ಸೆ.2: ಸಾರಿಗೆ ಮುಷ್ಕರ, ಸರ್ಕಾರಿ ಬಸ್ ಕೂಡಾ ಸ್ಥಗಿತ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 29: ಸುಮಾರು 10ಕ್ಕೂ ಅಧಿಕ ಕಾರ್ಮಿಕ ಸಂಘಗಳು ಒಂದು ದಿನ ಸಾರಿಗೆ ಮುಷ್ಕರಕ್ಕೆ ಮುಂದಾಗಿವೆ. ಕೇಂದ್ರ ಸರ್ಕಾರ 12 ಅಂಶಗಳ ಬೇಡಿಕೆಯನ್ನು ಈಡೇರಿಸದ ಕಾರಣ ಸೆಪ್ಟೆಂಬರ್ 2 ರಂದು ಸಾರಿಗೆ ಸಂಪೂರ್ಣ ಬಂದ್ ಆಗಲಿದೆ.

ಸರ್ಕಾರಿ ಬಸ್, ಆಟೋರಿಕ್ಷಾ ಹಾಗೂ ಮೊಬೈಲ್ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಕೂಡಾ ಸ್ಥಗಿತಗೊಳ್ಳಲಿದ್ದು, ಬಸ್ ಬಿಸಿಗೆ ಸಾರ್ವಜನಿಕರು, ಸಂಸ್ಥೆಗಳು ಸಿದ್ಧರಾಗಬೇಕಿದೆ.[ಐಟಿ ಉದ್ಯೋಗಿಗಳಿಗೆ ಕಾರ್ ಪೂಲಿಂಗ್ ವರದಾನ]

ಸೆಪ್ಟೆಂಬರ್ 2 ರಂದು ಒಂದು ದಿನದ ರಾಷ್ಟ್ರವ್ಯಾಪಿ ಸಾಂಕೇತಿಕ ಮುಷ್ಕರ ನಡೆಸಲು ಕಾರ್ಮಿಕ ಸಂಘಟನೆಗಳೂ ನಿರ್ಧರಿಸಿವೆ ಎಂದು ಅಖಿಲ ಭಾರತ ಕಾರ್ಮಿಕರ ಸಂಘದ ಕಾರ್ಯದರ್ಶಿ ಸಚ್ ದೇವ್ ಹೇಳಿದ್ದಾರೆ. ಕಾರ್ಮಿಕರ ಹಕ್ಕುಗಳ ರಕ್ಷಣೆ, ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಹಾಗೂ ಪ್ರಮುಖ 17 ಬೇಡಿಕೆ ಗಳನ್ನು ಆಗ್ರಹಿಸಲಾಗಿದೆ ಎಂದರು. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

10 Trade unions call for one day transort strike on September 02

ಸಾರಿಗೆ ಸಂಪೂರ್ಣ ಸ್ಥಗಿತ: ರೈಲ್ವೆ ಸೇವೆಯೂ ಅನುಮಾನವಾಗಿದೆ. ಸರ್ಕಾರಿ ಬಸ್‌ಗಳ ಜತೆಗೆ ಆಟೋಗಳೂ ರಸ್ತೆಗಿಳಿಯುವುದಿಲ್ಲ. ಮೆಟ್ರೋ ರೈಲಿನ ಸೇವೆಯೂ ಸ್ಥಗಿತಗೊಳ್ಳಲಿದ್ದು, ಮೊಬೈಲ್ ಅಪ್ಲಿಕೆಷನ್ ಆಧಾರಿತ ಟ್ಯಾಕ್ಸಿಗಳೂ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. [ಸೆ. 2 ರಂದು ಮೋದಿ ಸರ್ಕಾರ ವಿರುದ್ಧ ಬ್ಯಾಂಕ್ ಮುಷ್ಕರ]

ಸೆಪ್ಟೆಂಬರ್ 2 ರಂದು ಒಂದು ದಿನದ ದೇಶವ್ಯಾಪ್ತಿ ಮುಷ್ಕರ ನಡೆಸಲು ಬ್ಯಾಂಕುಗಳ ಈಗಾಗಲೇ ಕರೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಈ ಎರಡು ಮುಷ್ಕರದಿಂದ ಆರೆಸ್ಸೆಸ್ ಬೆಂಬಲಿತ ಭಾರತೀಯ ಮಜ್ದೂರ್ ಸಂಘ ಹಿಂದೆ ಸರಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As many as 10 union trade unions have decided to go on one day transport strike on September 02 said All India Trade Union Congress Secretary DL Sachdev.
Please Wait while comments are loading...