ಭಯ ಸೃಷ್ಟಿಸಿದೆಯಾ 1941ಕ್ಕೆ ಹೊಂದಾಣಿಕೆಯಾಗುವ 2025ರ ಕ್ಯಾಲೆಂಡರ್?
ಪ್ರತಿವರ್ಷವೂ ಕ್ಯಾಲೆಂಡರ್ ಬದಲಾಗುತ್ತಿರುತ್ತದೆ. ಅದರಲ್ಲೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಎರಡು ವರ್ಷಗಳ ಹೊಂದಾಣಿಕೆ ಕ್ಯಾಲೆಂಡರ್‌ಗಳು ಜನರಲ್ಲಿ ಭಯ ಹುಟ್ಟುಹಾಕಿವೆ. ಹಾಗಾದ್ರೆ ಯಾವ್ಯಾವ ಇಸವಿಯವು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2025 ವರ್ಷದ ಕ್ಯಾಲೆಂಡರ್ ಥೇಟ್ 1941ರ ರೀತಿಯಲ್ಲೇ ಇದ್ದು, ಇದು ಜನರಲ್ಲಿ ಭಾರೀ ಆತಂಕ ಸೃಷ್ಟಿದೆ. ಆ ವರ್ಷದಲ್ಲಿ ಸಂಭವಿಸಿದ ಘಟನೆಗಳು ಮತ್ತೆ ಈ ವರ್ಷವೂ ಸಹ ಹಾಗೆಯೇ ಸಂಭವಿಸುತ್ತವೆಯಾ ಎನ್ನವ ಭಯವನ್ನು ಹುಟ್ಟುಹಾಕಿದೆ. ಇದು ಇದೀಗ ಎಲ್ಲಡೆ ಭಾರೀ ವೈರಲ್ ಆಗುತ್ತಿದೆ.

1941 ಹಾಗೂ 2025ರ ಕ್ಯಾಲೆಂಡರ್ ಎರಡೂ ಒಂದೇ ಆಗಿವೆ. ಜನವರಿ 1, 2025 ಮತ್ತು ಜನವರಿ 1, 1941 ಎರಡೂ ಬುಧವಾರದಂದು ಬರುತ್ತವೆ. ಈ ಕ್ಯಾಲೆಂಡರ್ ಕಾಕತಾಳೀಯತೆಯು ಊಹಾಪೋಹಗಳಿಗೆ ಮತ್ತು ಕೆಲವರಲ್ಲಿ ಅಚ್ಚರಿ ಹಾಗೂ ಆತಂಕಕ್ಕೂ ಕಾರಣವಾಗಿದೆ. ಯಾಕೆಂದ್ರೆ, 1941ರ ವರ್ಷದಲ್ಲಿ ತುಂಬಾ ದುರ್ಘಟನೆಗಳು ಸಂಭವಿಸಿದ್ದವು.
ಈ ಎರಡು ಕ್ಯಾಲೆಂಡರ್ ಹೊಂದಾಣಿಕೆಯಾಗಿದ್ದು, 1941ರ ವರ್ಷದಂತೆಯೇ 2025ರ ಆರಂಭದ 5 ತಿಂಗಳಲ್ಲಿ ಸಹ ದುರಂತಗಳು ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, 1941ರಲ್ಲಿ ಪರ್ಲ್ ಹಾರ್ಬರ್ ಮೇಲಿನ ದಾಳಿಯ ನಂತರ ಅಮೆರಿಕ ಎರಡನೇ ಮಹಾಯುದ್ಧಕ್ಕೆ ನಾಂದಿ ಆಗಿತ್ತು. ಈಗಾಗಲೇ 2025ರಲ್ಲೂ ದೇಶದಲ್ಲಿ ಯುದ್ಧ ಭೀತಿಯ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ. ಮತ್ತೊಂದೆಡೆ ರಷ್ಯಾ ಉಕ್ರೇನ್ ಒಂದು ಕಡೆಯಾದರೆ, ಇರಾನ್-ಇಸ್ರೇಲ್ ಯುದ್ಧದ ಆತಂಕ ದಿನದಿಂದ ಹೆಚ್ಚಾಗುತ್ತಲಿದೆ. ಇನ್ನೂ ಮುಂದಿನ ದಿನಗಳಲ್ಲಿ ಮತ್ತೇನು ಕಾದಿದೆಯೋ ಎನ್ನುವ ಆತಂಕದಲ್ಲಿ ಜನರಿದ್ದಾರೆ.
ಈ ವರ್ಷಗಳ ದಿನಗಳು ಮತ್ತು ದಿನಾಂಕಗಳು ನಿಖರವಾಗಿ ಒಂದೇ ರೀತಿಯಲ್ಲಿ ಇವೆ. ಆದ್ರೆ ಇದರಲ್ಲಿ ಅಚ್ಚರಿ ಪಡುವ ವಿಚಾರಕ್ಕಿಂತಲೂ ನಾವು ಅನುಸರಿಸುವ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿನ ವ್ಯವಸ್ಥೆ ಕುರಿತಾದ ವಿಚಾರಗಳು ಇದಕ್ಕೆ ಕಾರಣ ಆಗಿವೆ. ಗ್ರೆಗೋರಿಯನ್ ಕ್ಯಾಲೆಂಡರ್‌ನ ಸ್ವರೂಪವು ಕೆಲವು ದಶಕಗಳಲ್ಲಿ ಮತ್ತೆ ಲಿಂಕ್ ಆಗುವ ದಿನಾಂಕಗಳನ್ನ ನೋಡಬಹುದು.
ಇದು ಅಧಿಕ ವರ್ಷದಿಂದ ಹಿಡಿದು ಹಲವು ರೀತಿಯ ವಿದ್ಯಮಾನಗಳಿಂದಾಗಿ ಪುನರಾವರ್ತೀತ ದಿನಾಂಕಗಳು ನೋಡಲು ಸಿಗುತ್ತವೆ. ಹಾಗೆಯೇ 1941 ಹಾಗೂ 2025 ಮಾತ್ರವೇ ಒಂದೇ ರೀತಿಯಾಗಿ ಹೊಂದಣಿಕೆ ಆಗಿರುವುದಲ್ಲ. ಬದಲಿಗೆ ಹಲವು ವರ್ಷಗಳು ಸಹ ಇದೇ ರೀತಿ ಹೊಂದಾಣಿಕೆಯ ದಿನಾಂಕ ಹೊಂದಿರುವುದನ್ನು ಕಾಣಬಹುದು.












Click it and Unblock the Notifications