ಮಂಗಳ ಯಾನ: ರಿಮೋಟ್ ಕಂಟ್ರೋಲ್ ಇವರ ಕೈಯಲ್ಲಿದೆ!
ಚೆನ್ನೈ, ನ. 5: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷಿ ಮಂಗಳ ಯಾನ ಸುಸೂತ್ರವಾಗಿ ಆರಂಭವಾಗಿದೆ. 300 ದಿನಗಳ ಪಯಣ ಅಮೋಘವಾಗಿ ಮುನ್ನಡೆದಿದೆ.
ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆ ಮಾರ್ಸ್ ಆರ್ಬಿಟರಿ ಮಿಷನ್‌ಗೆ ಯಶಸ್ವಿ ಚಾಲನೆ ದೊರೆತಿದ್ದು, ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ 'ಮಾರ್ಸ್ ಆರ್ಬಿಟರಿ ಮಿಷನ್' ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ-ಸಿ25 ಉಡಾವಣಾ ವಾಹಕವು ನಭಕ್ಕೆ ಹಾರಿದೆ. ಈ ಉಡಾವಣಾ ವಾಹಕ ನಭಕ್ಕೆ ಹಾರಿದ್ದು, ಮೊದಲ 45 ನಿಮಿಷಗಳ ಅತ್ಯಂತ ಪ್ರಮುಖ ಹಂತವನ್ನು ಯಶಸ್ವಿಯಾಗಿ ಪೂರೈಸಿದೆ.
ಸುಮಾರು 430 ಕೋಟಿ ವೆಚ್ಚದ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಈ ಚರಿತ್ರಾರ್ಹ 'Mars Orbiter Mission' ಯೋಜನೆಗೆ ಬಹುಮಖ್ಯ ಕಾಣಿಕೆ ಸಲ್ಲಿಸಿದ 10 ವಿಜ್ಞಾನಿಗಳ ಕಿರುಪರಿಚಯ ಇಲ್ಲಿದೆ. ಡಾ. ರಾಧಾಕೃಷ್ಣ್ ಅವರು ತಮ್ಮ ತಂಡವನ್ನು ಈಗ ಪರಿಚಯಿಸುತ್ತಿದ್ದಾರೆ ...

ಕೆ ರಾಧಾಕೃಷ್ಣನ್ (64):
ಇಸ್ರೋ ಸಾರಥಿ. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ. 1972ರಿಂದ ISROದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಡೀ ಇಸ್ರೋದ ಕಾರ್ಯಚಟುವಟಿಕೆಯ ಚುಕ್ಕಾಣಿ ಹಿಡಿದಿದ್ದಾರೆ.

ಎಸ್ ರಾಮಕೃಷ್ಣನ್ (64)
Vikram Sarabhai Space Centre ನಿರ್ದೇಶಕರು. Launch Authorisation Board ಸದಸ್ಯರೂ ಹೌದು. 1972ರಿಂದ ISROದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮೈಲಸ್ವಾಮಿ ಅಣ್ಣಾದೊರೈ (55)
Mars Orbiter Mission ಕಾರ್ಯಕ್ರಮದ ನಿರ್ದೇಶಕರು. ಯೋಜನಾ ವೆಚ್ಚದ ಬಜೆಟ್ ನೋಡಿಕೊಳ್ಳುವ ಹೊಣೆಗಾರಿಕೆ ನಿಭಾಯಿಸುತ್ತಿರುವುದು ಇವರೇ. ನೌಕೆಯ ಸ್ವರೂಪ, ವೇಳಾಪಟ್ಟಿ ನಿರ್ವಹಣೆಗೆ ಇವರದೇ ಉಸ್ತುವಾರಿ.

ಎಎಸ್ ಕಿರಣ್ ಕುಮಾರ್ (55)
Satellite Application Centre ನಿರ್ದೇಶಕರು. Mars Colour Camera, Methane Sensor ಮತ್ತು Thermal Infrared Imaging Spectrometerಗಳ ರಚನೆ ಮತ್ತು ನಿರ್ಮಾಣ ಹೊಣೆ ಇವರದ್ದೇ.

ಎಂವೈಎಸ್ ಪ್ರಸಾದ್ (60)
Satish Dhawan Space Centre ನಿರ್ದೇಶಕರು. Launch Authorisation Board ಅಧ್ಯಕ್ಷರು. ಉಪಗ್ರಹ ಮಾರ್ಗದ ಸುರಕ್ಷತೆ ಮತ್ತು ವೇಳಾಪಟ್ಟಿ ನಿರ್ಣಯ ಇವರ ಕೈಯಲ್ಲಿರುತ್ತದೆ. ರಾಕೆಟ್ ಉಡಾವಣೆ ಕೇಂದ್ರದ ಒಟ್ಟಾರೆ ಉಸ್ತುವಾರಿ.

ಎಸ್ ಕೆ ಶಿವಕುಮಾರ್ (60)
ISRO Satellite Centre ನಿರ್ದೇಶಕರು. ಉಪಗ್ರಹ ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಳವಡಿಕೆ ಹೊಣೆಗಾರಿಕೆ ಹೊತ್ತಿದ್ದಾರೆ.

ಪಿ ಕುನ್ಹಿಕೃಷ್ಣನ್ (52)
PSLV programme ಯೋಜನಾ ನಿರ್ದೇಶಕರು. 9ನೇ ಬಾರಿಗೆ ಉಪಗ್ರಹ ಉಡಾವಣಾ ಯೋಜನೆಯ ನಿರ್ದೇಶಕರಾಗಿದ್ದಾರೆ. ಮುಂದೆ ಇನ್ನು 300 ದಿನಗಳ ಕಾಲ ಉಪಗ್ರಹವು ತನ್ನ ಗುರಿಯನ್ನು ಫಲಪ್ರದವಾಗಿ ಪೂರ್ಣಗೊಳಿಸಿದೆಯೇ ಎಂಬುದನ್ನು ಕಣ್ಣಲ್ಲಿ ಕಣ್ಣಿಟ್ಟು ನೀಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ಇವರದ್ದೇ.

ಬೆಂಗಳೂರಿನ ಸುಬ್ಬಯ್ಯ ಅರುಣ್ (50)
Mars Orbiter Mission ಯೋಜನಾ ನಿರ್ದೇಶಕರು. ಉಪಗ್ರಹ ನಿರ್ಮಾಣ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತವರು.

ಬಿ ಜಯಕುಮಾರ್ (54)
PSLV Project ಯೋಜನೆಯ ಸಹ ನಿರ್ದೇಶಕರು. ಉಪಗ್ರಹ ಗಗನಕ್ಕೆ ಚಿಮ್ಮುವವರೆಗೂ ಇಡೀ ವ್ಯವಸ್ಥೆಯನ್ನು ಟೆಸ್ಟ್ ಮಾಡುವುದು ಇವರೇ.

ಎಂ ಎಸ್ ಪನ್ನೀರ್ ಸೆಲ್ವಂ (59)
ಶ್ರೀಹರಿಕೋಟಾ ಉಪಗ್ರಹ ಉಡಾವಣೆ ಕೇಂದ್ರದ ಪ್ರಧಾನ ವ್ಯವಸ್ಥಾಪಕರು.












Click it and Unblock the Notifications