191 ಜನರನ್ನು ಬಲಿ ತೆಗೆದುಕೊಂಡ ಎಚ್ 1 ಎನ್ 1

ನವದೆಹಲಿ, ಫೆ. 3: ಎಚ್ 1 ಎನ್ 1 ಗೆ ಒಂದು ತಿಂಗಳಲ್ಲಿ 191 ಜನ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸೋಮವಾರ ತಿಳಿಸಿದೆ.

ಜನವರಿ 1 ರಿಂದ ಫೆಬ್ರವರಿ 1 ರ ನಡುವಿನ ಅವಧಿಯಲ್ಲಿ ದೇಶಾದ್ಯತ ಒಟ್ಟು 2,038 ಪ್ರಕರಣಗಳು ಬೆಳಕಿಗೆ ಬಂದಿವೆ. ತೆಲಂಗಾಣದಲ್ಲಿ ಅತಿ ಹೆಚ್ಚು ಅಂದರೆ 629 ಪ್ರಕರಣಗಳು ದಾಖಲಾಗಿದ್ದು 34 ಜನ ಮೃತಪಟ್ಟಿದ್ದಾರೆ. ಗುಜರಾತ್ ನಲ್ಲಿ 309 ಜನರಿಗೆ ಸೊಂಕು ತಗುಲಿದ್ದು 38 ಜನ ಸಾವನ್ನಪ್ಪಿದ್ದಾರೆ.[ಉತ್ತರ ಭಾರತದಲ್ಲಿ ಹಂದಿಜ್ವರಕ್ಕೆ 40 ಜನ ಬಲಿ]

india

ಎಚ್ 1 ಎನ್ 1 ಗೆ ಸಂಬಂಧಿಸಿದ ವರದಿಯನ್ನು ಪ್ರತಿದಿನ ಪ್ರಧಾನಿ ಸಚಿವಾಲಯಕ್ಕೆ ಕಳುಹಿಸಿ ಕೊಡಲಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ 60 ಸಾವಿರ ಟ್ಯಾಮಿಪ್ಲೊ ಮಾತ್ರೆಗಳನ್ನು ಸಂಗ್ರಹಿಸಿಡಲಾಗಿದೆ. ಆರೋಗ್ಯ ಸಚಿವಾಲಯದ ಆದೇಶದ ಮೇರೆಗೆ ವೈದ್ಯರು ಮತ್ತು ಸಿಬ್ಬಂದಿಗೆ 30 ಸಾವಿರ ಸುರಕ್ಷಾ ಕವಚಗಳನ್ನು ಖರೀದಿ ಮಾಡಲು ತೀರ್ಮಾನಿಸಲಾಗಿದೆ.

ಆರೋಗ್ಯ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಎಲ್ಲ ರಾಜ್ಯಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದು ಸಕಲ ಮಾಹಿತಿ ಪಡೆದುಕೊಳ್ಳಲಿದ್ದಾರೆ ಮತ್ತು ಮುನ್ನಚ್ಚರಿಕೆ ಕ್ರಮಗಳ ಕುರಿತಾಗಿಯೂ ತಿಳಿವಳಿಕೆ ನೀಡಲಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+