ಮಹಾರಾಷ್ಟ್ರ: ಕಾರನ್ನೇ ಛಿದ್ರಗೊಳಿಸಿದ ಭೀಕರ ಅಪಘಾತಕ್ಕೆ 3 ಬಲಿ
ಪಲ್ಘರ್(ಮಹಾರಾಷ್ಟ್ರ), ಆಗಸ್ಟ್ 19: ಮುಂಬೈ-ಅಹ್ಮದಾಬಾದ್ ಹೆದ್ದಾರಿಯಲ್ಲಿ ಇಂದು(ಆಗಸ್ಟ್ 19) ನಡೆದ ಭೀಕರ ಅಪಘಾತದಲ್ಲಿ ಮೂರು ಜನ ಮೃತರಾಗಿದ್ದಾರೆ.
ಕಾರು ಮತ್ತು ಲಾರಿಯ ನಡುವೆ ನಡೆದ ಘರ್ಷಣೆಯಲ್ಲಿ ಕಾರು ಛಿದ್ರವಾಗಿರುವುದನ್ನು ನೋಡಿದರೆ ಅಪಘಾತದ ಭೀಕರತೆ ಅರಿವಾಗುವಂತಿದೆ. ಕಾರಿನ ಮೇಲ್ಭಾಗ ಪೂರ್ತಿ ಛಿದ್ರವಾಗಿದ್ದು, ಕಾರಿನಲ್ಲಿದ್ದ ಮೂವರೂ ಸ್ಥಳದಲ್ಲೇ ಮೃತರಾಗಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications