3 ರೂಪಾಯಿ ಚಿಲ್ಲರೆ ಕೊಡದ ಜೆರಾಕ್ಸ್ ಅಂಗಡಿ ಮಾಲೀಕನಿಗೆ ಬಿತ್ತು 25,000 ದಂಡ!
ಬೆಂಗಳೂರು, ಅಕ್ಟೋಬರ್ 05: ಅಂಗಡಿಗೆ ಬಂದಿದ್ದ ಗ್ರಾಹಕರೊಬ್ಬರಿಗೆ ಬರೀ 3 ರೂಪಾಯಿ ಚಿಲ್ಲರೆ ನೀಡಲು ನಿರಾಕರಿಸಿದ ಅಂಗಡಿ ಮಾಲೀಕರೊಬ್ಬರಿಗೆ ಬರೋಬ್ಬರಿ 25,000 ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಹೀಗೆ ಗ್ರಾಹಕರಿಗೆ 3 ರೂಪಾಯಿ ವಂಚಿಸಲು ಮುಂದಾದ ಮಾಲೀಕನಿಗೆ ತಕ್ಕ ಶಾಸ್ತಿಯಾಗಿದೆ.
ಒಡಿಶಾದ ಸಂಬಲ್‌ಪುರದ ಜೆರಾಕ್ಸ್ ಅಂಗಡಿಯ ಮಾಲೀಕರೊಬ್ಬರಿಗೆ 3 ರೂಪಾಯಿಗಳನ್ನು ಗ್ರಾಹಕರಿಗೆ ಹಿಂದಿರುಗಿಸಲು ನಿರಾಕರಿಸಿದ್ದಕ್ಕಾಗಿ 25,000 ರೂಪಾಯಿಗಳ ದಂಡವನ್ನು ಪಾವತಿಸಲು ಆದೇಶಿಸಲಾಗಿದೆ. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶದ ಪ್ರಕಾರ, ಅಂಗಡಿ ಮಾಲೀಕನ ವಿರುದ್ಧ ದೂರು ಕೊಟ್ಟವರಿಗೆ ಈ ಮೊತ್ತವು ವಾರ್ಷಿಕ 9% ಬಡ್ಡಿಯೊಂದಿಗೆ ಸಿಗುತ್ತದೆ.

ಸಂಬಲ್ಪುರ ಜಿಲ್ಲೆಯ ಬುಧರಾಜ ಪ್ರದೇಶದ ಪತ್ರಕರ್ತ ಪ್ರಫುಲ್ಲ ಕುರಾರ್ ದಾಸ್ ಅವರು 2023 ರ ಏಪ್ರಿಲ್ 28 ರಂದು ದಾಖಲೆಯ ಜೆರಾಕ್ಸ್ ಪ್ರತಿಯನ್ನು ಪಡೆಯಲು ಅಂಗಡಿಗೆ ಹೋಗಿದ್ದರು. ಪ್ರಫುಲ್ಲ ಕುರಾರ್ ದಾಸ್ ಅವರು 5 ರೂಪಾಯಿಗಳನ್ನು ನೀಡಿ 3 ರೂಪಾಯಿಗಳನ್ನು ಹಿಂದಿರುಗಿಸುವಂತೆ ಅಂಗಡಿಯವರಿಗೆ ತಿಳಿಸಿದ್ದರು. ಜೆರಾಕ್ಸ್ ಪ್ರತಿಯ ದರ 2 ರೂ. ಆದರೆ, ಅಂಗಡಿಯ ಮಾಲೀಕರು ಹಣವನ್ನು ಹಿಂದಿರುಗಿಸಲು ನಿರಾಕರಿಸಿದಲ್ಲದೆ ದೂರುದಾರರನ್ನು ನಿಂದಿಸಿದನು.
ಪದೇ ಪದೇ ಮನವಿ ಮಾಡಿಕೊಂಡ ನಂತರವೂ ಅಂಗಡಿಯವನು ಹಣವನ್ನು ಭಿಕ್ಷುಕನಿಗೆ ದಾನ ಮಾಡು ಎಂದು ಹೇಳಿ ದಾಸ್‌ಗೆ 5 ರೂಪಾಯಿನ್ನು ಹಿಂದಿರುಗಿಸಿದನು. ಅಂಗಡಿಯವನು ಯಾವುದೇ ರಸೀದಿ ಅಥವಾ ಬಿಲ್ ನೀಡಲಿಲ್ಲ, ಇದು ಅಕ್ರಮ ವ್ಯಾಪಾರ ಕ್ರಮವಾಗಿದ್ದು, ಇದರಿಂದಾಗಿ ಆರ್ಥಿಕ ನಷ್ಟದ ಹೊರತಾಗಿ ಸಾಕಷ್ಟು ಮಾನಸಿಕ ಸಂಕಟ, ಕಿರುಕುಳ ಅನುಭವಿಸಿದನು. ಬಳಿಕ ದಾಸ್ ಗ್ರಾಹಕ ನ್ಯಾಯಲಯದ ಮೆಟ್ಟಿಲೇರಿದನು.
ಇದು ಕೇವಲ ವೈಯಕ್ತಿಕ ಪ್ರಕರಣವಲ್ಲ. ಇದು ಎಲ್ಲಾ ಗ್ರಾಹಕರ ಹಕ್ಕುಗಳ ಪರವಾಗಿ ನನಗೆ ಅವಮಾನವಾಗಿದೆ. ಆದ್ದರಿಂದ ನಾನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದೆನು. ನ್ಯಾಯಾಲಯದ ಮಧ್ಯಸ್ಥಿಕೆಯಿಂದ ನ್ಯಾಯವನ್ನು ಪಡೆದುಕೊಂಡಿದ್ದೇನೆ ಎಂದು ದಾಸ್ ಹೇಳಿದರು.












Click it and Unblock the Notifications