ರಾಮಮಂದಿರ ನಿರ್ಮಾಣ, ಭಾರತಕ್ಕೆ ಬಂದಿಳಿದ ಎನ್ನಾರೈ ನಿಯೋಗ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರ ಜತೆ ಚರ್ಚಿಸಲು ನೂರಾರು ಮಂದಿ ಎನ್ನಾರೈಗಳಿರುವ ನಿಯೋಗವೊಂದು ಭಾರತಕ್ಕೆ ಬಂದಿಳಿದಿದೆ.

ಲಕ್ನೋ, ಮೇ 08: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರ ಜತೆ ಚರ್ಚಿಸಲು ನೂರಾರು ಮಂದಿ ಎನ್ನಾರೈಗಳಿರುವ ನಿಯೋಗವೊಂದು ಭಾರತಕ್ಕೆ ಬಂದಿಳಿದಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರೊಂದಿಗೆ ನಿಯೋಗದ ಸದಸ್ಯರು ಚರ್ಚಿಸಲಿದ್ದಾರೆ.

ಈಗಾಗಲೇ ಅಮಿತ್ ಶಾ ಅವರ ಜತೆ ಒಂದು ಸುತ್ತಿನ ಮಾತಕತೆ ನಡೆಸಿರುವ ಎನ್ನಾರೈಗಳು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

100 NRIs land in India to discuss construction of Ram temple

ಜರ್ಮನಿ, ಇಂಡೋನೇಷಿಯಾ, ಮಲೇಷಿಯಾ, ಜಪಾನ್, ಚೀನಾ ಹಾಗೂ ಹಾಂಕಾಂಗ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ನಿಯೋಗದಲ್ಲಿದ್ದಾರೆ. ವಿವಾದಿತ ರಾಮಜನ್ಮಭೂಮಿ ತಾಣಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

ರಾಮಮಂದಿರದ ನಿರ್ಮಾಣದ ಬಗ್ಗೆ ಎನ್ನಾರೈಗಳ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲು ಮುಂದಾಗಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೇಕಾದ ಅಗತ್ಯ ನೆರವು ನೀಡಲು ಸಿದ್ಧರಾಗಿರುವುದಾಗಿ ಘೋಷಿಸಿದ್ದಾರೆ.

ವಿಶ್ವಹಿಂದೂ ಪರಿಷತ್ ಕೂಡಾ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಭೆಗಳನ್ನು ಆರಂಹಭಿಸಿದೆ. ಹರಿದ್ವಾರದ ಶಂಕರಾಚಾರ್ಯರು ಸೇರಿದಂತೆ 200ಕ್ಕೂ ಅಧಿಕ ಸಂತರನ್ನು ಒಗ್ಗೂಡಿಸಿ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+