ಹಿಮದಡಿ ಸಿಕ್ಕ ವೀರ ಯೋಧರ ಜೀವಕ್ಕಾಗಿ ಪ್ರಾರ್ಥಿಸಿ

Subscribe to Oneindia Kannada

ನವದೆಹಲಿ, ಫೆಬ್ರವರಿ, 03: ನಾವಿಲ್ಲಿ ಬೆಚ್ಚಗೆ ಮನೆಯೊಳಗೆ ಕುಳಿತು ಟೀ ಹೀರುತ್ತಿದ್ದರೆ ಅತ್ತ ದೇಶದ ಗಡಿ ಕಾಯುತ್ತಿದ್ದ 10 ಯೋಧರು ಹಿಮದ ಅಡಿ ಸಿಲುಕಿಕೊಂಡಿದ್ದಾರೆ. ಭಾರತ -ಪಾಕಿಸ್ತಾನ ಗಡಿ ಸಿಯಾಚಿನ್‌ನ ಉತ್ತರ ಪ್ರಾಂತ್ಯದಲ್ಲಿ ಹಿಮಪಾತವಾಗುತ್ತಿದ್ದು, ಗಸ್ತು ತಿರುಗುತ್ತಿದ್ದ 10 ಮಂದಿ ಯೋಧರು ಬುಧವಾರ ನಾಪತ್ತೆಯಾಗಿದ್ದಾರೆ.

ಹಿಮಪಾತದಡಿಯಲ್ಲಿ ಸಿಲುಕಿರುವ ಯೋಧರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಮದ್ರಾಸ್‌ ರೆಜಿಮೆಂಟ್‌ಗೆ ಸೇರಿದ 10 ಮಂದಿ ಸೈನಿಕರು ಬೆಳಗ್ಗಿನ ಜಾವ ಗಸ್ತಿನಲ್ಲಿದ್ದಾಗ ಹಿಮದ ಅಡಿ ಸಿಲುಕಿಕೊಂಡಿದ್ದಾರೆ ಎಂದು ಕರ್ನಲ್‌ ಎಸ್‌. ಗೋಸ್ವಾಮಿ ಮಾಹಿತಿ ನೀಡಿದ್ದಾರೆ.[ಮೈಗೆ ಹೊಕ್ಕಿದ್ದು ಆರು ಬುಲೆಟ್, ನಿಮಗಿದೋ ಸೆಲ್ಯೂಟ್]

india

ಸದ್ಯ ಸಿಯಾಚಿನ್‌ನಲ್ಲಿ ಉಷ್ಣಾಂಶ ಮೈನಸ್‌ 60 ಡಿಗ್ರಿಗೆ ಇಳಿದಿದೆ. ಸಿಯಾಚಿನ್ ಹಿಮಪರ್ವತ ವಿಶ್ವದ ಅತಿ ಎತ್ತರದ ಯುದ್ಧ ಪ್ರದೇಶವಾಗಿದ್ದು, ಭಾರತೀಯ ಯೋಧರು ಸಿಲುಕಿಕೊಂಡಿರುವುದು ಆತಂಕದ ಸಂಗತಿಯಾಗಿದೆ.[ಹುತಾತ್ಮ ನಿರಂಜನ್ ಸ್ನೇಹಿತನ ಕೊರಳುಬ್ಬಿದ ಮಾತುಗಳು]

ದೇಶದ ಭದ್ರತೆಗೆ ಜೀವನವನ್ನೇ ಮುಡಿಪಾಗಿಡುವ ಸೈನಿಕರ ಜೀವಕ್ಕೆ ಏನೂ ಆಗದಿರಲಿ ಎಂದು ಇಲ್ಲಿಂದಲೇ ಪ್ರಾರ್ಥನೆ ಮಾಡುವುದು ನಮಗೆ ಉಳಿದಿರುವ ದಾರಿ. ಮೈನಸ್ 60 ಡಿಗ್ರಿಯಲ್ಲಿ ದೇಶದ ಗಡಿ ಕಾಯುತ್ತಿರುವ ಎಲ್ಲ ಸೈನಿಕರಿಗೂ ನಮ್ಮದೊಂದು ಸಲಾಂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ten army personnel, including a Junior Commissioned Officer (JCO), were today trapped under a mass of snow after an avalanche hit a military post at Siachen Glacier in Jammu and Kashmir. The avalanche hit a high altitude post situated at 19000 feet in Northern Glacier sector in Ladakh region in wee hours of this morning, Defence PRO at Udhampur-based Northern Command Col S D Goswami said. One JCO and 9 other ranks of Indian Army came under the avalanche, the PRO said
Please Wait while comments are loading...