ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಲಕ್ಷ ರೈಲ್ವೇ ಉದ್ಯೋಗಕ್ಕೆ 2 ಕೋಟಿ ಅರ್ಜಿ; ನಿರುದ್ಯೋಗ ಸಮಸ್ಯೆಗೆ ಕೈಗನ್ನಡಿ

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 28: ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಗಗನಕ್ಕೇರಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ರೈಲ್ವೇಯ ಉದ್ಯೋಗ ನೇಮಕಾತಿ ಕನ್ನಡಿ ಹಿಡಿದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈಲ್ವೇ ಇಲಾಖೆ ಒಂದು ಲಕ್ಷ ಉದ್ಯೋಗ ನೇಮಕಕ್ಕೆ ಅರ್ಜಿ ಕರೆದಿತ್ತು. 1 ಲಕ್ಷ ಹುದ್ದೆಗಳಿಗೆ ಬರೋಬ್ಬರಿ 2 ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ. ಶನಿವಾರದವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಇನ್ನೂ ಹೆಚ್ಚಿನ ಅರ್ಜಿಗಳು ಹರಿದು ಬರುವ ಸಾಧ್ಯತೆ ಇದೆ.

ಕೊಂಕಣ ರೈಲ್ವೆಯಲ್ಲಿ 65 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಕೊಂಕಣ ರೈಲ್ವೆಯಲ್ಲಿ 65 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ರೈಲ್ವೇ ಪೊಲೀಸ್, ಲೋಕೊಮೋಟಿವ್ (ಚಾಲಕ) ಮತ್ತು ತಂತ್ರಜ್ಞರ ಹುದ್ದೆ ಭರ್ತಿಗೆ ರೈಲ್ವೇ ಕೆಲವು ದಿನಗಳ ಹಿಂದೆ ಅರ್ಜಿ ಸಲ್ಲಿಸುವಂತೆ ಕೋರಿತ್ತು. 15 ಭಾಷೆಗಳಲ್ಲಿ ರೈಲ್ವೇ ಹುದ್ದೆ ಭರ್ತಿಗೆ ಆನ್ಲೈನ್ ಪರೀಕ್ಷೆ ನಡೆಯಲಿದೆ.

2 Crore Indians Apply for 1 lakh railway jobs

ಹುದ್ದೆಗೆ ಬೇಕಾದ ಅರ್ಹತೆಗಿಂತ ಹೆಚ್ಚಿನ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಿದ್ದಾರೆ. ತಂತ್ರಜ್ಞರ ಹುದ್ದೆಗಳಿಗೆ ಪಿಎಚ್ಡಿ ಪಡೆದವರೆಲ್ಲಾ ಅರ್ಜಿ ಸಲ್ಲಿಸಿದ್ದಾರೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.

2015ರಲ್ಲಿ ಇದೇ ರೀತಿ ಉತ್ತರ ಪ್ರದೇಶದಲ್ಲಿ ಕೇವಲ 368 ಕೆಳ ದರ್ಜೆಯ ಹುದ್ದೆಗಳಿಗೆ 23 ಲಕ್ಷ ಅರ್ಜಿಗಳು ಬಂದಿದ್ದವು.

English summary
Indian Railway's have received more than 2 crore applicants for about 1 lakh jobs, a railway ministry official has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X