ಶಾಲೆಯ ಬಳಿ 18 ಮೃತ ಬಾವಲಿಗಳು ಪತ್ತೆ: ನಿಪಾಹ್ ವೈರಸ್ ಭೀತಿ
ನಹಾನ್, ಮೇ 24: ಹಿಮಾಚಲ ಪ್ರದೇಶದ ಸರ್ಕಾರಿ ಶಾಲೆಯೊಂದರ ಬಳಿ 18 ಕ್ಕೂ ಹೆಚ್ಚು ಸತ್ತ ಬಾವಲಿಗಳು ಪತ್ತೆಯಾಗಿದ್ದು, ಮಾರಣಾಂತಿಕ ನಿಪಾಹ್ ವೈರಸ್ ಭೀತಿಯನ್ನು ಹೆಚ್ಚಿಸಿದೆ.
ಹಿಮಾಚಲ ಪ್ರದೇಶದ ನಹಾನ್ ಎಂಬಲ್ಲಿಯ ಸರ್ಕಾರಿ ಶಾಲೆಯೊಂದರಲ್ಲಿ ಪತ್ತೆಯಾದ ಈ ಮೃತ ಬಾವಲಿಗಳ ದೇಹಗಳನ್ನು ವೈದ್ಯಕೀಯ ಪರೀಕ್ಷೆಗೆ ಕೊಡೊಯ್ಯಲಾಗಿದ್ದು, ನಿಪಾಹ್ ವೈರಸ್ ಸೋಂಕಿನ ಕುರಿತು ಪರೀಕ್ಷೆ ನಡೆಸಲಾಗುತ್ತಿದೆ.
ಇದಕ್ಕೂ ನಿಪಾಹ್ ವೈರಸ್ ಗೂ ಸಂಬಂಧವಿಲ್ಲ, ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಧೈರ್ಯ ನೀಡಿದ್ದರೂ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿದೆ.

ಈಗಾಗಲೇ ಭಾರತದಲ್ಲಿ 10 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಈ ಮಾರಣಾಂತಿಕ ಕಾಯಿಲೆ ಒಂದು ಬಗೆಯ ಬಾವಲಿ(ಫ್ರೂಟ್ ಬ್ಯಾಟ್ಸ್)ಗಳಿಂದ ಹರಡುತ್ತದೆ. ಈ ಸೋಂಕು ರೋಗ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಕಂಡುಬರುತ್ತಿದ್ದು, ಸದ್ಯಕ್ಕೆ ಈ ರೋಗಕ್ಕೆ ಯಾವುದೇ ರೀತಿಯ ಪರಿಣಾಮಕಾರೀ ಚಿಕಿತ್ಸೆ ಪತ್ತೆಯಾಗಿಲ್ಲ.












Click it and Unblock the Notifications