2019ರ ಮಾರ್ಚ್ ವೇಳೆಗೆ ದೇಶದ ಎಲ್ಲ ಮನೆಗಳಿಗೆ 24 ಗಂಟೆ ವಿದ್ಯುತ್

2019ರ ಮಾರ್ಚ್ ವೇಳೆಗೆ ದೇಶದ ಎಲ್ಲ ಮನೆಗಳಿಗೆ ವರ್ಷದ ಎಲ್ಲ ದಿನವೂ ನಿರಂತರ 24 ಗಂಟೆ ವಿದ್ಯುತ್ ಪೂರೈಸಲಾಗುವುದು ಎಂದು ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ.ಸಿಂಗ್ ಗುರುವಾರ ಹೇಳಿದ್ದಾರೆ. 2018ರ ಡಿಸೆಂಬರ್ ಹೊತ್ತಿಗೆ ಬಾಕಿ ಇರುವ 1694 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಶ್ರಮಿಸಲಾಗುವುದು ಎಂದರು.

ಎಲ್ಲ ಮನೆಗಳಿಗೆ 2019ರ ಮಾರ್ಚ್ ವೇಳೆಗೆ ದೇಶದ ಎಲ್ಲ ಮನೆಗಳಿಗೆ ದಿನದ ಇಪ್ಪತ್ನಾಲ್ಕು ಗಂಟೆ ವಿದ್ಯುತ್ ಪೂರೈಸಲಾಗುವುದು ಎಂದು ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದರು. 2019ರ ಮಾರ್ಚ್ ನಂತರ ತಾಂತ್ರಿಕ ಸಮಸ್ಯೆಗಳನ್ನು ಹೊರತುಪಡಿಸಿ, ನಿರಂತರ ವಿದ್ಯುತ್ ಪೂರೈಸಲು ವಿಫಲವಾಗುವ ಡಿಸ್ಕಾಂಗಳಿಗೆ ದಂಡ ವಿಧಿಸಬಹುದು ಎಂಬ ಕಾನೂನು ತರುತ್ತೇವೆ ಎಂದು ತಿಳಿಸಿದರು.

24 hour power for all by March 2019, says union government

ವಿದ್ಯುತ್ ಉತ್ಪಾದನೆ ಹಾಗೂ ವಿತರಣೆಯಲ್ಲಿ ಆಗುವ ನಷ್ಟವನ್ನು ತಪ್ಪಿಸುವ ಗುರಿ ಹೊಂದಿದ್ದೇವೆ. ಸದ್ಯಕ್ಕೆ ಶೇ ಇಪ್ಪತ್ತೊಂದರಷ್ಟು ನಷ್ಟ ಕಂಡುಬರುತ್ತಿದೆ. 2019ರ ಜನವರಿ ವೇಳೆಗೆ ಆ ಪ್ರಮಾಣವನ್ನು ಶೇ ಹದಿನೈದಕ್ಕೆ ಇಳಿಸುವ ಗುರಿ ಇದೆ. ದೇಶದಲ್ಲಿ ವಿದ್ಯುತ್ ಮೂಲಸೌಕರ್ಯದ ಪ್ರಗತಿಗಾಗಿ 1,75,000 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+