ಇದು ನ್ಯಾಯಯುತ ತೀರ್ಪಲ್ಲ: ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ಡಿಸೆಂಬರ್ 21: 'ಇಂದಿನ ತೀರ್ಪು ನಿಜಕ್ಕೂ ನ್ಯಾಯಯುತವಾಗಿಲ್ಲ. ಈ ಕುರಿತು ಉಚ್ಚ ನ್ಯಾಯಾಲಯಕ್ಕೆ ಮೊರೆಹೋಗಬೇಕಿದೆ' ಎಂದು ಬಿಜೆಪಿ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಹೇಳಿದರು.
2ಜಿ ಸ್ಪೆಕ್ಟ್ರಂ ತೀರ್ಪು ಹೊರಬೀಳುತ್ತಿದ್ದಂತೆಯೇ ನವದೆಹಲಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು, ಈ ಪ್ರಕರಣ ಹಳಿ ತಪ್ಪಿದೆ, ಆದರೆ ಅದನ್ನು ಮತ್ತೆ ಹಳಿಗೆ ತರಬಹುದು, ಆದರೆ ನಮಗೆ 'ಚಮಚಾಗಿರಿ' ಮಾಡದ ಪ್ರಾಮಾಣಿಕ ಕಾನೂನು ಅಧಿಕಾರಿಗಳು ಮತ್ತ ವಕೀಲರು ಸಿಗಬೇಕಿದೆ' ಎಂದು ಅವರು ವಿಷಾದದಿಂದ ನುಡಿದರು.

ಇದು ಯಾವುದೇ ಕಾರಣಕ್ಕೂ ಹಿನ್ನಡೆಯಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕೆ ಕಾನೂನು ಅಧಿಕಾರಿಗಳು ಗಂಭೀರವಾಗಿರಲಿಲ್ಲ. ಇದರಿಂದ ಪ್ರಧಾನಿಯವರು ಪಾಠ ಕಲಿತಿದ್ದಾರೆ ಎಂದು ಸಹ ಇದೇ ಸಂದರ್ಭದಲ್ಲಿ ಅವರು ಹೇಳಿದರು.
2ಜಿ ಸ್ಪೆಕ್ಟ್ರಂ ಹಗರಣದಲ್ಲಿ ವಿಶೇಷ ಆಸ್ಥೆ ವಹಿಸಿದ್ದ ಸುಬ್ರಮಣಿಯನ್ ಸ್ವಾಮಿ ಈ ಹಗರಣದಲ್ಲಿ ಆಗಿನ ಕೇಂದ್ರ ವಿತ್ತ ಸಚಿವ ಪಿಚಿದಂಬರಂ ಅವರ ಕೈವಾಡವೂ ಇದೆ ಎಂದು ಶಂಕಿಸಿ, ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದರು. ಆದರೆ ಸುಪ್ರೀಂ ಕೋರ್ಟ್ ಈ ಆರೋಪವನ್ನು ತಿರಸ್ಕರಿಸಿತ್ತು.
2008 ರಲ್ಲಿ ನಡೆದ 2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಇಂದು(ಡಿ.21) ತೀರ್ಪು ನೀಡಿದ ದೆಹಲಿಯ ವಿಶೇಷ ನ್ಯಾಯಾಲಯ 17 ಆರೋಪಿಗಳನ್ನೂ ದೋಷಮುಕ್ತರೆಂದು ಘೋಷಿಸಿದೆ.












Click it and Unblock the Notifications