ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲಿನ್ಯದಿಂದ ಭಾರತದಲ್ಲಿ ಒಂದೇ ವರ್ಷದಲ್ಲಿ 25 ಲಕ್ಷ ಜನ ಬಲಿ!

|
Google Oneindia Kannada News

ನವದೆಹಲಿ, ಅಕ್ಟೋಬರ್ 21 : ವಿಶ್ವದ ಯಾವುದೇ ದೇಶದಲ್ಲಿ ಸಂಭವಿಸಿದ ಆಘಾತಕಾರಿ ಸುದ್ದಿಯೊಂದನ್ನು ಸಾರ್ವಜನಿಕ ಆರೋಗ್ಯದ ಜಾಗತಿಕ ಸಮಿತಿ ಹೊರಹಾಕಿದೆ.

ಭಾರತದಲ್ಲಿ 2015 ಇದೊಂದೆ ವರ್ಷದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಜನರು ಮಾಲಿನ್ಯದಿಂದಾಗಿ ಅಸುನೀಗಿದ್ದಾರೆ ಎಂದು ಸಾರ್ವಜನಿಕ ಆರೋಗ್ಯದ ಜಾಗತಿಕ ಸಮಿತಿಯೊಂದು ಹೇಳಿದೆ.

25 ಲಕ್ಷ ಸಾವನ್ನಪ್ಪಿದ ಜನರ ಪೈಕಿ ಸುಮಾರು 18 ಲಕ್ಷ ಸಾವುಗಳು ವಾಯು ಮಾಲಿನ್ಯದಿಂದಲೇ ಸಂಭವಿಸಿವೆ ಎಂದು ಭಾರತೀಯರೂ ಇದ್ದ ಈ ಸಮಿತಿಯ ಅಧ್ಯಯನದ ವರದಿಯಲ್ಲಿ ತಿಳಿಸಿದೆ.

ಏಡ್ಸ್, ಮಲೇರಿಯಾ, ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಂದ ಈ ಸಾವು ಸಂಭವಿಸಿವೆ. ದೇಶದ 75 ಸ್ಥಳಗಳಲ್ಲಿ ಕ್ಷೇತ್ರಕಾರ್ಯ ನಡೆಸಿ ಮತ್ತು ದತ್ತಾಂಶಗಳನ್ನು ಕಲೆ ಹಾಕಿ ನವದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ಅಮೆರಿಕದ ಐಕಾನ್ ಸ್ಕೂಲ್‌ ಆಫ್‌ ಮೆಡಿಸಿನ್‌ ಸಂಸ್ಥೆಗಳು ಜಂಟಿಯಾಗಿ ಈ ಅಧ್ಯಯನ ನಡೆಸಿವೆ.

ಭಾರತದ ಪ್ರತಿ ಮೂರು ಮನೆಗಳಲ್ಲಿ ಈಗಲೂ ಸೌದೆ-ಬೆರಣಿಯ ಒಲೆಗಳನ್ನು ನೀರು ಖಾಯಿಸಲು ಮತ್ತು ಅಡುಗೆ ಮಾಡಲು ಬಳಸಲಾಗುತ್ತದೆ. ಭಾರತದಲ್ಲಿನ ವಾಯು ಮಾಲಿನ್ಯಕ್ಕೆ ಈ ಒಲೆಗಳ ಕೊಡುಗೆ ಶೇ 50ರವರೆಗೂ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ 17 ಸ್ಥಳಗಳು

ಕರ್ನಾಟಕದ 17 ಸ್ಥಳಗಳು

ಅಧ್ಯಯನ ನಡೆಸಿದ 75 ಸ್ಥಳಗಳ ಪೈಕಿ ಕರ್ನಾಟಕದ 17 ಸ್ಥಳಗಳು ಸೇರಿವೆ. ಈ ಸ್ಥಳಗಳಲ್ಲಿನ ಗಾಳಿ ಮತ್ತು ನೀರಿನಲ್ಲಿನ ಮಾಲಿನ್ಯಕಾರಕ ಅಂಶಗಳನ್ನು ಪತ್ತೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

4 ಸಾವುಗಳಲ್ಲಿ 1 ಮಾಲಿನ್ಯದಿಂದ ಬಲಿ

4 ಸಾವುಗಳಲ್ಲಿ 1 ಮಾಲಿನ್ಯದಿಂದ ಬಲಿ

ಮಾಲಿನ್ಯದ ಕಾರಣಕ್ಕೆ ಚೀನಾದಲ್ಲಿ 2015ರಲ್ಲಿ 18 ಲಕ್ಷ ಜನ ಮೃತಪಟ್ಟಿದ್ದಾರೆ. ಭಾರತ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ, ಮಡಗಾಸ್ಕರ್‌ ಮತ್ತು ಕೀನ್ಯಗಳಲ್ಲಿ ಸಂಭವಿಸುವ ಪ್ರತಿ ನಾಲ್ಕು ಸಾವುಗಳಲ್ಲಿ ಒಂದು ಸಾವಿಗೆ ಮಾಲಿನ್ಯ ಕಾರಣವಾಗಿರುತ್ತದೆ. ಈ ದೇಶಗಳಲ್ಲಿ ಮಾಲಿನ್ಯಕ್ಕೆ ಬಲಿಯಾಗುವವರಲ್ಲಿ ಬಡವರ ಪ್ರಮಾಣವೇ ಹೆಚ್ಚು. ಇವರು ನೀರು, ಗಾಳಿ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಸೇವಿಸುತ್ತಾರೆ ಎಂಬುದು ಅಧ್ಯಯನದ ವೇಳೆ ಪತ್ತೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಯಾವ ಮಾಲಿನ್ಯದಿಂದ ಸಾವು?

ಯಾವ ಮಾಲಿನ್ಯದಿಂದ ಸಾವು?

25 ಲಕ್ಷ ಸಾವುಗಳ ಪೈಕಿ ವಾಯು ಮಾಲಿನ್ಯದಿಂದ 18 ಲಕ್ಷ ಸಾವು, ಜಲ ಮಾಲಿನ್ಯದಿಂದ 6.46 ಲಕ್ಷ, ಪರೋಕ್ಷ ಧೂಮಪಾನ ಮತ್ತು ಸೀಸದ ಸಂಪರ್ಕದಿಂದ 1.68 ಲಕ್ಷ ಸಾವುಗಳು ಸಂಭವಿಸಿವೆ.

ಸಾವಿಗೆ ಕಾರಣಗಳು

ಸಾವಿಗೆ ಕಾರಣಗಳು

* ವಾತಾವರಣಕ್ಕೆ ದೂಳು ಮತ್ತು ಹೊಗೆ ಬಿಡುಗಡೆ ಆಗುವ ಪ್ರಮಾಣ ಭಾರತದಲ್ಲಿ ಅತಿ ಹೆಚ್ಚು
* ಒಟ್ಟು ವಾಯು ಮಾಲಿನ್ಯದ ಶೇ 25-50ರಷ್ಟಕ್ಕೆ ಮನೆಗಳಲ್ಲಿ ಬಳಸುವ ಉರುವಲಿನ ಹೊಗೆ ಕಾರಣ.
* ಮಾಲಿನ್ಯದಿಂದ ಬಡವರಿಗೆ ಹೆಚ್ಚು ತೊಂದರೆ. ಮಲಿನ ಗಾಳಿ, ನೀರು, ಮಲಿನಗೊಂಡ ಕೆಲಸದ ಸ್ಥಳಗಳು ಇದಕ್ಕೆ ಕಾರಣ
* ಬಡಜನರ ಮನೆಗಳ ಸುತ್ತ ಮುತ್ತಲೂ ಮಾಲಿನ್ಯಕಾರಕ ಅಂಶಗಳು ಇರುತ್ತವೆ.

English summary
Of the 90 lakh people who died due to pollution-related diseases in 2015, 25 lakh deaths were recorded in India, the highest in any country. According to an international study published in The Lancet, pollution caused three times more deaths than AIDS, malaria and tuberculosis put together in 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X