ಗುಜರಾತ್: 2ನೇ ಹಂತದ ಚುನಾವಣೆಯಲ್ಲಿ 101 ಕ್ರಿಮಿನಲ್ ಗಳು

By: ವಿಕಾಸ್ ನಂಜಪ್ಪ
Subscribe to Oneindia Kannada
   ಗುಜರಾತ್ ವಿಧಾನಸಭಾ ಚುನಾವಣೆ 2017 : 101 ಅಭ್ಯರ್ಥಿಗಳಿಗೆ ಇದೆ ಕ್ರಿಮಿನಲ್ ಹಿನ್ನೆಲೆ

   ಅಹಮದಾಬಾದ್, ಡಿಸೆಂಬರ್ 7: ಗುಜರಾತ್ ವಿಧಾನಸಭೆಗೆ ಎರಡನೇ ಹಂತದ ಮತದಾನ ಇದೇ ಡಿಸೆಂಬರ್ 14ರಂದು ನಡೆಯಲಿದೆ. ಈ ಚುನಾವಣೆಗೆ 822 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು ಇವರಲ್ಲಿ 101 ಜನರು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆ.

   101ರಲ್ಲಿ 64 ಜನರು ತಮ್ಮ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದಾಗಿ ಹೇಳಿಕೊಂಡಿದ್ದಾರೆ.

   ಇಂಡಿಯಾ ಟಿವಿ ವಿಎಂಆರ್ ಸಮೀಕ್ಷೆ: ಬಿಜೆಪಿಗೆ 106-116 ಸೀಟುಗಳು ಪಕ್ಕಾ!

   ಇಬ್ಬರು ಅಭ್ಯರ್ಥಿಗಳ ಮೇಲೆ ಕೊಲೆ, 7 ಜನರ ಮೇಲೆ ಕೊಲೆ ಯತ್ನ, ಇನ್ನಿಬ್ಬರ ಮೇಲೆ ಅತ್ಯಾಚಾರ, ಮೂವರ ಮೇಲೆ ಕಿಡ್ನಾಪ್ ಪ್ರಕರಣಗಳಿವೆ. ಪಕ್ಷವಾರು ನೋಡಿದರೆ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದ್ದು 88ರಲ್ಲಿ 25 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆ. ಇನ್ನು ಈ ವಿಚಾರದಲ್ಲಿ ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಕೇಸರಿ ಪಕ್ಷದ 86ರಲ್ಲಿ 22 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದಾರೆ.

   101 candidates with criminal background in 2nd phase of Gujarat polls

   ಬಿಎಸ್ಪಿಯ 74ರಲ್ಲಿ 6, ಎನ್ಸಿಪಿಯ 27ರಲ್ಲಿ 4, ಎಎಪಿಯ 7ರಲ್ಲಿ ಇಬ್ಬರು ಹಾಗೂ ಇತರ 23 ಅಭ್ಯರ್ಥಿಗಳು ತಮ್ಮ ಮೇಲೆ ಕ್ರಿಮಿನಲ್ ಪ್ರಕರಣ ಇರುವುದಾಗಿ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದಾರೆ.

   ಇನ್ನು ಎರಡನೇ ಹಂತದ ಮತದಾನ ನಡೆಯಲಿರುವ 93 ವಿಧಾನಸಭೆ ಕ್ಷೇತ್ರಗಳಲ್ಲಿ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕ್ರಿಮಿನಲ್ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

   ಗುಜರಾತ್: ಟೈಮ್ಸ್ ನೌ-ವಿಎಂಆರ್ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯ

   ಆರ್ಥಿಕ ಹಿನ್ನಲೆ

   ಇದೇ ವೇಳೇ 822 ಅಭ್ಯರ್ಥಿಗಳಲ್ಲಿ 199 ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಬಿಜೆಪಿಯ 86ರಲ್ಲಿ 66, ಕಾಂಗ್ರೆಸ್ ನ 88ರಲ್ಲಿ 67, ಎನ್ಸಿಪಿಯ 27ರಲ್ಲಿ 10, ಎಎಪಿಯ 7ರಲ್ಲಿ 5, ಬಿಎಸ್ಪಿಯ 74ರಲ್ಲಿ ಮೂರು ಮತ್ತು ಇತರ 31 ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.

   ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿ ರೂ. 2.39 ಕೊಟಿ ರೂಪಾಯಿಗಳಾಗಿವೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   In the second phase of the Gujarat assembly elections 101 out of the 822 candidates have declared pending criminal cases against them. Out of the 101, there are 64 candidates who have declared serious criminal cases against them.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ