯ ದಿಗ್ಬಾಯ್ ನಲ್ಲಿ ಸ್ಫೋಟವೊಂದು ನಡೆದಿದ್ದು ಮೂರು ಜನ ಯೋಧರು ಹತರಾಗಿದ್ದು, ನಾಲ್ಕು ಜನ ಗಾಯಗೊಂಡಿದ್ದಾರೆ.

ಈ ಘಟನೆಯು ಪೆಂಜರಿ ಎರಿಯಾದಲ್ಲಿ ಬೆಳಗಿನ ಜಾವ 5.30ರಲ್ಲಿ ಸಂಭವಿಸಿದ್ದು ಸೇನಾ ವಾಹನದಲ್ಲಿದ್ದ ಯೋಧರು ಸಾವಿಗೀಡಾಗಿರುವುದಾಗಿ ಲೆಪ್ಟಿನೆಂಟ್ ಕರ್ನಲ್ ಸುನಿತ್ ನ್ಯೂಟನ್ ತಿಳಿಸಿದ್ದಾರೆ.[ಆತ್ಮಹತ್ಯೆ ಮಾಡಿಕೊಂಡ ಯೋಧನ ಕುಟುಂಬಕ್ಕೆ ಕೇಜ್ರಿವಾಲ್ 1 ಕೋಟಿ ಪರಿಹಾರ]

assam

ಭಯೋತ್ಪಾದಕರು ರೋಡಿನಲ್ಲಿ ಬಾಂಬನ್ನು ಸಿಡಿಸಲು ಪ್ಲಾನ್ ಮಾಡಿದ್ದು, ಐಇಡಿ ಡಿವೈಸ್ ಮುಂಚಿತವೇ ಸಿಡಿದಿದೆ. ಹೀಗಾಗಿ ಭಯೋತ್ಪಾದಕರು ಮಾಡಿಕೊಂಡಿದ್ದ ಎಲ್ಲ ಪ್ಲಾನ್ ತಳಕೆಳಕಾಗಿದೆ ಎಂದು ನ್ಯೂಟನ್ ತಿಳಿಸಿದ್ದಾರೆ.

ಅವರು ಭದ್ರತಾ ದಳದ ಮೇಲೆ ಹಲ್ಲೆ ನಡೆಸಲು ಈ ಕೃತ್ಯ ಎಸಗಿದ್ದು ಇದಕ್ಕೆ ಸಂಬಂಧಿಸಿದಂತೆ 3 ಯೋಧರು ಮೃತಪಟ್ಟಿದ್ದಾರೆ. ಹಾಗೂ ನಾಲ್ವರನ್ನು ಚಿಕಿತ್ಸೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. [ದೇಶಕ್ಕಾಗಿ ಪ್ರಾಣತೆತ್ತ ಕೊಡವ ಯೋಧರೆಷ್ಟು ಗೊತ್ತಾ?]

ಗೃಹ ಸಚಿವ ರಾಜ್ ನಾಥ್ ಸಿಂಗ್ ಮೃತರಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಸ್ಪೋಟಕ್ಕೆ ಸಂಬಂಧಿಸಿದಂತೆ ಅಗತ್ಯಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+