2 Wheeler - Car: ಇನ್ಮುಂದೆ ಈ ಕೆಲಸ ಮಾಡದಿದ್ದರೆ ನಿಮ್ಮ ವಾಹನಗಳಿಗೆ ಪೆಟ್ರೋಲ್ - ಡೀಸೆಲ್ ಸಿಗಲ್ಲ: ಸುಪ್ರೀಂ ಮಹತ್ವದ ಆದೇಶ

ಕೇಂದ್ರ ಸರ್ಕಾರವು ಪೆಟ್ರೋಲ್‌ನೊಂದಿಗೆ ಎಥನಾಲ್ ಮಿಶ್ರಣದ ನಂತರ ಮತ್ತೊಂದು ಮಹತ್ವದ ಯೋಜನೆಯನ್ನು ಜಾರಿ ಮಾಡುವುದಕ್ಕೆ ಮುಂದಾಗಿದೆ. ಇದೀಗ ಈ ಯೋಜನೆಗೆ ಸಂಬಂಧಿಸಿದಂತೆ ಪ್ರಯೋಗಿಕ ಪರೀಕ್ಷೆ ಪ್ರಾರಂಭವಾಗಿದೆ. ಭಾರತದಲ್ಲಿ ಶೇ. 56 ರಷ್ಟು ವಾಹನಗಳಿಗೆ ನಿಖರವಾದ ವಿಮೆ ಇಲ್ಲದೆಯೇ ರಸ್ತೆಗಳಲ್ಲಿ ಬಳಕೆ ಮಾಡಲಾಗುತ್ತಿದೆ ಅಥವಾ ವಾಹನ ಸವಾರರು ಬಳಸುತ್ತಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ವಿಮೆ (Insurance) ಮಾಡಿಸಿಕೊಳ್ಳದೆ ಇರುವವರಿಗೆ ಪೆಟ್ರೋಲ್ - ಡೀಸೆಲ್ ಕೊಡಬಾರದು. ಈ ನಿಟ್ಟಿನಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುವಂತೆ ಹೇಳಲಾಗಿದೆ. ಹೀಗಾಗಿ, ವಾಹನದ ಇನ್ಯೂರೆನ್ಸ್‌ ಮಾಡಿಸಿಕೊಳ್ಳದೆ ಇರುವವರಿಗೆ ಇನ್ಮುಂದೆ ಪೆಟ್ರೋಲ್ ಅಥವಾ ಡೀಸೆಲ್ ಸಿಗುವುದಿಲ್ಲ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಹೊಸ ವಾಹನಗಳಿಗೆ ಕಡ್ಡಾಯವಾಗಿ (Third party) ತೃತೀಯ ಪಕ್ಷ ವಿಮೆ ಮಾಡಿಸಿಕೊಳ್ಳಬೇಕಾಗಿದೆ. ಅಲ್ಲದೆ ಕಾರುಗಳಿಗೆ ನಾಲ್ಕು ವರ್ಷಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳಿಗೆ ವಿಸ್ತರಿಸಲಾಗಿದೆ. ಹೊಸ ವಾಹನಗಳ ಖರೀದಿ ಅಥವಾ ನೋಂದಣಿ ಸಮಯದಲ್ಲಿ ಕಾರುಗಳಿಗೆ ಮೂರು ವರ್ಷಗಳು ಮತ್ತು ದ್ವಿಚಕ್ರ ವಾಹನಗಳಿಗೆ ಐದು ವರ್ಷಗಳಿಗೆ ತೃತೀಯ ಪಕ್ಷದ ವಿಮೆಯನ್ನು ಖರೀದಿಸುವುದನ್ನು ಸುಪ್ರೀಂ ಕೋರ್ಟ್ 2018ರಲ್ಲಿ ಕಡ್ಡಾಯಗೊಳಿಸಲಾಗಿದೆ ಎನ್ನುವ ಅಂಶವನ್ನು ಪೀಠವು ಗಮನಿಸಿದೆ.

2 Wheeler

ಮುಂದುವರಿದು ಈ ಹಿಂದಿನ ತೀರ್ಪು ನೀಡಿ ಎಂಟು ವರ್ಷಗಳು ಕಳೆದಿದ್ದರೂ, ಹೆಚ್ಚಿನ ಸಂಖ್ಯೆಯ ವಾಹನ ಸವಾರರು ವಿಮೆ ಮಾಡಿಸಿಕೊಂಡಿಲ್ಲ. IRDAI (ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ಮತ್ತು GIC (ಸಾಮಾನ್ಯ ವಿಮಾ ಮಂಡಳಿ) ಈ ಅವಧಿಯನ್ನು ಹೆಚ್ಚಿಸಬಾರದು ಎಂದು ಶಿಫಾರಸು ಮಾಡಿದ್ದರೂ, ರಸ್ತೆ ಸುರಕ್ಷತೆಯ ಹಿತದೃಷ್ಟಿಯಿಂದ ಅವಧಿಯನ್ನು ಒಂದು ವರ್ಷ ಹೆಚ್ಚಿಸುವುದು ಉತ್ತಮ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಸಂಸದೀಯ ಸಮಿತಿಯ ವರದಿಯನ್ನು ಉಲ್ಲೇಖಿಸಿ, ನ್ಯಾಯಾಲಯವು ಸುಮಾರು 30 ಕೋಟಿ ವಾಹನಗಳಲ್ಲಿ ಸುಮಾರು 16.54 ಕೋಟಿ ವಾಹನಗಳು - ಸುಮಾರು 56 ಪ್ರತಿಶತ ವಾಹನಗಳು - ವಿಮಾ ರಕ್ಷಣೆಯನ್ನು ಹೊಂದಿಲ್ಲ ಎನ್ನುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಜೀವಿಸುವ ಹಕ್ಕಿಗೆ ಸಂಬಂಧಿಸಿದ ಮಹತ್ವದ ವಿಷಯ ಇದಾಗಿದೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 146 ರ ಅಡಿಯಲ್ಲಿ ಕಡ್ಡಾಯವಾಗಿ ತೃತೀಯ ಪಕ್ಷ ವಿಮೆಯ ಉದ್ದೇಶವು ಅಪಘಾತಗೊಂಡ ಸಂತ್ರಸ್ತರಿಗೆ ಪರಿಹಾರವನ್ನು ಪಡೆಯಲು ಸಹಾಯವಾಗುವುದು ಮಾತ್ರವಲ್ಲದೆ ದೀರ್ಘಾವಧಿಯ ಕಾನೂನು ಕ್ರಮಗಳಿಂದ ಅವರನ್ನು ರಕ್ಷಿಸುವುದು ಸಹ ಆಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ನಿರ್ದಿಷ್ಟವಾದ ವಿಮೆಯನ್ನು ಹೊಂದಿದ್ದರೆ ಮಾತ್ರ ವಾಹನಗಳಿಗೆ ಇಂಧನ (ಪೆಟ್ರೋಲ್ / ಡೀಸೆಲ್) ಹಾಕುವ ವ್ಯವಸ್ಥೆಯನ್ನು ಅನ್ವೇಷಿಸುವ ಪ್ರಾಯೋಗಿಕ ಯೋಜನೆಯನ್ನು ರೂಪಿಸಲು ಪೀಠವು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಮತ್ತು IRDAI ಗೆ ನಿರ್ದೇಶನ ನೀಡಿದೆ. ಇದು ವಾಹನ ಮಾಲೀಕರು ಸಮಯಕ್ಕೆ ಸರಿಯಾಗಿ ವಿಮೆಯನ್ನು ನವೀಕರಿಸಲು ಮತ್ತು ವಿಮೆ ಮಾಡದ ವಾಹನಗಳನ್ನು ಗುರುತಿಸಲು ಅನುಕೂಲವಾಗುವಂತೆ ಪ್ರೋತ್ಸಾಹಿಸುತ್ತದೆ ಎಂದೂ ಸುಪ್ರೀಂ ಕೋರ್ಟ್ ಸಹ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+