Breaking: ಬಂಗಾಳದಲ್ಲಿ ಕಂಬಳಿ ವಿತರಣೆ ಕಾರ್ಯಕ್ರಮದಲ್ಲಿ ಕಾಲ್ತುಳಿತ, 3 ಮಂದಿ ಸಾವು

ಕೋಲ್ಕತ್ತಾ, ಡಿಸೆಂಬರ್ 14: ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯಲ್ಲಿ ಬುಧವಾರ ಸಂಜೆ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಭಾಗವಹಿಸಿದ್ದ ಕಂಬಳಿ ವಿತರಣಾ ಕಾರ್ಯಕ್ರಮದಲ್ಲಿ ಜನದಟ್ಟಣೆಯಿಂದ ಉಂಟಾದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.

ಸುವೆಂದು ಅಧಿಕಾರಿ ಭಾಷಣ ಮುಗಿಸಿ ಸ್ಥಳದಿಂದ ನಿರ್ಗಮಿಸಿದ ಕೆಲವೇ ನಿಮಿಷಗಳಲ್ಲಿ ಈ ಘಟನೆ ನಡೆದಿದೆ. ಈ ಕಾರ್ಯಕ್ರಮವನ್ನು ಮಾಜಿ ಅಸನ್ಸೋಲ್ ಮೇಯರ್ ಮತ್ತು ಬಿಜೆಪಿ ನಾಯಕ ಜಿತೇಂದ್ರ ತಿವಾರಿ ಆಯೋಜಿಸಿದ್ದರು. ಸುವೆಂದು ಅಧಿಕಾರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಜೆ ಹೊತ್ತಿನಲ್ಲಿ ನಡೆದ ಕಾಲ್ತುಳಿತದಲ್ಲಿ ಐದಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಅಸನ್ಸೋಲ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

3 killed in stampede at Suvendu Adhikaris blanket distribution event at West Bengals Burdwan

ಕಾರ್ಯಕ್ರಮಕ್ಕೆ ಅನುಮತಿ ಪಡೆದಿರಲಿಲ್ಲ ಬಿಜೆಪಿ:

ಬಿಜೆಪಿಯು ಈ ಕಾರ್ಯಕ್ರಮಕ್ಕೆ ಅನುಮತಿ ಪಡೆದಿರಲಿಲ್ಲ ಎಂದು ಅಸನ್ಸೋಲ್ ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ಅನುಮತಿಯಿಲ್ಲದೆ ಮೆರವಣಿಗೆಯನ್ನು ಆಯೋಜಿಸಿದ್ದಕ್ಕಾಗಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸುವೆಂದು ಅಧಿಕಾರಿಯನ್ನು ದೂಷಿಸಲಾಗಿದೆ.

''ಇದೊಂದು ಅತ್ಯಂತ ದುರದೃಷ್ಟಕರ ಘಟನೆ... ಕಾರ್ಯಕ್ರಮಕ್ಕೆ ಸುವೆಂದು ಅಧಿಕಾರಿ ಅನುಮತಿ ಪಡೆದಿಲ್ಲ. ಕಂಬಳಿ ವಿತರಣೆಯ ಹೆಸರಿನಲ್ಲಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆಸಿಕೊಂಡಿದ್ದರು. ಒಟ್ಟಾರೆ ಸಮನ್ವಯದ ಕೊರತೆಯ ಜೊತೆಗೆ ಸುವೆಂದು ಅಧಿಕಾರಿ ಬಡವರ ಬದುಕಿನೊಂದಿಗೆ ಆಟವಾಡಿದ್ದಾರೆ. ಯಾವುದೇ ನೈತಿಕ ಹೊಣೆಗಾರಿಕೆ ಇಲ್ಲದೇ ರಾಜಕೀಯ ಮಾಡುತ್ತಿದ್ದಾರೆ," ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಆರೋಪಿಸಿದ್ದಾರೆ.

"ಬಿಜೆಪಿ ನಾಯಕರಿಗೆ ಅವರು ತಮ್ಮ ಪಕ್ಷದ ಆಡಳಿತವನ್ನು ಹುಚ್ಚನಿಗೆ ನೀಡುತ್ತಿರುವುದನ್ನು ಹೇಳಲು ಬಯಸುತ್ತೇನೆ? ಸುವೆಂದು ಕ್ಷಮೆಯಾಚಿಸಬೇಕು. ಅವರನ್ನು ಏಕೆ ಹೊಣೆಗಾರರನ್ನಾಗಿ ಮಾಡಬಾರದು?" ಎಂದು ಕುನಾಲ್ ಘೋಷ್ ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+