ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣ ನಂತರ ಆರ್ ಬಿಐನಿಂದ 12 ಲಕ್ಷ ಹೊಸ ನೋಟು ಚಲಾವಣೆಗೆ

|
Google Oneindia Kannada News

ನವದೆಹಲಿ, ಮಾರ್ಚ್ 10: ಅಪನಗದೀಕರಣದ ನಿರ್ಧಾರ ನಂತರ ಹನ್ನೆರಡು ಲಕ್ಷ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಶುಕ್ರವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಫೆಬ್ರವರಿ 24ರವರೆಗಿನ ಮಾಹಿತಿಯಂತೆ 11,64,100 ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು. ಅದಾಗಿ ಎರಡು ವಾರ ಕಳೆದಿರುವುದರಿಂದ ಹನ್ನೆರಡು ಲಕ್ಷ ನೋಟುಗಳಾಗಿರುತ್ತವೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಮಾನ್ಯವಾದ 500, 1000 ನೋಟುಗಳು ಎಷ್ಟು ವಾಪಸಾಗಿವೆ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ನೀಡುವುದು ಕಷ್ಟ ಎಂದು ಜೇಟ್ಲಿ ಉತ್ತರಿಸಿದ್ದಾರೆ.[ಆರ್ ಬಿಐನಲ್ಲಿ ಹಳೇ ನೋಟು ಜಮೆ ಮಾಸಾಂತ್ಯಕ್ಕೆ ಬಂದ್: ಕೇಂದ್ರ]

Arun Jaitely

ಎಲ್ಲ ನೋಟುಗಳ ಪರಿಶೀಲನೆ ಆಗಬೇಕು. ಅಸಲಿ ಹಾಗೂ ನಕಲಿ ನೋಟುಗಳ ವರ್ಗಾವಣೆ ಆಗಬೇಕು. ಇದು ತುಂಬ ಸಮಯ ಬೇಡುವಂಥ ಕೆಲಸ. ಆದ್ದರಿಂದ ಈಗ ಆ ಸಂಖ್ಯೆ ಹೇಳಲು ಸಾಧ್ಯವಿಲ್ಲ. ಒಂದು ಸಲ ಆರ್ ಬಿಐ ಕೆಲಸ ಮುಗಿಸಿದ ನಂತರ ಆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುವುದು ಎಂದರು.

ನೋಟು ಮುದ್ರಣಕ್ಕೆ ತಗುಲುವ ವೆಚ್ಚದಲ್ಲೂ ಒಂದಿಷ್ಟು ವ್ಯತ್ಯಾಸ ಆಗುತ್ತದೆ. ಐನೂರು ರುಪಾಯಿ (ಹೊಸ ಮತ್ತು ಹಳೇ) ನೋಟಿಗೆ 2.87 ರುನಿಂದ 3.09 ರು. 1,000ದ ನೋಟಿಗೆ 3.34ರುನಿಂದ 3.77 ಆಗ್ತಿತ್ತು. ಈಗ 2,000ದ ನೋಟಿಗೂ 1,000ದ ನೋಟಿಗೆ ಆಗುತ್ತಿದ್ದಷ್ಟೇ ವೆಚ್ಚವಾಗುತ್ತಿದೆ ಎಂದಿದ್ದಾರೆ.[ಚಲಾವಣೆಗೆ ಬರಲಿದೆ ಹೊಸ 10 ರುಪಾಯಿ ನೋಟು]

ನೇರ ತೆರಿಗೆ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ ಜೇಟ್ಲಿ, 2016ರ ಡಿಸೆಂಬರ್ ಗೆ 1,40,824 ಕೋಟಿ ಸಂಗ್ರಹವಾಗಿದೆ ಎಂದ ಅವರು, ಡಿಸೆಂಬರ್ 2015ರಲ್ಲಿ 1,35,660 ಕೋಟಿ ಸಂಗ್ರಹವಾಗಿತ್ತು ಎಂದು ತಿಳಿಸಿದರು.

English summary
Around 12 lakh new currency notes have been infused into the market by the Reserve Bank of India ever since the remonetisation process has started, Finance Minister Arun Jaitley said Friday in Lokasabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X