ಬಯಲು ಮಲವಿಸರ್ಜನೆ ಮಾಡಿದ ಇಬ್ಬರು ಶಿಕ್ಷಕರ ಅಮಾನತು
ಅಶೋಕನಗರ(ಮಧ್ಯಪ್ರದೇಶ), ಸೆಪ್ಟೆಂಬರ್ 13: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಸ್ವಚ್ಛ ಭಾರತವೆಂದು ಬೊಬ್ಬೆ ಹೊಡೆಯುತ್ತಿದ್ದರೆ, ಮಕ್ಕಳಿಗೆ ಸ್ವಚ್ಛತೆಯ ಪಾಠ ಹೇಳಬೇಕಿದ್ದ ಶಿಕ್ಷಕರೇ ಬಯಲು ಮಲವಿಸರ್ಜನೆ ಮಾಡಿದ ಘಟನೆ ಮಧ್ಯಪ್ರದೇಶದ ಅಶೋಕನಗರದಲ್ಲಿ ನಡೆದಿದೆ.
ಮನೆಯಲ್ಲಿ ಶೌಚಾಲಯವಿದ್ದರೂ ಬಯಲಲ್ಲಿ ಮಲವಿಸರ್ಜನೆ ಮಾಡುತ್ತಿದ್ದ ಮಹೇಂದ್ರ ಸಿಂಗ್ ಯಾದವ್ ಮತ್ತು ಪ್ರಕಾಶ ಪ್ರಜಾಪತಿ ಎಂಬ ಇಬ್ಬರು ಶಿಕ್ಷಕರನ್ನೂ ಕೆಲಸದಿಂದ ಅಮಾನತು ಮಾಡಲಾಗಿದೆ.

ಸ್ವಚ್ಛ ಭಾರತದ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಜಿಲ್ಲಾಡಳಿತವೇ ಈ ಇಬ್ಬರು ಶಿಕ್ಷಕರನ್ನೂ ಅಮಾನತು ಮಾಡಿದೆ











Click it and Unblock the Notifications