ಛತ್ತೀಸ್ ಗಢದಲ್ಲಿ ಮರುಕಳಿಸುತ್ತಿದೆ ಗೋರಖ್ ಪುರ ದುರಂತ

Posted By:
Subscribe to Oneindia Kannada

ರಾಯಪುರ, ಆಗಸ್ಟ್ 21: ಎನ್ಸೆಫಾಲಿಟಿಸ್ ಎಂಬ ರೋಗ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ 105 ಮಕ್ಕಳನ್ನು ಬಲಿತೆಗೆದುಕೊಂಡಿದ್ದಾಯ್ತು. ಈ ರೋಗದಿಂದ ಬಳಲುತ್ತಿದ್ದ ಮಕ್ಕಳಿಗೆ ಆಮ್ಲಜನಕದ ಪೂರೈಕೆ ಸರಿಯಾಗಿ ಆಗಿಲ್ಲವೆಂಬ ದೂರು ಕೇಳಿಬಂದಿತ್ತು.

ಗೋರಖ್ ಪುರ ಆಸ್ಪತ್ರೆಯಲ್ಲಿ ಮತ್ತೆ 9ಮಕ್ಕಳ ಸಾವು

ಆದರೆ ಇದೀಗ ಛತ್ತೀಸ್ ಗಢದಲ್ಲೂ ಮೂವರು ಮಕ್ಕಳು ಆಮ್ಲಜನಕದ ಕೊರತೆಯಿಂದ ನಿನ್ನೆ(ಆಗಸ್ಟ್ 20) ಅಸುನೀಗಿದ್ದು ಮತ್ತಷ್ಟು ಆತಂಕ ಸೃಷ್ಟಿಸಿದೆ.

3 children died on Aug 20th after an alleged drop in oxygen pressure in Chhattishgarh

ಛತ್ತೀಸ್ ಗಢದ ರಾಯಪುರದ ಡಾ.ಭೀಮರಾವ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಸಿಬ್ಬಂದಿಯೊಬ್ಬ ಮದ್ಯಪಾನ ಮಾಡಿಬಂದು ಆಕ್ಸಿಜನ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದರಿಂದ ಮೆದುಳು ಜ್ವರದಿಂದ ಬಳಲುತ್ತಿದ್ದ ಮೂವರು ಮಕ್ಕಳು ಅಸುನೀಗಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ರವಿಚಂದ್ರನನ್ನು ಬಂಧಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ರಂಣ್ ಸಿಂಗ್ ಆದೇಶಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
3 children died on Aug 20th after an alleged drop in oxygen pressure to one of the hospitals in Chattisgarh. This incident took pkace after 105 children died by the same problem in Gorakhpur, Uttar Pradesh in a week.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ