ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಪ್ಪಾ...ಮಂಗ ಬಂತು ಓಡ್ರೋ: 11 ಜನರಿಗೆ ಕಚ್ಚಿದ ಮಂಗ ಹಿಡಿಯಲು ಅರಣ್ಯ ತಂಡದ ಹರಸಾಹಸ

|
Google Oneindia Kannada News

ರಾಯ್ ಪುರ್, ನವೆಂಬರ್ 3: ಛತ್ತೀಸ್‌ಗಢದ ಅರಣ್ಯದಿಂದ ಆನೆ ಕರಡಿಗಳ ಕಾಟದ ಬಳಿಕ ಈಗ ಕಾಡಿನ ಮಂಗಗಳು ಸಹ ವಸತಿ ಪ್ರದೇಶಗಳಿಗೆ ನುಗ್ಗಿ ತೊಂದರೆ ಕೊಡಲು ಪ್ರಾರಂಭಿಸಿವೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಮಂಗಗಳು ಭೀತಿ ಮೂಡಿಸಿದ್ದು ಮಕ್ಕಳಿರುವ ಮನೆಗಳಲ್ಲಿ ಮಂಗಗಳು ದಾಳಿಗೆ ಮುಂದಾಗುತ್ತಿವೆ. ನಗರ ಪ್ರದೇಶದಲ್ಲಿ ಮಂಗಗಳ ಕಾಟದಿಂದ ಜನರು ಬೇಸತ್ತು ಹೋಗಿದ್ದಾರೆ. ಇಂತಹ ಮಂಗವೊಂದು ದುರ್ಗ ಜಿಲ್ಲೆಯ 6 ವಾರ್ಡ್‌ಗಳ ಜನರಿಗೆ ಜೀವನ ನಿರ್ವಹಣೆಯನ್ನು ಕಷ್ಟಕರವಾಗಿಸಿದೆ. ಹಗಲು ರಾತ್ರಿ ಎನ್ನದೇ ಜನ ಮಂಗನ ದಾಳಿಯ ಬೆದರಿಕೆಯಲ್ಲಿ ಜೀವನ ಸಾಗಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಮಂಗ ಅದ್ಯಾವಾಗ ಯಾರ ಮೇಲೆ ದಾಳಿ ಮಾಡುತ್ತೋ ತಿಳಿಯದ ಜನ ಮಕ್ಕಳು ತನ್ನವರನ್ನು ಜೊತೆಯಲ್ಲಿಟ್ಟುಕೊಂಡು ಓಡಾಡುವಂಥ ಸ್ಥಿತಿ ನಿರ್ಮಾಣವಾಗಿದೆ.

ತನ್ನ ಹಿಂಡಿನೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಮಂಗ ಕಾಲಕ್ರಮೇಣ ಹಿಂಡಿನಿಂದ ಬೇರ್ಪಟ್ಟು 11 ಜನರ ಮೇಲೆ ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡ ಸ್ಥಳೀಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಹಲವರು ಆಸ್ಪತ್ರೆಯಿಂದ ಡಿಸಾರ್ಚ್‌ ಆಗಿದ್ದರೆ ಇನ್ನಿಬ್ಬರು ಆಸ್ಪತ್ರೆಯಲ್ಲಿ ಇದ್ದು ಅವರಿಗೆ ತೀವ್ರ ಗಾಯಗಳಾಗಿವೆ. ಇದೀಗ ಕಠಿಣ ಪರಿಶ್ರಮದ ನಂತರ ಇಲಾಖೆಯ ತಂಡ ಮಂಗವನ್ನು ಹಿಡಿದಿದೆ. ಆ ನಂತರ ಕೋಟೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇಬ್ಬರ ಸ್ಥಿತಿ ಚಿಂತಾಜನಕ

ಇಬ್ಬರ ಸ್ಥಿತಿ ಚಿಂತಾಜನಕ

ಮಂಗನ ಕಾಟಕ್ಕೆ ತುತ್ತಾದ ಕೋಟೆಯ ಅರ್ಧ ಡಜನ್‌ಗೂ ಹೆಚ್ಚು ವಾರ್ಡ್‌ಗಳ ನಿವಾಸಿಗಳು ಇಂದು ಕೋತಿಯನ್ನು ಹಿಡಿದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ 1 ವಾರದಿಂದ ಅರಣ್ಯದಲ್ಲಿ ಅಲೆದಾಡಿ ಕೋಟೆಗೆ ಆಗಮಿಸುತ್ತಿದ್ದ ಮಂಗನಿಗೆ ವಾರ್ಡ್ ನಿವಾಸಿಗಳು ತೀವ್ರ ಭಯಗೊಂಡಿದ್ದರು. ಈ ಕೋತಿ ನಿರಂತರವಾಗಿ ಜನರನ್ನು ಕಚ್ಚಿ ಗಾಯಗೊಳಿಸುತ್ತಿತ್ತು. ಇದುವರೆಗೆ 11ಕ್ಕೂ ಹೆಚ್ಚು ಜನರಿಗೆ ಈ ಮಂಗ ಕಚ್ಚಿದೆ. ಈ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಹಿಳೆಯ ಸ್ಥಿತಿ ಚಿಂತಾಜನಕ

ಮಹಿಳೆಯ ಸ್ಥಿತಿ ಚಿಂತಾಜನಕ

ತನ್ನ ಹಿಂಡಿನಿಂದ ಕಾಡಿನಲ್ಲಿ ಅಲೆದಾಡುವ ಮಂಗ 6-7 ದಿನಗಳಿಂದ ದುರ್ಗದ ಪಾಲಿಕೆಯ ವಾರ್ಡ್‌ಗಳ ನಿವಾಸಿಗಳಿಗೆ ಕಿರುಕುಳ ನೀಡುತ್ತಲೇ ಇತ್ತು. ಈ ರೌಡಿ ಮತ್ತು ಅಪಾಯಕಾರಿ ಕೋತಿ ಜನರ ಮನೆಗಳಿಗೆ ನುಗ್ಗಿ ಜನರನ್ನು ಚದುರಿಸಲು ಪ್ರಾರಂಭಿಸಿ ಮನೆಯಲ್ಲಿದ್ದ ಆಹಾರ ಪದಾರ್ಥವನ್ನು ಕದಿಯುತ್ತಿತ್ತು. ಮನೆಯಲ್ಲಿದ್ದ ಮಕ್ಕಳ ಮೇಲೆ ಸಲೀಸಾಗಿ ದಾಳಿಗೆ ಮುಂದಾಗುತ್ತಿತ್ತು. ಈ ಮಂಗನ ಕಾಟ ಅದೆಷ್ಟು ಇತ್ತು ಅಂದರೆ ಮಂಗನ ಭಯದಿಂದಾಗಿ ಜನರು ಮನೆಯ ಹೊರಗೆ ಬಟ್ಟೆ ಒಣಗಿಸುವುದನ್ನು ನಿಲ್ಲಿಸಿದ್ದರು. ಈ ಮಂಗಕ್ಕೆ ಬೆದರಿಕೆ ಹುಟ್ಟಿಸಿದರೆ ಅಂಥ ವಾರ್ಡ್ ನಿವಾಸಿಗಳಿಗೆ ಕಚ್ಚುವ ಮೂಲಕ ಗಾಯಗೊಳಿಸುತ್ತಿತ್ತು. ಕೋತಿ ಇದುವರೆಗೆ 11 ನಾಗರಿಕರನ್ನು ಕಚ್ಚಿದೆ. ಎಸ್ಪಿ ಬಂಗಲೆ ಬಳಿ ಪೂರ್ಣಿಮಾ ಎಂಬ ಮಹಿಳೆಗೆ ಕೋತಿ ಕಚ್ಚಿದ್ದು ಮಹಿಳೆ ಸ್ಥತಿ ಚಿಂತಾಜನಕವಾಗಿದೆ.

ಇಬ್ಬರ ಸ್ಥಿತಿ ಚಿಂತಾಜನಕ

ಇಬ್ಬರ ಸ್ಥಿತಿ ಚಿಂತಾಜನಕ

ಯಾವಾಗಲು ತನ್ನ ಹಿಂಡಿನೊಂದಿಗೆ ಕೋತಿ ಅಲೆದಾಡುತ್ತಿತ್ತು. ಬಳಿಕ ಅದು ತನ್ನ ಹಿಂಡಿನಿಂದ ಬೇರ್ಪಟ್ಟಿತು. ಬಳಿಕ ಈ ಕೋತಿ ಕೋಪಗೊಂಡಿತು ಎಂದು ಡಿಎಫ್‌ಒ ದುರ್ಗಾ ಹೇಳಿದ್ದಾರೆ. ಮಂಗ ಕಚ್ಚಿ ಗಾಯಗೊಂಡವರ ಪೈಕಿ 9 ಮಂದಿ ಚೇತರಿಸಿಕೊಂಡಿದ್ದಾರೆ. ಇಬ್ಬರು ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕಸರ್ದಿಹ್ ಪ್ರದೇಶದಲ್ಲಿ ಕೋತಿಯನ್ನು ಹಿಡಿದ ನಂತರ ವಾರ್ಡ್‌ನ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಂದು ಬೆಳಗ್ಗೆಯಿಂದ ರಾಜನಂದಗಾಂವ್ ಮತ್ತು ರಾಯ್‌ಪುರದ ಅರಣ್ಯ ಇಲಾಖೆಯ ತಂಡ ಈ ಉಗ್ರ ಕೋತಿಯನ್ನು ಹಿಡಿಯಲು ಯಶಸ್ವಿಯಾಗಿದೆ.

ಕೊನೆಗೂ ಸಿಕ್ಕಿಬಿದ್ದ ಮಂಗ

ಕೊನೆಗೂ ಸಿಕ್ಕಿಬಿದ್ದ ಮಂಗ

ಈ ದಾಳಿಕೋರ ಕಪಿಯನ್ನು ಹಿಡಿಯಲು ಮೂರು ಜಿಲ್ಲೆಗಳ ರಕ್ಷಣಾ ತಂಡ ಸಾಕಷ್ಟು ಬೆವರು ಹರಿಸಬೇಕಾಯಿತು. ಅರಣ್ಯ ಇಲಾಖೆಯ ದುರ್ಗ್ ರಾಜನಂದಗಾಂವ್ ಮತ್ತು ರಾಯಪುರದ ರಕ್ಷಣಾ ತಂಡದ ನಿರಂತರ ಪ್ರಯತ್ನದ ಬಳಿಕ ಇಂದು ಕೋತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅರಣ್ಯ ಇಲಾಖೆಯ ತಂಡ ಕಳೆದ ಎರಡು ದಿನಗಳಿಂದ ಮಂಗನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು. ಆದರೆ ಕೋತಿಯು ತಂಡದ ಮೇಲೆ ದಾಳಿ ಮಾಡುತ್ತಿತ್ತು. ಇಂದು ಕಸರ್ದಿಹ್ ಕೋಟೆ ಪ್ರದೇಶದಿಂದ ಈ ಉಗ್ರ ಕೋತಿಯನ್ನು ಹಿಡಿಯಲಾಗಿದೆ ಎಂದು ಡಿಎಫ್‌ಒ ದುರ್ಗ್ ಶಶಿ ಕುಮಾರ್ ತಿಳಿಸಿದ್ದಾರೆ.

English summary
11 people were injured in Chhattisgarh monkey attack, condition of two is critical. Forest department has scrambled to catch Monkey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X