ಉತ್ತರ ಪ್ರದೇಶದಲ್ಲಿ ಎನ್ ಕೌಂಟರ್: ಇಬ್ಬರು ಅಪರಾಧಿಗಳ ಹತ್ಯೆ
ಕೈರಾಣ(ಉತ್ತರ ಪ್ರದೇಶ), ಜುಲೈ 29: ಉತ್ತರ ಪ್ರದೇಶದ ಕೈರಾಣ ಠಾಣಾ ವ್ಯಾಪ್ತಿಯ ಭುರಾ ಎಂಬಲ್ಲಿ ಇಂದು(ಜುಲೈ 29) ಬೆಳಿಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಅಪರಾಧಿಗಳನ್ನು ಹೊಡೆದುರುಳಿಸಲಾಗಿದ್ದು, ಏಳು ಪೊಲೀಸರು ಗಾಯಗೊಂಡಿದ್ದಾರೆ.
ಹತ್ಯೆಯಾದ ಇಬ್ಬರು ಅಪರಾಧಿಗಳೂ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಆದರೆ ಈ ಇಬ್ಬರೂ ಅಪರಾಧಿಗಳನ್ನು ಹಿಡಿದುಕೊಟ್ಟವರಿಗೆ 60 ಸಾವಿರ ರೂ. ಬಹುಮಾನವನ್ನು ಇಲ್ಲಿನ ಪೊಲೀಸರು ಘೋಷಿಸಿದ್ದರು.

ಎನ್ ಕೌಂಟರ್ ಸಮಯದಲ್ಲಿ ಇನ್ನಿಬ್ಬರು ಅಪರಾಧಿಗಳು ಪಲಾಯನಮಾಡಿದ್ದು, ಅವರ ಪತ್ತೆಗೆ ಪೊಲಿಸರು ಬಲೆ ಬೀಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications