ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಒಟ್ಟು ಎಷ್ಟು ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ, ಎಲ್ಲಿ ಹೆಚ್ಚು?

|
Google Oneindia Kannada News

ನವದೆಹಲಿ, ಮೇ 26: ದೇಶದಲ್ಲಿ ಕೊರೊನಾ ಸೋಂಕಿನ ಜತೆಗೆ ಬ್ಲ್ಯಾಕ್ ಫಂಗಸ್ ಕೂಡ ಆತಂಕವನ್ನು ಸೃಷ್ಟಿಸುತ್ತಿದೆ.

ದೇಶದಲ್ಲಿ ಒಟ್ಟು 11,717 ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿವೆ, ಗುಜರಾತಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಜೀವ ಉಳಿಸಲು ಕೋವಿಡ್‌ ಲಸಿಕೆ ಅತ್ಯಗತ್ಯ - ಪಿಎಂ ಮೋದಿಜೀವ ಉಳಿಸಲು ಕೋವಿಡ್‌ ಲಸಿಕೆ ಅತ್ಯಗತ್ಯ - ಪಿಎಂ ಮೋದಿ

ಗುಜರಾತ್, ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ, ಕಳೆದ ವಾರ ಕೇಂದ್ರ ಆರೋಗ್ಯ ಸಚಿವಾಲಯವು ಕಪ್ಪು ಶಿಲೀಂಧ್ರವನ್ನು ಸಾಂಕ್ರಾಮಿಕ ಪಿಡುಗು ಎಂದು ಘೋಷಣೆ ಮಾಡಿದೆ. ಇದು ಕೊರೊನಾ ಜತೆಜತೆಗೆ ಮತ್ತೊಂದು ಭಯವನ್ನೇ ಸೃಷ್ಟಿಸಿದೆ.

11,717 Cases Of Black Fungus So Far In India, Gujarat Has Most Cases

ಮಹಾರಾಷ್ಟ್ರದಲ್ಲಿ ಇದುವರೆಗೆ 2770 ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿವೆ, ಗುಜರಾತ್‌ನಲ್ಲಿ ಇಲ್ಲಿಯವರೆಗೆ 2859, ಆಂಧ್ರಪ್ರದೇಶದಲ್ಲಿ 768 ಪ್ರಕರಣಗಳಿವೆ. ಈ ಕುರಿತು ಕೇಂದ್ರ ಸಚಿವ ಡಿವಿ ಸದಾನಂದಗೌಡ ಟ್ವೀಟ್ ಮಾಡಿದ್ದಾರೆ. ದೆಹಲಿಯಲ್ಲಿ ಇದುವರೆಗೆ 620 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ, ಕೇಂದ್ರ ಸಚಿವರು ನೀಡಿರುವ ಮಾಹಿತಿಯಲ್ಲಿ 120 ಪ್ರಕರಣಗಳಿವೆ.

ಬ್ಲ್ಯಾಕ್ ಫಂಗಸ್ ಇರುವವರಿಗೆ, ಕಣ್ಣು, ಮೂಗಿನಲ್ಲಿ ನೋವು, ಕಣ್ಣು ಕೆಂಪು ಬಣ್ಣಕ್ಕೆ ತಿರುಗುವುದು, ಜ್ವರ, ತಲೆನೋವು, ಕಫ, ಉಸಿರಾಟದ ಸಮಸ್ಯೆ, ವಾಕರಿಕೆ ಲಕ್ಷಣಗಳಿರುತ್ತದೆ.

ರೋಗದ ಕಾರಣದಿಂದ ನಾಲಿಗೆ ರುಚಿಗೆಟ್ಟಿರುತ್ತದೆ. ಕೊವಿಡ್​ ಸೋಂಕಿನಿಂದ ದೂರವಾದರೂ ಕೂಡಾ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ದಿನಕ್ಕೆ ಎರಡರಿಂದ ಮೂರು ಬಾರಿ ಹಲ್ಲುಜ್ಜುವುದರ ಜತೆಗೆ ಆಹಾರ ಸೇವಿಸಿದ ಬಳಿಕವೇ ಬಾಯಿ ಮುಕ್ಕಳಿಸುವುದನ್ನು ರೂಢಿಯಲ್ಲಿಟ್ಟುಕೊಳ್ಳಿ.

ದಿನನಿತ್ಯವೈ ಬಾಯಿ ಮುಕ್ಕಳಿಸಬಹುದು ಆದರೆ ಕೆಲವು ಬಾರಿ ನಾಲಿಗೆಗೆ ಅಂಟಿಕೊಂಟ ಆಹಾರ ಪದಾರ್ಥಗಳು ನಾಲಿಗೆಯಿಂದ ಸ್ವಚ್ಛವಾಗಿರುವುದಿಲ್ಲ. ಹಾಗಾಗಿ ನಾಲಿಗೆಯನ್ನು ಟಂಗ್​ ಕ್ಲೀನರ್​ ಮೂಕ ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ನಾಲಿಗೆಗೆ ಅಂಟಿಕೊಂಡಿರುವ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಬಹುದು.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮನೆಯ ಸದಸ್ಯರು ಇರಿಸಿಕೊಳ್ಳುವ ಟೂತ್​ ಬ್ರಶ್​ ಮತ್ತು ಟಂಗ್​ ಕ್ಲೀನರ್​ ಜತೆಗೆ ಸೋಂಕಿಗೆ ಒಳಗಾದ ವ್ಯಕ್ತಿಯ ಬ್ರಶ್​ ಮತ್ತು ಟಂಗ್​ ಕ್ಲೀನರ್​ಗಳನ್ನು ಇರಿಸಿಕೊಳ್ಳುವುದನ್ನು ಆದಷ್ಟು ತಪ್ಪಿಸಿ.

English summary
India has so far recorded 11,717 cases of Mucormycosis or Black Fungus with Gujarat, Maharashtra and Andhra Pradesh logging the highest number of cases, as per the latest government data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X