Mann Ki Baat: 'ಮನ್ ಕೀ ಬಾತ್' 100ನೇ ಸಂಚಿಕೆಯಲ್ಲಿ ಮೋದಿ ಮನದಾಳದ ಮಾತು
ಬೆಂಗಳೂರು ಏಪ್ರಿಲ್ 30: ಬೆಂಗಳೂರಿನ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' 100ನೇ ಸಂಚಿಕೆಯಲ್ಲಿ ವಿಶೇಷ ಭಾಷಣ ಮಾಡಿದರು. ದೇಶದ ನಾಲ್ಕು ಲಕ್ಷ ಸ್ಥಳಗಳಲ್ಲಿ ನರೇಂದ್ರ ಮೋದಿ 'ಮನ್ ಕೀ ಬಾತ್' ಕೇಳಲು ವ್ಯವಸ್ಥೆ ಮಾಡಲಾಗಿತ್ತು. ದೇಶದೆಲ್ಲೆಡೆ ಲಕ್ಷಾಂತರ ಜನ ಮೋದಿ ಅವರ ಭಾಷಣ ಆಲಿಸಿದರು.
ಪ್ರಸಾರ ಭಾರತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾಷಣ ವೇಳೆ ಮೋದಿ ಅವರು,'ನಮ್ಮ ನಿಮ್ಮ ಮನ್ ಕೀ ಬಾತ್ ಇಂದು 100ನೇ ಸಂಚಿಕೆಗೆ ಕಾಲಿಟ್ಟಿದೆ. 99 ಸಂಚಿಕೆಯನ್ನು ಪೂರೈಸಿರುವುದು ಸುಲಭದ ವಿಷಯವಲ್ಲ. ಪ್ರತೀ ತಿಂಗಳು ಜನರು ಕಳಿಸುತ್ತಿದ್ದ ಸಂದೇಶಗಳನ್ನು ನಾನು ಓದುತ್ತಿದ್ದೆ' ಎಂದು ಹೇಳುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.
'ದೇಶದ ಮೂಲೆ ಮೂಲೆಯಿಂದ ಬರುವ ವಿಚಾರಗಳು ಬೇರೆನೇ ಆಗಿರುತ್ತವೆ. ಹೀಗಾಗಿ ಮನ್ ಕೀ ಬಾತ್ ನನಗೆ ದೇವರಿದ್ದಂತೆ. ನನಗೆ ಈ ವಿಚಾರದಲ್ಲಿ ತುಂಬಾ ಸಂತೋಷವಿದೆ. 100ನೇ ಸಂಚಿಕೆಯಲ್ಲಿ ಮಾತನಾಡಲು ತಾನು ತುಂಬಾ ಉತ್ಸೂಹಕನಾಗಿದ್ದೇನೆ. ನನಗೆ ತುಂಬಾ ಕರೆಗಳು ಸಂದೇಶಗಳು ಬರುತ್ತಿವೆ. ಇಂದು ಹೊಸ ಸಂಕಲ್ಪದೊಂದಿಗೆ ಮುಂದೆ ಹೋಗುತ್ತಿದ್ದೇವೆ. ನಿಮ್ಮ ವಿಚಾರಗಳೊಂದಿಗೆ ಈ ಸಂಚಿಕೆಯನ್ನು ಮುಂದುರೆಸಲು ನಾನು ತುಂಬಾ ಉತ್ಸಾಹಕನಾಗಿದ್ದೇನೆ' ಎಂದರು.

'ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ, ಸಾಧನೆಗಳ ಬಗ್ಗೆ ಮಾಹಿತಿಯನ್ನು ನಾನು ಪಡೆದಿದ್ದೇನೆ. ನಾರಿಶಕ್ತಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಮೇಕ್ ಇನ್ ಇಂಡಿಯಾ ದೇಶದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ದೇಶವಾಸಿಗಳು ಮನ್ ಕೀ ಬಾತ್ ಕಾರ್ಯಕ್ರಮವನ್ನು ಮೆಚ್ಚಿದ್ದಾರೆ. ಓಕಲ್ ಫಾರ್ ಲೋಕಲ್ ಶಕ್ತಿ ಏನೆಂದು ಎಲ್ಲರಿಗೂ ಗೊತ್ತಾಗಿದೆ' ಎಂದರು.
'ದೇಶದಲ್ಲಿ ಹಲವಾರು ಪ್ರತಿಭಾವಂತರಿದ್ದಾರೆ ಅವರನ್ನು ಗುರುತಿಸಬೇಕಿದೆ. ಓಕಲ್ ಫಾರ್ ಲೋಕಲ್ ಇವತ್ತು ಗ್ಲೋಬಲ್ ಲೇವಲ್‌ಗೆ ಬೆಳದಿದೆ. ಮನ್ ಕೀ ಬಾತ್ ಪ್ರತಿಯೊಬ್ಬರ ಸಾಧನೆಯನ್ನು ಅನಾವರಣಗೊಳಿಸಲು ವೇದಿಕೆಯಾಗಿದೆ. ಜೊತೆಗೆ ಬೇರೆಯವರಿಂದ ಹಲವಾರು ವಿಚಾರಗಳನ್ನು ಕಲಿಯಲು ಸಾಧ್ಯವಾಗಿದೆ. ಪ್ರತಿಯೊಂದು ಸಂಚಿಕೆಯಿಂದ ಒಂದೊಂದು ವಿಷಯ ಕಲಿಯಲು ಸಾಧ್ಯವಾಗಿದೆ. ಹೀಗಾಗಿ ಮನ್ ಕೀ ಬಾತ್ ಸಮಾಜಕ್ಕೆ ಪ್ರೇರಣೆಯಾಗಿ, ಜನಾಂದೋಲವಾಗಿ ಮಾರ್ಪಟ್ಟಿದೆ' ಎಂದು ಮೋದಿ ಹೇಳಿದರು.
'ದೇಶದಲ್ಲಿ ಪ್ರವಾಸೋದ್ಯಮ ದಿನದಿನಕ್ಕೂ ಹೆಚ್ಚಾಗುತ್ತಿದೆ. ದೇಶದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಶುಚಿಯಾಗಿಡುವುದು ಪ್ರತಿಯೊಬ್ಬರ ಕರ್ತವ್ಯವವಾಗಿದೆ' ಎಂದರು.
ಈ ವೇಳೆ ಹಲವರೊಂದಿಗೆ ಮೋದಿ ಮಾತನಾಡಿದರು. ದೇಶದ ಕೆಲ ಭಾಗಗಳಿಂದ ಫೋನ್ ಕಾಲ್ ಮಾಡಿದ ಕೆಲವು ಜನ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಅವರೊಂದಿಗೆ ಮಾತನಾಡಿದರು. ಜೊತೆಗೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನ 100 ನೇ ಸಂಚಿಕೆಯ ಐತಿಹಾಸಿಕ ಕ್ಷಣವನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನೇರ ಪ್ರಸಾರ ಮಾಡಲಾಯಿತು. ಪ್ರಧಾನಿ ಮೋದಿ ಅವರು ಆಯೋಜಿಸಿದ್ದ 'ಮನ್ ಕಿ ಬಾತ್' ರೇಡಿಯೊದಲ್ಲಿ ವಿವಿಧ ವಿಷಯಗಳ ಕುರಿತು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನು ಮೊದಲು ಅಕ್ಟೋಬರ್ 3, 2014 ರಂದು ಪ್ರಸಾರ ಮಾಡಲಾಯಿತು. ಇದು ಪ್ರತಿ ತಿಂಗಳ ಕೊನೆಯ ಭಾನುವಾರದಂದು 11 ಗಂಟೆಗೆ ಆಲ್ ಇಂಡಿಯಾ ರೇಡಿಯೋ (AIR) ಮತ್ತು ದೂರದರ್ಶನ (DD) ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುತ್ತದೆ. 30 ನಿಮಿಷಗಳ ಕಾರ್ಯಕ್ರಮದ 100 ನೇ ಸಂಚಿಕೆ ಏಪ್ರಿಲ್ 30 ರಂದು ಪ್ರಸಾರ ಮಾಡಲಾಯಿತು.












Click it and Unblock the Notifications