ತೆಲಂಗಾಣದಲ್ಲಿ ಟಿಆರ್‌ಎಸ್ ಶಾಸಕರಿಗೆ ಬಲೆ; ಒಬ್ಬೊಬ್ಬರಿಗೆ 100 ಕೋಟಿ ಆಫರ್!

ಹೈದ್ರಾಬಾದ್, ಅಕ್ಟೋಬರ್ 27: ತೆಲಂಗಾಣದ ಆಡಳಿತ ಪಕ್ಷದ ಶಾಸಕರ ಖರೀದಿಗೆ ಭಾರೀ ಹುನ್ನಾರ ನಡೆದಿರುವುದು ಗೊತ್ತಾಗಿದೆ. ಈ ಹಗರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಫಾರ್ಮ್‌ಹೌಸ್‌ನಲ್ಲಿ ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರು ಗುರಿಯಾಗಿಸಿಕೊಂಡು ಬಲೆ ಬೀಸಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ಸುಳಿವು ನೀಡಲಾಗಿತ್ತು ಎಂದು ಹೈದರಾಬಾದ್ ಪೊಲೀಸ್ ಮುಖ್ಯಸ್ಥ ಸ್ಟೀಫನ್ ರವೀಂದ್ರ ತಿಳಿಸಿದ್ದಾರೆ. 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಡೀಲ್‌ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ 100 ಕೋಟಿ ಜೊತೆಗೆ 50 ಕೋಟಿ ನೀಡುವುದಾಗಿ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಜೀಜ್ ನಗರದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಬುಧವಾರ ಸಂಜೆ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಪೊಲೀಸರು ತಿಳಿಸಿದರು. "ಈ ವೇಳೆ ಪಕ್ಷಗಳನ್ನು ಬದಲಾಯಿಸಲು ಆಮಿಷ ಮತ್ತು ಲಂಚ ನೀಡಲಾಗುತ್ತಿದೆ," ಎಂದು ಶಾಸಕರು ಪೊಲೀಸರಿಗೆ ಕರೆ ಮಾಡಿದ್ದರು ಎಂದು ರವೀಂದ್ರ ಹೇಳಿದರು. ಈ ಸಂಬಂಧ ಬಂಧಿತ ವ್ಯಕ್ತಿಗಳು ನಕಲಿ ಗುರುತಿನ ಮೇಲೆ ಹೈದರಾಬಾದ್‌ಗೆ ಬಂದಿದ್ದರು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

100 Crore Offered To Buy 4 MLAs From KCRs Party in Telangana

ಡೀಲ್ ನಡೆಸುತ್ತಿದ್ದ ಆರೋಪಿಗಳ ಗುರುತು ಪತ್ತೆ:

ತೆಲಂಗಾಣದಲ್ಲಿ ಶಾಸಕರ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳ ಗುರುತನ್ನು ಪತ್ತೆ ಮಾಡಲಾಗಿದೆ. ಹರಿಯಾಣದ ಅರ್ಚಕ ಸತೀಶ್ ಶರ್ಮಾ, ತಿರುಪತಿಯ ಅರ್ಚಕ ಡಿ ಸಿಂಹಯಾಜಿ, ಆತನ ಭಕ್ತ ರೋಹಿತ್ ರೆಡ್ಡಿ ಮತ್ತು ಉದ್ಯಮಿ ನಂದಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 2019 ರಿಂದ ಬಿಜೆಪಿಯು ತೆಲಂಗಾಣದಲ್ಲಿ "ಆಪರೇಷನ್ ಕಮಲ" ವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಪಕ್ಷವು ಇನ್ನೂ ಬಲವನ್ನು ಕಂಡುಕೊಳ್ಳದ ಮತ್ತೊಂದು ದಕ್ಷಿಣ ರಾಜ್ಯವಾಗಿದೆ. ಈ ವರ್ಷದ ಆರಂಭದಲ್ಲಿ ಏಕನಾಥ್ ಶಿಂಧೆಯವರ ಬಿಜೆಪಿ ಬೆಂಬಲಿತ ಬಂಡಾಯವು ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ ಮಹಾರಾಷ್ಟ್ರದ ಘಟನೆಗಳಿಂದ ಇದಕ್ಕೆ ಉತ್ತೇಜನ ಸಿಕ್ಕಂತಾಗಿದೆ.

ಬಿಜೆಪಿ ವಿರುದ್ಧ ಆರೋಪಿಸಿದ್ದ ಆಪ್:

ಇತ್ತೀಚೆಗಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷವು ದೆಹಲಿ ಮತ್ತು ಪಂಜಾಬ್‌ನಲ್ಲಿ ಬಿಜೆಪಿ ತನ್ನ ಶಾಸಕರಿಗೆ ಬಲೆ ಬೀಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಇನ್ನೊಂದು ಮಗ್ಗಲಿನಲ್ಲಿ ಟಿಆರ್‌ಎಸ್‌ನ ಸುಮಾರು 18 ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಆಗಸ್ಟ್‌ನಲ್ಲಿ ಹೇಳಿಕೆ ನೀಡಿದ್ದರು. ಇದರ ಮಧ್ಯೆ ಹೊಸ ಆರೋಪಗಳಿಗೆ ತೆಲಂಗಾಣ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+