ಇಬ್ಬರು ಶಿವಸೇನಾ ನಾಯಕರ ಹತ್ಯೆ: NCP ಶಾಸಕ ಸೇರಿ ನಾಲ್ವರ ಬಂಧನ
ಅಹ್ಮದಾಬಾದ್ ನಗರ, ಏಪ್ರಿಲ್ 09: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಂದ ಒಂದು ಗಂಟೆಯಲ್ಲಿ ಇಬ್ಬರು ಶಿವಸೇನಾ ಮುಖಂಡರನ್ನು ಕೊಲೆ ಮಾಡಿದ ಘಟನೆ ಏ.07 ರಂದು ನಡೆದಿದ್ದು ಆತಂಕ ಸೃಷ್ಟಿಸಿದೆ.
ಮೃತರನ್ನು ಸಂಜಯ್ ಕೊಟ್ಕರ್(35) ಮತ್ತು ವಸಂತ್ ಆನಂದ್ ಥುಬೆ (40) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ಶಾಸಕ ಅಂಗ್ರಾಮ್ ಜಗತ್ ಮತ್ತು ಮೂವರನ್ನು ಬಂಧಿಸಲಾಗಿದೆ.

ಶನಿವಾರ ಸಂಜೆ ಸುಮಾರು 5:15 ರ ಸಮಯದಲ್ಲಿ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಹ್ಮದಾಬಾದ್ ನಗರದ ಕೆಡಗಾಂವ್ ನ ಶಾಹುನಗರ ಪ್ರದೇಶದಲ್ಲಿ ಈ ಇಬ್ಬರು ಶಿವಸೇನಾ ಮುಖಂಡರ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶಕ್ಕೂ, ಈ ಕೊಲೆಗೂ ಸಮಬಂಧವಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ಕೊಲೆ ರಾಜಕೀಯ ಪ್ರೇರಿತ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳನ್ನು ಏಪ್ರಿಲ್ 12 ರಂದು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications