ಜೂನ್ 17 ಕ್ಕೆ 17ನೇ ಲೋಕಸಭೆಯ ಮೊದಲ ಅಧಿವೇಶನ
ನವದೆಹಲಿ, ಜೂನ್ 13: ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 17 ರಂದು ಆರಂಭವಾಗಲಿದೆ. ಇದು ಮೊದಲ ಅಧಿವೇಶನ ಆಗಿದ್ದು, ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ.
ತ್ರಿವಳಿ ತಲಾಖ್ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಸದನದಲ್ಲಿ ಮಂಡನೆ ಆಗಲಿದ್ದು, ಕಾವೇರಿದ ಚರ್ಚೆಯ ಜೊತೆಗೆ ಮೊದಲ ಅಧಿವೇಶನದಲ್ಲಿ ದೇಶಕ್ಕೆ ಪರವಾಗುವ ಯಾವ-ಯಾವ ಮಸೂದೆಗಳನ್ನು ಕೇಂದ್ರ ಸರ್ಕಾರ ಮಂಡಿಸುತ್ತದೆ ಎಂಬ ನಿರೀಕ್ಷೆಯೂ ಇದೆ.
ಜೂನ್ 17 ರಂದು ದೆಹಲಿಯ ಲೋಕಸಭೆ ಭವನದಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಉಭಯ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮತ್ತು ಅದೇ ದಿನ ಹೊಸ ಸಂಸದರು ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.

ಪ್ರಥಮ ಅಧಿವೇಶನವು ಜೂನ್ 17 ರಿಂದ ಜುಲೈ 26 ರ ವರೆಗೆ ನಡೆಯಲಿದ್ದು, ಜುಲೈ 5 ರಂದು ಬಹುನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರುಗಳನ್ನು ಭೇಟಿ ಆಗಿ ಸುಗಮ ಕಲಾಪಕ್ಕೆ ಮನವಿ ಮಾಡಲಾಗುವುದು ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.












Click it and Unblock the Notifications