ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ, ಮೂವರು ಬಲಿ

Posted By:
Subscribe to Oneindia Kannada

ಚಿತ್ರಕೂಟ (ಉತ್ತರ ಪ್ರದೇಶ), ನವೆಂಬರ್, 24: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ.ಶುಕ್ರವಾರ ಬೆಳಗ್ಗೆ ಪಾಟ್ನಾ- ಗೋವಾ ಮಾರ್ಗದಲ್ಲಿ ವಾಸ್ಕೋಡಿಗಾಮ ಪಾಟ್ನಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದೆ.

ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ರೈಲು, 32 ಜನರಿಗೆ ಗಾಯ

ಉತ್ತರ ಪ್ರದೇಶದಬಂಡ ಜಿಲ್ಲೆಯ ಚಿತ್ರಕೂಟದ ಬಳಿ ವಾಸ್ಕೋಡಿಗಾಮ ಪಾಟ್ನಾ ಎಕ್ಸ್ ಪ್ರೆಸ್ ರೈಲು ಇಂದು (ಶುಕ್ರವಾರ) ಬೆಳಗ್ಗೆ ಹಳಿ ತಪ್ಪಿದೆ. ಸಧ್ಯದ ಮಾಹಿತಿ ಪ್ರಕಾರ ಈ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, 9 ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ತಳಕು ಬಳಿ ಆ್ಯಂಬುಲೆನ್ಸ್ ಗೆ ರೈಲು ಡಿಕ್ಕಿ: ಬಾಣಂತಿ ಸೇರಿ 4 ಸಾವು

2 dead and 8 injured in Vasco De Gama Patna express train accident near UP’s Banda

ಪಾಟ್ನಾ -ಗೋವಾ ಮಾರ್ಗದಲ್ಲಿ ಸಂಚರಿಸುವ ವಾಸ್ಕೋಡಗಾಮ ಎಕ್ಸ್ ಪ್ರೆಸ್ ಬಂಡ ಜಿಲ್ಲೆಯ ಚಿತ್ರಕೂಟದ ಬಳಿ ಸಂಚರಿಸುವಾಗ ಹಳಿತಪ್ಪಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಪಘಾತದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಬದಲಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ರೈಲು ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಕೇಂದ್ರ ರೈಲ್ವೆ ಸಚಿವ ಪಿಯುಶ್ ಗೋಯಲ್ ಮಾಹಿತಿ ಪಡೆದಿದ್ದಾರೆ.

ಪರಿಹಾರ ಘೋಷಣೆ: ವಾಸ್ಕೋಡಿಗಾಮ ರೈಲು ದುರಂತದಲ್ಲಿ ಸಾವನ್ನಪ್ಪಿದ ಮೂವರು ಕುಟುಂಬಗಳಿಗೆ ತಲಾ 5 ಲಕ್ಷ ರು., ತೀವ್ರವಾಗಿ ಗಾಯಗೊಂಡವರಿಗೆ 1 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 50 ಸಾವಿರು ರು. ಪರಿಹಾರನೀಡುವುದಾಗಿ ಪಿಯುಶ್ ಗೋಯಲ್ ಪೋಷಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
2 dead and 8 injured in Vasco De Gama Patna express train accident near UP’s Banda

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ