1984ರಲ್ಲಿ ನಡೆದ ಸಿಖ್ ನರಮೇಧ ಕೇಸ್ ಮತ್ತೆ ತನಿಖೆಗೆ
ನವದೆಹಲಿ, ಜನವರಿ 10: ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆ ಬಳಿಕ 1984ರಲ್ಲಿ ದೇಶದ ವಿವಿಧೆಡೆ ನಡೆದ ಸಿಖ್ ನರಮೇಧ, ಹಿಂಸಾಚಾರ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ.
ಉತ್ತರ ಪ್ರದೇಶ ಸರಕಾರವು ಕಾನ್ಪುರದಲ್ಲಿ 1984ರಲ್ಲಿ ನಡೆದ ಸಿಖ್-ವಿರೋಧಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡದೆ ಮುಚ್ಚಿ ಹಾಕಲಾಗದ ನೂರಾರು ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮೂರು ಸದಸ್ಯರ ಸಮಿತಿಯನ್ನು ನೇಮಿಸಿ, 186 ಕೇಸುಗಳ ಮರು ತನಿಖೆಗೆ ಆದೇಶಿಸಿದೆ.

ಕಾನ್ಪುರದಲ್ಲಿ 1984 ರಲ್ಲಿ ಸಿಖ್-ವಿರೋಧಿ ಹಿಂಸಾಚಾರದಲ್ಲಿ 127 ಜನರು ಸಾವನ್ನಪ್ಪಿದರು. ಒಟ್ಟು 2800 ಎಫ್ಐರ್ ಗಳನ್ನು ಹಾಕಲಾಗಿತ್ತು. ಆದರೆ ಸಾಕ್ಷ್ಯಾಧಾರಗಳಿಲ್ಲದೆ ಹೆಚ್ಚಿನ ಪ್ರಕರಣಗಳು ಮುಚ್ಚಲ್ಪಟ್ಟವು. ಬಲಿಪಶುಗಳು ಸುಮಾರು 33 ವರ್ಷಗಳ ಕಾಲ ನ್ಯಾಯಕ್ಕಾಗಿ ಅಲೆದಾಡಿದರೂ ನ್ಯಾಯ ಸಿಕ್ಕಿಲ್ಲ.












Click it and Unblock the Notifications