'ಬೇಟಿ ಬಚಾವೊ...' ಜಾಗೃತಿ ಮೂಡಿಸಲು ವಿಮಾನವೇರಿ ಹೊರಟ ಮಹಿಳಾ ಪೈಲಟ್‌ಗಳು
ಪಟಿಯಾಲ, ಜುಲೈ 30: ಕೇಂದ್ರ ಸರ್ಕಾರದ 'ಬೇಟಿ ಬಚಾವೊ, ಬೇಟಿ ಪಡಾವೊ' ಅಭಿಯಾನವನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುವ ಉದ್ದೇಶದಿಂದ ಇಬ್ಬರು ಮಹಿಳಾ ಪೈಲಟ್‌ಗಳು ವೈಮಾನಿಕ ಪರ್ಯಟನ ಆರಂಭಿಸಿದ್ದಾರೆ.
ಪಟಿಯಾಲ ಏವಿಯೇಷನ್ ಕ್ಲಬ್‌ನ ಆರೋಹಿ ಪಂಡಿತ್ (22) ಮತ್ತು ಕೀಥೈರ್ ಮಿಸ್ಕಿಟ್ಟಾ (23) ಭಾನುವಾರ ಪ್ರಯಾಣ ಆರಂಭಿಸಿದ್ದು, ಹಗುರ ಕ್ರೀಡಾ ವಿಮಾನವನ್ನು (ಎಲ್‌ಎಸ್‌ಎ) 90 ದಿನಗಳ ಕಾಲ ಹಾರಿಸಲಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರೆಣೀತ್ ಕೌರ್ ಅವರು ಪಟಿಯಾಲ ಏವಿಯೇಷನ್ ಕ್ಲಬ್‌ನಲ್ಲಿ ಈ ಆಂದೋಲನಕ್ಕೆ ಚಾಲನೆ ನೀಡಿದರು.

ಈ ಚಿಕ್ಕ ವಿಮಾನದಲ್ಲಿ ಇಬ್ಬರೂ ಸಾಹಸಿ ಮಹಿಳೆಯರು ಪರ್ವತಗಳು ಶ್ರೇಣಿ ಅರಣ್ಯದೊಳಗಿನ ಹಾದಿಗಳನ್ನು ಸಾಗಿ ಮೂರು ಖಂಡಗಳ 23 ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಇಬ್ಬರು ಮಾತ್ರವೇ ಪ್ರಯಾಣಿಸಲು ಸಾಧ್ಯವಾಗುವಂತಹ ಈ ವಿಮಾನದಲ್ಲಿ ಒಮ್ಮೆಗೆ ನಾಲ್ಕು ಗಂಟೆ ಮಾತ್ರ ಸತತವಾಗಿ ಪ್ರಯಾಣಿಸಬಹುದಾಗಿ. ಈ ವಿಮಾನದಲ್ಲಿ ಒಟ್ಟು 40,000 ಕಿ.ಮೀ. ಪ್ರಯಾಣಿಸುವ ಗುರಿ ಹೊಂದಲಾಗಿದೆ.

ದೇಶದಲ್ಲಿ ಮಹಿಳೆಯರು ಮತ್ತು ಪುರುಷರ ಅನುಪಾತದಲ್ಲಿ ತೀವ್ರ ವ್ಯತ್ಯಾಸ ಉಂಟಾಗುತ್ತಿರುವುದರಿಂದ ಮತ್ತು ಹೆಣ್ಣುಮಕ್ಕಳ ರಕ್ಷಣೆ, ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಹಾಗೂ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯನ್ನು ಆರಂಭಿಸಿದೆ.












Click it and Unblock the Notifications