Breaking: ರಾಜ್ಯಸಭೆಯಿಂದ ಪ್ರತಿಪಕ್ಷದ 19 ಸದಸ್ಯರು ಅಮಾನತು
ನವದೆಹಲಿ, ಜುಲೈ 26: ಮಂಗಳವಾರ ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ 19 ಪ್ರತಿಪಕ್ಷ ಸಂಸದರನ್ನು ರಾಜ್ಯಸಭೆಯಿಂದ ಒಂದು ವಾರದವರೆಗೆ ಅಮಾನತುಗೊಳಿಸಲಾಗಿದೆ.
ಸೋಮವಾರ ಲೋಕಸಭೆಯಲ್ಲಿ ನಾಲ್ವರು ಕಾಂಗ್ರೆಸ್ ಸಂಸದರನ್ನು ಇಡೀ ಮುಂಗಾರು ಅಧಿವೇಶನದ ಅವಧಿಗೆ ಅಮಾನತುಗೊಳಿಸಲಾಗಿತ್ತು. ಮುಂಗಾರು ಅಧಿವೇಶನ ಆಗಸ್ಟ್ 12 ಕ್ಕೆ ಕೊನೆಗೊಳ್ಳುತ್ತದೆ. ಸ್ಪೀಕರ್ ಓಂ ಬಿರ್ಲಾ ಅವರ ಎಚ್ಚರಿಕೆ ನಂತರವೂ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆಯ ಸದಸ್ಯರು ಅಮಾನತುಗೊಂಡಿದ್ದರು.
ಅಮಾನತುಗೊಂಡ ವಿಪಕ್ಷ ಸಂಸದರು ಸದನದಿಂದ ಹೊರ ಹೋಗದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಇಂದು ಸದನವನ್ನು ಒಂದು ಗಂಟೆ ಮುಂದೂಡಲಾಯಿತು. "ಈ ಸರ್ಕಾರವು ಪ್ರಜಾಪ್ರಭುತ್ವವನ್ನು ಅಮಾನತುಗೊಳಿಸಿದೆ" ಎಂದು ತೃಣಮೂಲ ನಾಯಕ ಡೆರೆಕ್ ಒಬ್ರಿಯಾನ್ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸಂಸದರು ಕಳೆದ ಹಲವು ದಿನಗಳಿಂದ ಬೆಲೆ ಏರಿಕೆ, ಸರಕು ಮತ್ತು ಸೇವಾ ತೆರಿಗೆ ಹೆಚ್ಚಳದಂತಹ ವಿಷಯಗಳ ಕುರಿತು ತುರ್ತು ಚರ್ಚೆಗೆ ಒತ್ತಾಯಿಸುತ್ತಿದ್ದಾರೆ. ನಿಯಮ 267 (ರಾಜ್ಯಸಭೆಯಲ್ಲಿ ವ್ಯವಹಾರದ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳು) ಅಡಿಯಲ್ಲಿ ಚರ್ಚೆಗಳನ್ನು ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.
"ನೀವು ನಮ್ಮನ್ನು ಅಮಾನತುಗೊಳಿಸಬಹುದು. ಆದರೆ ನೀವು ನಮ್ಮನ್ನು ಮೌನಗೊಳಿಸಲು ಸಾಧ್ಯವಿಲ್ಲ. ಇದೊಂದು ಶೋಚನೀಯ ಪರಿಸ್ಥಿತಿ. ನಮ್ಮ ಗೌರವಾನ್ವಿತ ಸಂಸದರು ಜನರ ಸಮಸ್ಯೆಗಳನ್ನು ಚರ್ಚೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರನ್ನು ಅಮಾನತುಗೊಳಿಸಲಾಗುತ್ತಿದೆ. ಇದು ಎಲ್ಲಿಯವರೆಗೆ ಮುಂದುವರಿಯುತ್ತದೆ? ಸಂಸತ್ತಿನ ಪಾವಿತ್ರ್ಯವು ಹೆಚ್ಚು ರಾಜಿಯಾಗಿದೆ" ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯರು
ಸುಶ್ಮಿತಾ ದೇವ್, ತೃಣಮೂಲ ಕಾಂಗ್ರೆಸ್
ಮೌಸಮ್ ನೂರ್, ತೃಣಮೂಲ ಕಾಂಗ್ರೆಸ್
ಶಾಂತಾ ಛೆತ್ರಿ, ತೃಣಮೂಲ ಕಾಂಗ್ರೆಸ್
ದೋಲಾ ಸೇನ್, ತೃಣಮೂಲ ಕಾಂಗ್ರೆಸ್
ಸಂಥನು ಸೇನ್, ತೃಣಮೂಲ ಕಾಂಗ್ರೆಸ್
ಅಭಿ ರಂಜನ್ ಬಿಸ್ವರ್, ತೃಣಮೂಲ ಕಾಂಗ್ರೆಸ್
ಎಂಡಿ ನಾದಿಮುಲ್ ಹಕ್, ತೃಣಮೂಲ ಕಾಂಗ್ರೆಸ್
ಎಂ ಹಮಮದ್ ಅಬ್ದುಲ್ಲಾ, ಡಿಎಂಕೆ
ಬಿ ಲಿಂಗಯ್ಯ ಯಾದವ್, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)
ಎ.ಎ. ರಹೀಮ್, ಸಿಪಿಐ(ಎಂ)
ರವಿಹಂದ್ರ ವಡ್ಡಿರಾಜು, ಟಿ.ಆರ್.ಎಸ್
ಎಸ್ ಕಲ್ಯಾಣಸುಂದರಂ, ಡಿಎಂಕೆ
ಆರ್ ಗಿರಂಜನ್, ಡಿಎಂಕೆ
ಎನ್ ಆರ್ ಇಲಾಂಗೋ, ಡಿಎಂಕೆ
ವಿ ಶಿವದಾಸನ್, ಸಿಪಿಐ(ಎಂ)
ಎಂ ಷಣ್ಮುಗಂ, ಡಿಎಂಕೆ
ದಾಮೋದರ ರಾವ್ ದಿವಕೊಂಡ, ಟಿ.ಆರ್.ಎಸ್
ಸಂತೋಷ್ ಕುಮಾರ್ ಪಿ, ಸಿಪಿಐ
ಕನಿಮೊಳಿ ಎನ್ವಿಎನ್ ಸೋಮು, ಡಿಎಂಕೆ












Click it and Unblock the Notifications