ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ರಿಂದ 25 ಕೋಟಿ ಭಾರತೀಯರಿಗೆ ಕೊರೊನಾವೈರಸ್ ಲಸಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್.04: ಭಾರತದಲ್ಲಿ ನೊವೆಲ್ ಕೊರೊನಾವೈರಸ್ ಸೋಂಕಿನ ಹರಡುವಿಕೆ ರೀತಿ ಮತ್ತು ಕೊವಿಡ್-19 ಲಸಿಕೆ ಸಂಶೋಧನೆ ಪ್ರಗತಿ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ಸೋಷಿಯಲ್ ಮೀಡಿಯಾ ಬಳಕೆದಾರರ ಜೊತೆಗೆ ನಡೆಸಿದ ನಾಲ್ಕನೇ ಹಂತದ 'ಸಂಡೇ ಸಂವಾದ' ಕಾರ್ಯಕ್ರಮದ ಬಳಿಕ ಅವರು ಮಾತನಾಡಿದ್ದಾರೆ. 135 ಕೋಟಿ ಜನಸಂಖ್ಯೆಯ ದೇಶದಲ್ಲಿ ಲಸಿಕೆ ಹಂಚಿಕೆ ಪ್ರಕ್ರಿಯೆ ಹೇಗಿರಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕೊವಿಡ್ 19 infographics: ಭಾರತದಲ್ಲಿ 55 ಲಕ್ಷ ಮಂದಿ ಗುಣಮುಖ
ಮೊದಲ ಹಂತದಲ್ಲಿ ಭಾರತಕ್ಕೆ 400 ರಿಂದ 500 ಮಿಲಿಯನ್ ಡೋಸ್ ಲಸಿಕೆಯನ್ನು ಆಮದು ಮಾಡಿಕೊಳ್ಳಲಿದ್ದು, 2021ರ ಜುಲೈ ವೇಳೆಗೆ 20 ರಿಂದ 25 ಕೋಟಿ ಜನರಿಗೆ ಕೊವಿಡ್-19 ಸೋಂಕಿನ ಲಸಿಕೆಯನ್ನು ಹಾಕುವುದಕ್ಕೆ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

ಅಕ್ಟೋಬರ್ ಅಂತ್ಯದ ವೇಳೆಗೆ ಅಪಾಯದ ಪಟ್ಟಿ ಸಿದ್ಧ

ಅಕ್ಟೋಬರ್ ಅಂತ್ಯದ ವೇಳೆಗೆ ಅಪಾಯದ ಪಟ್ಟಿ ಸಿದ್ಧ

ಕೊರೊನಾವೈರಸ್ ಸೋಂಕು ಯಾವ ರಾಜ್ಯ ಮತ್ತು ವಲಯಗಳಲ್ಲಿ ಹೆಚ್ಚು ಅಪಾಯಕಾರಿಯಾಗಿದೆ. ಯಾವ ವಯಸ್ಸಿನವರಿಗೆ ಹಾಗೂ ಎಂಥ ಆರೋಗ್ಯ ಸಮಸ್ಯೆ ಉಳ್ಳವರಿಗೆ ಕೊರೊನಾವೈರಸ್ ಹೆಚ್ಚು ಅಪಾಯವನ್ನು ಉಂಟು ಮಾಡುತ್ತದೆ ಎನ್ನುವುದರ ಬಗ್ಗೆ ಅಕ್ಟೋಬರ್ ಅಂತ್ಯದ ವೇಳೆಗೆ ಗುರುತು ಮಾಡಿಕೊಳ್ಳಲಾಗುತ್ತದೆ. ಈ ಪಟ್ಟಿಯಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಸ್ಯಾಟಿಸೈಟಿಂಗ್ ಸಿಬ್ಬಂದಿ, ಆಶಾ ಕಾರ್ಯಕರ್ತರು ಮತ್ತು ಕೊವಿಡ್-19 ಸೋಂಕಿತರ ಹುಡುಕಾಟ, ಪರೀಕ್ಷೆ ಮತ್ತು ಚಿಕಿತ್ಸೆಯಲ್ಲಿ ತೊಡಗಿರುವ ಎಲ್ಲ ಸಿಬ್ಬಂದಿಯನ್ನು ಈ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಕೊವಿಡ್-19 ಲಸಿಕೆ ಕಳ್ಳ ಸಾಗಾಣಿಕೆ ಮೇಲೆ ಲಕ್ಷ್ಯ

ಕೊವಿಡ್-19 ಲಸಿಕೆ ಕಳ್ಳ ಸಾಗಾಣಿಕೆ ಮೇಲೆ ಲಕ್ಷ್ಯ

ಕೊರೊನಾವೈರಸ್ ಲಸಿಕೆಯನ್ನು ಕಳ್ಳ ಸಾಗಾಣಿಕೆ ಮೂಲಕ ಬ್ಲ್ಯಾಕ್ ಮಾರ್ಕೇಟ್ ನಲ್ಲಿ ಮಾರಾಟವಾಗದಂತೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರೀಕೃತವಾಗಿ ಲಸಿಕೆಯನ್ನು ರವಾನಿಸಲಾಗುತ್ತಿದ್ದು, ಯಾವುದೇ ಕಪ್ಪು ಮಾರುಕಟ್ಟೆಗಳಲ್ಲಿ ಲಸಿಕೆಗಳು ಸಿಗುವುದಕ್ಕೆ ಸಾಧ್ಯವಿಲ್ಲ ಎಂದು ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. " ಮೊದಲೇ ನಿರ್ಧರಿಸಿದ ಮತ್ತು ರೂಪಿಸಿದ ಯೋಜನೆಗೆ ತಕ್ಕಂತೆ ಆದ್ಯತೆ ಮೇರೆಗೆ ಕೊವಿಡ್-19 ಲಸಿಕೆಗಳನ್ನು ವಿತರಿಸಲಾಗುತ್ತದೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಮುಂದಿನ ತಿಂಗಳುಗಳಲ್ಲಿ ಸಂಪೂರ್ಣ ಪ್ರಕ್ರಿಯೆಯ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ" ಎಂದು ಸಚಿವ ಡಾ. ಹರ್ಷವರ್ಧನ್ ಭರವಸೆ ನೀಡಿದ್ದಾರೆ.

ದೇಶದಲ್ಲಿ ಕೊರೊನಾವೈರಸ್ ಲಸಿಕೆ ಪ್ರಯೋಗದ ಹಂತ

ದೇಶದಲ್ಲಿ ಕೊರೊನಾವೈರಸ್ ಲಸಿಕೆ ಪ್ರಯೋಗದ ಹಂತ

ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ಸಂಶೋಧನೆಯಲ್ಲಿ ಭಾರತವೂ ಮುಂದಿದೆ. ದೇಶದಲ್ಲಿ ನಡೆಸುತ್ತಿರುವ ಮೂರು ಲಸಿಕೆಗಳು ಸುರಕ್ಷಿತ, ರೋಗ ನಿರೋಧಕ ಶಕ್ತಿಗೆ ಪೂರಕ ಮತ್ತು ಪರಿಣಾಮಕಾರಿ ಎಂಬುದು ವೈದ್ಯಕೀಯ ಪ್ರಯೋಗಗಳಲ್ಲಿ ಸಾಬೀತಾಗಿದೆ. ಆದರೆ ಲಸಿಕೆ ಬಳಕೆಗೂ ಮೊದಲು ಅದನ್ನು ಖಚಿತಪಡಿಸಿಕೊಳ್ಳಬೇಕಿದೆ. ಒಂದು ಡೋಸ್ ನೀಡಿದ್ದಲ್ಲಿ ಕೊವಿಡ್-19ನಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಒಂದು ಡೋಸ್ ನಿಂದ ನಿರೀಕ್ಷಿತ ಮಟ್ಟದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಬಹುದು. ಎರಡನೇ ಡೋಸ್ ನಿಂದ ಆರೋಗ್ಯ ಸುರಕ್ಷತೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

ರಷ್ಯಾದ ಸ್ಪುಟಿಕ್-ವಿ ಆಮದು ಬಗ್ಗೆ ಅಂತಿಮ ನಿರ್ಧಾರವಿಲ್ಲ

ರಷ್ಯಾದ ಸ್ಪುಟಿಕ್-ವಿ ಆಮದು ಬಗ್ಗೆ ಅಂತಿಮ ನಿರ್ಧಾರವಿಲ್ಲ

ರಷ್ಯಾದಲ್ಲಿ ಸ್ಪುಟಿಕ್-ವಿ ಲಸಿಕೆಯ ಬಗ್ಗೆ ಭಾರತದಲ್ಲೂ ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಆದರೆ ಇದುವರೆಗೂ ಯಾವುದೇ ರೀತಿಯ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸ್ಪಷ್ಟನೆ ನೀಡಿದ್ದಾರೆ.

ದೇಶದಲ್ಲಿ ಕೊವಿಡ್-19 ಸ್ಥಿತಿಗತಿ ಹೇಗಿದೆ?

ದೇಶದಲ್ಲಿ ಕೊವಿಡ್-19 ಸ್ಥಿತಿಗತಿ ಹೇಗಿದೆ?

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 75,82 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದರಿಂದ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 65,49,374 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ 55,09,967 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 9,37,625 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

English summary
20-25 Crore People Will Get First Coronavirus Shot By July 2021: Health Minister Dr Harsh Vardhan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X