ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 12 ಚೀತಾಗಳನ್ನು ಹೊತ್ತುತಂದ ಸಿ-17 ಗ್ಲೋಬ್ ಮಾಸ್ಟರ್
ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 12 12 ಚೀತಾಗಳನ್ನು ಕರೆತರಲಾಗಿದೆ. ಹಾಗಾದರೆ ಈ ಚಿರತೆಗಳನ್ನು ಹೇಗೆ ತಂದರು? ಇವುಗಳನ್ನು ಯಾವ ರಾಜ್ಯಕ್ಕೆ ಸ್ಥಳಾಂತರಿಸಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಗ್ವಾಲಿಯರ್, ಫೆಬ್ರವರಿ, 18: ಈ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ವಿದೇಶದಿಂದ ಚೀತಾಗಳನ್ನು ತರಿಸಲಾಗಿತ್ತು. ಇದೀಗ ಮತ್ತೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 12 ಚೀತಾಗಳನ್ನು ಕರೆತರಲಾಗಿದೆ. ಹಾಗಾದರೆ ಈ ಚಿರತೆಗಳನ್ನು ಹೇಗೆ ತಂದರು? ಹಾಗೂ ಇದರಲ್ಲಿ ಹೆಣ್ಣು ಚಿರತೆಗಳೆಷ್ಟು, ಗಂಡು ಚಿರತೆಗಳೆಷ್ಟು? ಹಾಗೆಯೇ ಇವುಗಳನ್ನು ಯಾವ ರಾಜ್ಯಕ್ಕೆ ಸ್ಥಳಾಂತರಿಸಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತರಲಾಗಿದೆ. ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನವು ಈ ಚಿರತೆಗಳನ್ನು ಹೊತ್ತುತಂದಿದೆ.

12 ಚೀತಾಗಳನ್ನು ಹೊತ್ತುತಂದ ಕಾರ್ಗೋ ವಿಮಾನ
ಸಿ-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನವು 12 ಚೀತಾಗಳನ್ನು ಹೊತ್ತು ಮಧ್ಯಪ್ರದೇಶದ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಚೀತಾಗಳನ್ನು ಹೆಲಿಕಾಪ್ಟರ್ ಮೂಲಕ ಕುನೊಗೆ ಕರೆದೊಯ್ಯಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚಿರತೆಗಳನ್ನು ಕೆಲವು ದಿನಗಳವರೆಗೆ ಚಿಕ್ಕ ಪ್ರದೇಶದಲ್ಲಿ ಇರಿಸಲಾಗುತ್ತದೆ. ಇಲ್ಲಿನ ಪರಿಸರಕ್ಕೆ ಹೊಂದಿಕೊಂಡ ನಂತರ ಇವುಗಳನ್ನು ಅರಣ್ಯಕ್ಕೆ ಬಿಡಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ದ. ಆಫ್ರಿಕಾದಿಂದ 12 ಚಿರತೆಗಳ ಆಗಮನ
ಚೀತಾ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ಪ್ರಕಾರ, ದಕ್ಷಿಣ ಆಫ್ರಿಕಾದಿಂದ ತರಲಾಗುತ್ತಿರುವ ಈ 12 ಚೀತಾಗಳಲ್ಲಿ 7 ಗಂಡು ಮತ್ತು 5 ಹೆಣ್ಣು ಚೀತಾಗಳು ಇವೆ. ಈ ಮೊದಲು ಅಂದರೆ ಸೆಪ್ಟೆಂಬರ್ 2020ರಲ್ಲಿ ನಮೀಬಿಯಾದಿಂದ 8 ಚಿರತೆಗಳನ್ನು ತರಲಾಗಿತ್ತು. ಈ ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿತ್ತು.

12 ಹೊಸ ಚೀತಾಗಳ ಆಗಮನದ ನಂತರ, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸಂಖ್ಯೆ 20ಕ್ಕೆ ಏರಿಕೆ ಆಗಲಿದೆ. ಪರಿಸರ ವ್ಯವಸ್ಥೆಯನ್ನು ಸಮತೋಲನಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರವು ಈ ಹಿಂದೆ ಆಫ್ರಿಕನ್ ದೇಶಗಳಿಂದ ಚಿರತೆಗಳನ್ನು ತರಲು ಯೋಜನೆಯನ್ನು ಸಿದ್ಧಪಡಿಸಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿಯ ಯೋಜನೆಯಿಂದಾಗಿ 71 ವರ್ಷಗಳ ನಂತರ ಮತ್ತೊಮ್ಮೆ ಭಾರತದಲ್ಲಿ ಚೀತಾಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನಬಹುದಾಗಿದೆ.












Click it and Unblock the Notifications