Asia Cup 2025: ಆಪರೇಷನ್ ಸಿಂಧೂರ: ಮೈದಾನದಲ್ಲೂ ಮೈದಾನದ ಹೊರಗೂ ಭಾರತಕ್ಕೇ ಗೆಲುವು: ನರೇಂದ್ರ ಮೋದಿ
Asia Cup 2025: ಭಾರತ ತಂಡವು ಏಷ್ಯಾ ಕಪ್ ಗೆದ್ದು ಸಂಭ್ರಮದಲ್ಲಿದೆ. ಈ ಬಾರಿ ಭಾರತೀಯ ಪುರುಷರ ಕ್ರಿಕೆಟ್ ತಂಡವು ಟ್ರೋಫಿಯನ್ನೇ ಸ್ವೀಕರಿಸದೆ ಹೊಸ ಇತಿಹಾಸ ಬರೆದಿದೆ. ಪಾಕಿಸ್ತಾನದ ಸಚಿವರಿಂದ ನಾವು ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಭಾರತವು ಹೇಳಿದ್ದು. ಟ್ರೋಫಿಯನ್ನು ತೆಗೆದುಕೊಳ್ಳದೆಯೇ ಸಂಭ್ರಮಾಚರಣೆ ಮಾಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಭಿನ್ನವಾದ ಟ್ವೀಟ್ ಮೂಲಕ ಗಮನ ಸೆಳೆದಿದ್ದಾರೆ.
ಭಾರತ ತಂಡವು ಏಷ್ಯಾ ಕಪ್ ಗೆದ್ದ ಬೆನ್ನಲ್ಲೇ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಆಪರೇಷನ್ ಸಿಂಧೂರ ಹಾಗೂ ಕ್ರಿಕೆಟ್ ಎರಡರಲ್ಲೂ ಭಾರತ ಗೆದ್ದಿದೆ. ಮೈದಾನದಲ್ಲೂ - ಕ್ರಿಕೆಟ್‌ನಲ್ಲೂ ಭಾರತಕ್ಕೇ ಗೆಲುವು. ಭಾರತೀಯ ಕ್ರಿಕೆಟ್ ತಂಡಗೆ ಅಭಿನಂದನೆಗಳು ( #OperationSindoor on the games field. Outcome is the same - India wins! Congrats to our cricketers.) ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತಿಹಾಸದಲ್ಲೇ ಮೊದಲ ಬಾರಿ ಎನ್ನುವಂತೆ ಈ ಬಾರಿಯ ಏಷ್ಯಾ ಕಪ್ ಹಲವು ಕಾರಣಗಳಿಗೆ ಸುದ್ದಿಯಲ್ಲಿದೆ. ಈ ಬಾರಿ ನಡೆದ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಎದುರಾದ ಸಂದರ್ಭದಲ್ಲಿ ಭಾರತವು ಹಸ್ತಲಾಘವ (ಹ್ಯಾಂಡ್ ಶೇಕ್) ಮಾಡಿರಲಿಲ್ಲ. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಕ್ರಿಕೆಟ್ ಆಟವಾಡಿದ ಮೇಲೆ ಹ್ಯಾಂಡ್ ಶೇಕ್ ಸಹ ಮಾಡಬೇಕಿತ್ತು ಎಂದು ಕೆಲವರು ವಾದ ಮಾಡಿದರೆ, ಭಾರತದ ನಿರ್ಧಾರ ಸರಿ ಇದೆ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದರು. ಒಟ್ಟಾರೆ ಭಾರತೀಯ ಕ್ರಿಕೆಟ್ ತಂಡವು ಹೊಸ ಇತಿಹಾಸ ಸೃಷ್ಟಿ ಮಾಡಿದೆ.
ಇನ್ನೂ ಪಾಕಿಸ್ತಾನದ ಕ್ರಿಕೆಟಿಗರ ಉದ್ಧಟತನ ಹಾಗೂ ಅಸಭ್ಯ ವರ್ತನೆಗೆ ಮೈದಾನದಲ್ಲಿಯೇ ಭಾರತೀಯ ಕ್ರಿಕೆಟ್ ತಂಡದ ನಾಯಕರು ತಿರುಗೇಟು ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಈ ನಿರ್ಧಾರಗಳಿಗೆ ಪರ - ವಿರೋಧ ವ್ಯಕ್ತವಾಗುತ್ತಿದ್ದರೂ. ಪಾಕಿಸ್ತಾನಕ್ಕೆ ದುರ್ವತನೆಗೆ ಅವರದ್ದೇ ಭಾಷೆಯಲ್ಲಿ ಪಾಠ ಕಲಿಸುವುದು, ತಿರುಗೇಟು ಕೊಡುವುದು ಅವಶ್ಯ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರೇ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಭಿನ್ನವಾದ ಟ್ವೀಟ್ ಮಾಡಿ ಜನರ ಗಮನ ಸೆಳೆದಿದ್ದಾರೆ.
ಸಿದ್ದರಾಮಯ್ಯ ಟ್ವೀಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭಕೋರಿದ್ದಾರೆ. ಅದ್ಭುತ ಗೆಲುವು! ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ಟೀಮ್ ಇಂಡಿಯಾಗೆ ಅಭಿನಂದನೆಗಳು. ನಿಮ್ಮ ದೃಢನಿಶ್ಚಯ ಮತ್ತು ತಂಡದ ಕೆಲಸವು ಮತ್ತೊಮ್ಮೆ 1.4 ಬಿಲಿಯನ್ ಭಾರತೀಯರ ಉತ್ಸಾಹವನ್ನು ಹೆಚ್ಚಿಸಿದೆ. ಈ ಗೆಲುವು ನಮ್ಮ ದೇಶದ ಅಚಲ ಹೆಮ್ಮೆಗೆ ಸಾಕ್ಷಿಯಾಗಿದೆ. ಜೈ ಹಿಂದ್! 🇮🇳 ಎಂದಿದ್ದಾರೆ.












Click it and Unblock the Notifications