ಸಾಧ್ವಿ ಮನೆಯಲ್ಲಿ ಸಿಕ್ಕಿದ್ದು 24 ಗೋಲ್ಡ್ ಬಿಸ್ಕೆಟ್, ಕೋಟಿ ನಗದು

Subscribe to Oneindia Kannada

ಗುಜರಾತ್, ಜನವರಿ 27: ಗುಜರಾತಿನ ಧಾರ್ಮಿಕ ನಾಯಕಿ ಸಾಧ್ವಿ ಮನೆಯಲ್ಲಿ 24ಕ್ಕೂ ಹೆಚ್ಚು ಚಿನ್ನದ ಬಿಸ್ಕೆಟ್ಗಳು ಮತ್ತು 2000 ರೂಪಾಯಿ ಮುಖಬೆಲೆಯ ಕೋಟಿಗೂ ಹೆಚ್ಚು ಹಣವನ್ನು ವಶಕ್ಕೆ ಪಡೆಯಲಾಗಿದೆ.

ಸಾಧ್ವಿ ಜೈ ಶ್ರೀ ಗಿರಿ ಹೆಸರಿನಿಂದ ಗುರುತಿಸಿಕೊಳ್ಳುವ ಈಕೆ ಗುಜರಾತಿನ ಬನಸ್ಕಾಂತ ಪ್ರದೇಶದಲ್ಲಿ ದೇವಸ್ಥಾನವೊಂದನ್ನು ನಡೆಸುತ್ತಾಳೆ ಎಂದು ತಿಳಿದು ಬಂದಿದೆ. ಈಕೆ ನವೆಂಬರಿನಲ್ಲಿ ಸುಮಾರು 5 ಕೋಟಿ ಬೆಲೆಬಾಳುವ ಚಿನ್ನದ ಬಿಸ್ಕೆಟ್ಟುಗಳನ್ನು ಸ್ಥಳೀಯ ಜುವೆಲ್ಲರಿ ಒಂದರಿಂದ ಖರೀದಿಸಿ ಹಣ ಪಾವತಿ ಮಾಡಿರಲಿಲ್ಲ. ಈ ಸಂಬಂಧ ಈಕೆಯನ್ನು ಗುರುವಾರ ಬಂಧಿಸಲಾಗಿತ್ತು. ಬಂಧಿಸುವ ವೇಳೆ ಮನೆ ತಪಾಸಣೆ ಮಾಡಿದಾಗ ಈ ದೊಡ್ಡ ಮೊತ್ತದ ಹಣ ಮತ್ತು ಚಿನ್ನದ ಬಿಸಕೆಟ್ಟುಗಳು ಪತ್ತೆಯಾಗಿವೆ.[ಶೀಘ್ರದಲ್ಲೇ 2000 ನೋಟು ರದ್ದು ಸಾಧ್ಯತೆ!]

24 Gold Bars And More Than Crores of New Notes Recovered From Sadhwi’s Home

ಬಿಸ್ಕೆಟ್ಟುಗಳ ಬೆಲೆ 80 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಇನ್ನು 1.29 ಕೋಟಿ ಮೊತ್ತದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಹೆಚ್ಚಿನ ಹಣ ಹೊಸ 2,000 ರೂಪಾಯಿ ಮುಖಬೆಲೆಯದ್ದಾಗಿದೆ. ವಿಚಿತ್ರ ಎಂದರೆ ಗುಜರಾತಿನಲ್ಲಿ ಮದ್ಯ ಮಾರಾಟ ನಿಷೇಧ ಇದ್ದೂ ಈಕೆಯ ಮನೆಯಲ್ಲಿ ಮದ್ಯದ ಬಾಟಲಿಗಳೂ ಪತ್ತೆಯಾಗಿವೆ.[ಕಾರೈಕುಡಿಯಲ್ಲಿ ಸಿಕ್ಕಿದ್ದು 1.2 ಕೋಟಿ ಹಳೇ ನೋಟು, ನಾಲ್ವರು ಅರೆಸ್ಟ್]

ಕೆಲವು ದಿನಗಳ ಹಿಂದೆ ಇಲ್ಲಿನ ಸ್ಥಳೀಯ ಜುವೆಲ್ಲರಿ ಮಾಲಕ ತನಗೆ ಸಾಧ್ವಿ ಐದು ಕೋಟಿ ಬಿಲ್ ಪಾವತಿ ಮಾಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದ. ಇದರ ಮೇಲೆ "ನಾವು ರೈಡ್ ಮಾಡಿ ಮೂರು ಜನರ ಮೇಲೆ ಪೊಲೀಸ್ ದೂರು ದಾಖಲಿಸಿಕೊಂಡಿದ್ದೇವೆ. ಪ್ರಮುಖ ಆರೋಪಿ ಸಾಧ್ವಿಯನ್ನು ಬಂಧಿಸಿದ್ದೇವೆ," ಎಂದು ಪೊಲೀಸ್ ಅಧಿಕಾರಿ ನೀರ್ಜ್ ಬಡ್ಗುಜರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
24 gold bars and more than crores of money in new 2,000 rupees notes have been recovered from Gujarat preacher Sadhwi’s Home.
Please Wait while comments are loading...