ವಿಧಾನಸಭಾ ಚುನಾವಣೆ ಫಲಿತಾಂಶ 2026: ಪಂಚ ರಾಜ್ಯಗಳ ಚುನಾವಣಾ ಕದನದ ಕ್ಷಣಕ್ಷಣದ ಮಾಹಿತಿ ಡೈಲಿಹಂಟ್‌ನಲ್ಲಿ

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಸೇರಿದಂತೆ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ (ಪುದುಚೇರಿ) ಒಳಗೊಂಡಂತೆ 2026ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮೇ 4 ರಂದು ಪ್ರಕಟವಾಗಲಿವೆ. ಈ ಮೂಲಕ ಈ ಪ್ರದೇಶಗಳಲ್ಲಿ ಸರ್ಕಾರಗಳ ಭವಿಷ್ಯ ಹಾಗೂ 824 ಕ್ಷೇತ್ರಗಳ ನಾಯಕರ ರಾಜಕೀಯ ಹಣೆಬರಹ ನಿರ್ಧಾರವಾಗಲಿದೆ. ಏಪ್ರಿಲ್ 9 ಮತ್ತು ಏಪ್ರಿಲ್ 29 ರ ನಡುವೆ ಹಂತ ಹಂತವಾಗಿ ಮತದಾನ ನಡೆದಿತ್ತು. ಈ ಐದೂ ರಾಜ್ಯಗಳ ಪ್ರಸ್ತುತ ವಿಧಾನಸಭಾ ಅವಧಿಯು ಮೇ ಮತ್ತು ಜೂನ್ ತಿಂಗಳಲ್ಲಿ ಕೊನೆಗೊಳ್ಳಲಿದೆ.

ಭಾರತದ ರಾಜಕೀಯ ನಕ್ಷೆಯು ಮತ್ತೊಂದು ದೊಡ್ಡ ಬದಲಾವಣೆಗೆ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ, ಕೇವಲ ಸುದ್ದಿಗಳನ್ನು ನೋಡುವುದಷ್ಟೇ ಅಲ್ಲ, ಡೈಲಿಹಂಟ್ ಮೂಲಕ ರಾಷ್ಟ್ರದ ರಾಜಕೀಯ ನಾಡಿಮಿಡಿತವನ್ನು ಸ್ಪಷ್ಟವಾಗಿ ತಿಳಿಯಿರಿ.

Election Results

ಮೇ 4 ರ ಫಲಿತಾಂಶ ಏಕೆ ಅತಿಮುಖ್ಯ?

ಇದೊಂದು ಕೇವಲ ಸಾಮಾನ್ಯ ಚುನಾವಣೆಯಲ್ಲ; ಇದು ತೀವ್ರ ಕುತೂಹಲ ಕೆರಳಿಸಿರುವ, ಕ್ಲೈಮ್ಯಾಕ್ಸ್ ತಲುಪುತ್ತಿರುವ ಹೈ-ವೋಲ್ಟೇಜ್ ರಾಜಕೀಯ ವಿದ್ಯಮಾನಗಳ ಸರಣಿಯಾಗಿದೆ:

1. ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಅವರು ಐತಿಹಾಸಿಕ ನಾಲ್ಕನೇ ಬಾರಿಗೆ ಅಧಿಕಾರಕ್ಕೇರಲಿದ್ದಾರೆಯೇ ಅಥವಾ ಬಿಜೆಪಿಯು ಮುನ್ನಡೆ ಸಾಧಿಸಿ ಆಟದ ದಿಕ್ಕನ್ನು ಬದಲಾಯಿಸಲಿದೆಯೇ?

2. ತಮಿಳುನಾಡು: ದ್ರಾವಿಡ ಪಕ್ಷಗಳ ಸಾಂಪ್ರದಾಯಿಕ ಕದನದಲ್ಲಿ ಈ ಬಾರಿ ಹೊಸ ತಿರುವು ಎದುರಾಗಿದೆ: ನಟ ವಿಜಯ್ ಅವರ ಟಿವಿಎಂಕೆ ಪಕ್ಷದ ಪ್ರವೇಶವು ದೀರ್ಘಕಾಲದ ಡಿಎಂಕೆ-ಎಐಎಡಿಎಂಕೆ (DMK-AIADMK) ಪೈಪೋಟಿಯನ್ನು ಬುಡಮೇಲು ಮಾಡಲಿದೆಯೇ?

3. ಕೇರಳ: ಎಲ್‌ಡಿಎಫ್ ಮತ್ತೊಮ್ಮೆ 'ಪರ್ಯಾಯ ಸರ್ಕಾರ'ದ ಸಂಪ್ರದಾಯವನ್ನು ಮುರಿಯಲಿದೆಯೇ ಅಥವಾ ಯುಡಿಎಫ್ ತನ್ನ ಭದ್ರಕೋಟೆಯನ್ನು ಮರಳಿ ಪಡೆಯಲಿದೆಯೇ?

4. ಅಸ್ಸಾಂ: ಮರುಜೀವ ಪಡೆದಿರುವ ವಿಪಕ್ಷಗಳ ಒಕ್ಕೂಟದ ವಿರುದ್ಧ ಎನ್‌ಡಿಎ ಮೈತ್ರಿಕೂಟದ ಪ್ರಾದೇಶಿಕ ಪ್ರಾಬಲ್ಯಕ್ಕೆ ಇದೊಂದು ಅಗ್ನಿಪರೀಕ್ಷೆಯಾಗಿದೆ.

5. ಪುದುಚೇರಿ: ಇದೊಂದು ತೀವ್ರ ಪೈಪೋಟಿಯ ಕಣವಾಗಿದ್ದು, ಇಲ್ಲಿನ ಪ್ರತಿಯೊಂದು ಸ್ಥಾನವೂ ಕೇಂದ್ರಾಡಳಿತ ಪ್ರದೇಶದ ಅಧಿಕಾರದ ಸಮತೋಲನವನ್ನು ನಿರ್ಧರಿಸಲಿದೆ.

ಚುನಾವಣಾ ದಿನದ ಕ್ಷಣಕ್ಷಣದ ಮಾಹಿತಿ ಡೈಲಿಹಂಟ್‌ನಲ್ಲಿ ಲಭ್ಯ

ಮತ ಎಣಿಕೆ ಆರಂಭವಾಗುತ್ತಿದ್ದಂತೆ, ಎಲ್ಲಾ 824 ಕ್ಷೇತ್ರಗಳ ಫಲಿತಾಂಶಗಳು ಹೇಗೆ ಹೊರಹೊಮ್ಮುತ್ತವೆ ಎಂಬುದನ್ನು ಟ್ರ್ಯಾಕ್ ಮಾಡುವ ಮೂಲಕ ಡೈಲಿಹಂಟ್ ನಿರಂತರ ಅಪ್‌ಡೇಟ್ಸ್ ನೀಡಲಿದೆ. ಮುಂಜಾನೆಯ ಆರಂಭಿಕ ಮುನ್ನಡೆಯಿಂದ ಹಿಡಿದು ಅಂತಿಮ ವಿಜೇತರ ಘೋಷಣೆಯವರೆಗೆ, ಪ್ರತಿ ಕ್ಷೇತ್ರ ಮಟ್ಟದ ಟ್ರೆಂಡ್‌ಗಳು, ಪಕ್ಷಗಳ ಸಾಧನೆ ಮತ್ತು ದಿನವಿಡೀ ನಡೆಯುವ ಪ್ರಮುಖ ಬದಲಾವಣೆಗಳನ್ನು ಈ ಪ್ಲಾಟ್‌ಫಾರ್ಮ್ ಮ್ಯಾಪ್ ಮಾಡಲಿದೆ.

ಕೇವಲ ಅಂಕಿ-ಅಂಶಗಳ ಹೆಡ್‌ಲೈನ್‌ಗಳಿಗೆ ಮಾತ್ರ ಸೀಮಿತವಾಗದೆ, ನಮ್ಮ ಕವರೇಜ್ ನಿರ್ಣಾಯಕ ಕ್ಷೇತ್ರಗಳು, ಜಿದ್ದಾಜಿದ್ದಿನ ಸ್ಪರ್ಧೆಗಳು ಮತ್ತು ಬದಲಾಗುತ್ತಿರುವ ಮುನ್ನಡೆಗಳನ್ನು ಟ್ರ್ಯಾಕ್ ಮಾಡುತ್ತದೆ. ಇದರೊಂದಿಗೆ ಬಹುಭಾಷೆಗಳಲ್ಲಿ ತಜ್ಞರ ವಿಶ್ಲೇಷಣೆ ಮತ್ತು ಗ್ರೌಂಡ್ ರಿಪೋರ್ಟ್‌ಗಳನ್ನು ಒದಗಿಸಲಿದೆ. ಕಿರು ವಿಡಿಯೋ ಅಪ್‌ಡೇಟ್ಸ್ ಮತ್ತು ರಿಯಲ್-ಟೈಮ್ ಸೋಷಿಯಲ್ ಮೀಡಿಯಾ ಟ್ರೆಂಡ್‌ಗಳು ಚಿತ್ರಣ ಸ್ಪಷ್ಟವಾಗುತ್ತಿದ್ದಂತೆ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ಪ್ರತಿಬಿಂಬಿಸಲಿವೆ.

ಈ ಬಾರಿಯ ಚುನಾವಣೆಗಾಗಿ ಡೈಲಿಹಂಟ್ ನವೀಕರಿಸಿದ 'ಎಲೆಕ್ಷನ್ ಝೋನ್' ಅನ್ನು ಪರಿಚಯಿಸಿದೆ. ಇದು ರಿಯಲ್-ಟೈಮ್ ಫಲಿತಾಂಶಗಳು, ಅಭ್ಯರ್ಥಿಗಳ ವಿವರವಾದ ಮಾಹಿತಿ, ಕ್ಷೇತ್ರವಾರು ಡೇಟಾ ಮತ್ತು ಹಿಂದಿನ ಚುನಾವಣೆಗಳೊಂದಿಗಿನ ಹೋಲಿಕೆಯೊಂದಿಗೆ ಅಂಕಿ-ಅಂಶಗಳನ್ನು ಒಂದೇ ಕಡೆ ನೀಡಲಿದೆ. ಶೇರ್ ಮಾಡಬಹುದಾದ ರಿಸಲ್ಟ್ ಕಾರ್ಡ್‌ಗಳು ಮತ್ತು ಕ್ವಿಕ್ ಡೇಟಾ ಸ್ನ್ಯಾಪ್‌ಶಾಟ್‌ಗಳು ಪ್ರಮುಖ ಕ್ಷಣಗಳನ್ನು ಎತ್ತಿ ತೋರಿಸಲಿವೆ.

ಮೇ 4 ರ ಫಲಿತಾಂಶಗಳು ಕೇವಲ ಆಯಾ ರಾಜ್ಯಗಳಿಗಷ್ಟೇ ಸೀಮಿತವಾಗಿರದೆ, ಭವಿಷ್ಯದ ರಾಜಕೀಯ ಸಮೀಕರಣಗಳು, ನಾಯಕತ್ವದ ಬಲ ಮತ್ತು 2029 ರ ಸಾರ್ವತ್ರಿಕ ಚುನಾವಣೆಗಳ ಹಾದಿಯನ್ನು ರೂಪಿಸುವ ನಿಟ್ಟಿನಲ್ಲಿ ಮುನ್ಸೂಚನೆಗಳನ್ನು ನೀಡುವ ನಿರೀಕ್ಷೆಯಿದೆ.

ಮುಂಜಾನೆಯ ಆರಂಭಿಕ ಟ್ರೆಂಡ್‌ಗಳಿಂದ ಹಿಡಿದು ತಡರಾತ್ರಿಯ ಅಧಿಕೃತ ಘೋಷಣೆಗಳವರೆಗೆ, ಅಂತಿಮ ಚಿತ್ರಣ ಸ್ಪಷ್ಟವಾಗುವ ಮುನ್ನ ದಿನವಿಡೀ ನಿರಂತರ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ವಿಧಾನಸಭಾ ಚುನಾವಣೆ ಫಲಿತಾಂಶ 2026 ರ ಸಮಗ್ರ ಕವರೇಜ್ ಮತ್ತು ಕ್ಷಣಕ್ಷಣದ ಮಾಹಿತಿಗಾಗಿ ಡೈಲಿಹಂಟ್ ನೋಡುತ್ತಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+