ಪಾಕ್ ಉದ್ದಟತನಕ್ಕೆ ಮತ್ತೆ ತಕ್ಕ ಉತ್ತರ: 15 ಪಾಕ್ ಸೈನಿಕರ ಹತ್ಯೆ?

Written By:
Subscribe to Oneindia Kannada

ನವದೆಹಲಿ, ಅ 28 (ಪಿಟಿಐ): ಪಾಕಿಸ್ತಾನದ ಉದ್ದಟತನಕ್ಕೆ ಸರಿಯಾದ ಪಾಠ ಕಲಿಸಿದ್ದು, ಇದುವರೆಗೆ ಹದಿನೈದಕ್ಕೂ ಹೆಚ್ಚು ಸೈನಿಕರೂ ಸೇರಿದಂತೆ ಪಾಕ್ ರೇಂಜರ್ ಗಳನ್ನು ಹತ್ಯೆ ಮಾಡಲಾಗಿದೆ ಎಂದು ಗಡಿ ರಕ್ಷಣಾ ಪಡೆ (ಬಿಎಸ್ಎಫ್) ಶುಕ್ರವಾರ (ಅ 28) ಹೇಳಿದೆ.

ಆದರೆ, ತನ್ನ ಆಂತರಿಕ ಸಮಸ್ಯೆಗಳನ್ನು ಬೇರಡೆ ಸೆಳೆಯಲು ಅಲ್ಲಿನ ಸೇನೆ ನಿರಾಧಾರ ಹೇಳಿಕೆ ನೀಡುತ್ತಿದ್ದು, ನಮ್ಮ ಯಾವ ಯೋಧರು ಸಾವನ್ನಪ್ಪಿಲ್ಲ ಎಂದು ಪಾಕ್ ಸೇನೆ ಬಿಎಸ್ಎಫ್ ಹೇಳಿಕೆಗೆ ತಿರುಗೇಟು ನೀಡಿದೆ. (ಪಾಕ್ ಅಧಿಕಾರಿಗಳಿಗೆ ಭಾರತ ಬಿಟ್ಟು ಹೋಗುಲು ಸೂಚನೆ)

ಜಮ್ಮು ಮತ್ತು ಕಾಶ್ಮೀರ ಗಡಿಭಾಗದಲ್ಲಿ ಕದನವಿರಾಮ ಉಲ್ಲಂಘಿಸಿದ ಮತ್ತು ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನದ ಸೇನೆಗೆ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದಾರೆ.

15 Pakistani Rangers killed in retaliatory firing along International Border: BSF

ನಮ್ಮ ಸೈನಿಕರು ನಡೆಸಿದ ಪ್ರತಿದಾಳಿಗೆ ಇದುವರೆಗೆ ಕನಿಷ್ಠವೆಂದರೂ ಸುಮಾರು 15 ಪಾಕ್ ರೇಂಜರ್‍ / ಸೈನಿಕರು ಹತ್ಯೆಯಾಗಿರಬಹುದು ಎಂದು ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿ ಅರುಣ್ ಕುಮಾರ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಒಂದು ವಾರದ ಹಿಂದೆ ಅಂತಾರಾಷ್ಟ್ರೀಯ ಗಡಿಯಲ್ಲಿ ಏಳು ಪಾಕ್ ಸೈನಿಕರನ್ನು ಹತ್ಯೆಗೈಯ್ಯಲಾಗಿದೆ. ಇದುವರೆಗೆ ಎರಡು ಸೈನಿಕರು ಮತ್ತು 13 ರೇಂಜರ್ಸುಗಳು ನಮ್ಮ ಪ್ರತಿದಾಳಿಗೆ ಬಲಿಯಾಗಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿಗಳು ಹೇಳಿದ್ದಾರೆ.

ಕಾಶ್ಮೀರದ ಜೊತೆ ಆಂತರಿಕ ಸಮಸ್ಯೆಯ ವಿಷಯದಿಂದ ಭಾರತೀಯರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಭಾರತ ಈ ರೀತಿಯ ಹೇಳಿಕೆ ನೀಡುತ್ತಿದೆ. ಭಾರತದ ಗಡಿ ರಕ್ಷಣಾ ಪಡೆಯ ಅಧಿಕಾರಿಗಳ ಹೇಳಿಕೆ ಸತ್ಯಕ್ಕೆ ದೂರವಾದದು ಎಂದು ಪಾಕ್ ಸೇನೆ ಹೇಳಿಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BSF on Friday (Oct 28) said it had killed 15 Pakistani rangers / army personnel while retaliating to cross-border shelling and firing. But, Pak army says, Indian claims of killing any Pakistani soldier at the working boundary is absolutely baseless and untrue.
Please Wait while comments are loading...