ದೇಶದ 13 ರಾಜ್ಯಗಳಲ್ಲಿ ಇನ್ನೆರೆಡು ದಿನ ಚಂಡಮಾರುತ, ಮಳೆ
ಬೆಂಗಳೂರು, ಮೇ 07: ದೇಶದ ಒಟ್ಟು 13 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡಮಾರುತ ಮತ್ತು ಭಾರಿ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗ್ರೇಟರ್ ನೋಯ್ಡಾ, ಫರಿದಾಬಾದ್, ಬಲ್ಲಬ್‌ಗಢ್, ಖರ್ಜಾ ಮತ್ತು ಬುಲಂದರಾಬಾದ್ ಶಹರ್‌ಗಳಲ್ಲಿ ಚಂಡ ಮಾರುತ ಬೀಸಲಿದೆ.
ಮಂಗಳವಾರದವರೆಗೂ(ಮೇ 8) ಪ್ರತಿಕೂಲ ಹವಾಮಾನ ಮುಂದುವರೆಯಲಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಚಂಡಮಾರುತ ಏಳುವ ಸಂಭವವಿದೆ. ಮೀರತ್, ಹಾಪುರ್, ಮುಜಾಫುರನಗರ ಮತ್ತು ಬಿಜ್‌ನೂರ್‌ಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ಅಲ್ಲಲ್ಲಿ ಆಲಿಕಲ್ಲು ಮಳೆಯಾಗಲಿದೆ. ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಉತ್ತರ ಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಚಂಡಮಾರುತ ಉಂಟಾಗಿದ್ದರಿಂದ 124 ಮಂದಿ ಗಾಯಗೊಂಡಿದ್ದರು.












Click it and Unblock the Notifications