ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರಲ್ಲಿ ರಸ್ತೆ ಅಪಘಾತದಲ್ಲಿ ಸತ್ತವರ ಸಂಖ್ಯೆ 1.20 ಲಕ್ಷ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ದೇಶದಲ್ಲಿ 2020ರಲ್ಲಿ ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಮರಣ ಹೊಂದಿದವರ ಸಂಖ್ಯೆ 1.20 ಲಕ್ಷ ಆಗಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, ಕೊರೊನಾ ಲಾಕ್‌ಡೌನ್‌ ಹೊರತಾಗಿಯೂ ಪ್ರತಿದಿನ ಸರಾಸರಿ 328 ಜನರು ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ.

ರಸ್ತೆ ಅಪಘಾತಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಸುಮಾರು 3.92 ಮಂದಿ ಸಾವನ್ನಪ್ಪಿದ್ದಾರೆ ಎಂಬ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2020ರ ತನ್ನ ವಾರ್ಷಿಕ 'ಕ್ರೈಂ ಇಂಡಿಯಾ' ವರದಿಯಲ್ಲಿ ಬಹಿರಂಗಪಡಿಸಿದೆ.

ಕರ್ನಾಟಕ: ಸೈಬರ್ ಅಪರಾಧ ಹೆಚ್ಚು, ಶಿಕ್ಷೆಗೊಳಗಾಗುವ ಪ್ರಮಾಣ ಕಡಿಮೆಕರ್ನಾಟಕ: ಸೈಬರ್ ಅಪರಾಧ ಹೆಚ್ಚು, ಶಿಕ್ಷೆಗೊಳಗಾಗುವ ಪ್ರಮಾಣ ಕಡಿಮೆ

2020ರಲ್ಲಿ ಅಪಘಾತದಲ್ಲಿ 1.20 ಲಕ್ಷ ಸಾವುಗಳು ಸಂಭವಿಸಿವೆ. 2019ರಲ್ಲಿ 1.39 ಲಕ್ಷ ಹಾಗೂ 2018ರಲ್ಲಿ 1.35 ಲಕ್ಷ ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದರು ಎಂಬುದನ್ನು ವರದಿ ಹೇಳಿದೆ.

1.20 Lakh Died In Road Accidents In 2020 Shows Data

2018ರ ವರ್ಷ ದೇಶದಲ್ಲಿ 1.35 ಲಕ್ಷ ಹಿಟ್ ಅಂಡ್ ರನ್ ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಸಿಆರ್‌ಬಿ ವರದಿ ನೀಡಿದೆ.

2020ರಲ್ಲಿ 41,196 ಹಿಟ್ ಅಂಡ್ ರನ್ ಪ್ರಕರಣಗಳಿದ್ದರೆ, 2019ರಲ್ಲಿ 47,504, 2018ರಲ್ಲಿ 47,504 ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿಸಿದೆ.

ರಸ್ತೆ ಅಪಘಾತ: ಗಾಯಾಳುವಿಗೆ 1.25 ಲಕ್ಷ ರೂ. ಹಣ ಹಿಂದಿರುಗಿಸಿದ ಅಗ್ನಿಶಾಮಕ ಸಿಬ್ಬಂದಿರಸ್ತೆ ಅಪಘಾತ: ಗಾಯಾಳುವಿಗೆ 1.25 ಲಕ್ಷ ರೂ. ಹಣ ಹಿಂದಿರುಗಿಸಿದ ಅಗ್ನಿಶಾಮಕ ಸಿಬ್ಬಂದಿ

ಸರಾಸರಿ 112 ಹಿಟ್ ಅಂಡ್ ರನ್ ಪ್ರಕರಣಗಳು ದೇಶಾದ್ಯಂತ ದಾಖಲಾಗುತ್ತಿವೆ ಎಂದು ವರದಿ ತಿಳಿಸಿದೆ.

1.20 Lakh Died In Road Accidents In 2020 Shows Data

ಸಾರ್ವಜನಿಕವಾಗಿ ನಿರ್ಲಕ್ಷ್ಯದ ಚಾಲನೆಯಿಂದ ಹಾನಿ ಮಾಡಿದ ಪ್ರಕರಣಗಳು 2020ರಲ್ಲಿ 1.30 ಲಕ್ಷ ಇವೆ. 2019ರಲ್ಲಿ 1.60 ಲಕ್ಷ, 2018ರಲ್ಲಿ 1.66 ಲಕ್ಷ ಇದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಕರಣಗಳು ಕ್ರಮವಾರ 85,920, 1.12 ಲಕ್ಷ ಹಾಗೂ 1.08 ಲಕ್ಷ ಇದೆ ಎಂದು ಮಾಹಿತಿ ನೀಡಿದೆ.

ಈ ಮಧ್ಯೆ ರೈಲು ಅಪಘಾತಗಳಿಗೆ ಸಂಬಂಧಿಸಿದಂತೆ, ನಿರ್ಲಕ್ಷ್ಯದಿಂದ ಸಂಭವಿಸಿದ ಅವಘಡಗಳ ಸಂಖ್ಯೆ 52 ಆಗಿದೆ. 2019ರಲ್ಲಿ ಈ ಸಂಖ್ಯೆ 55 ಹಾಗೂ 2018ರಲ್ಲಿ ಈ ಸಂಖ್ಯೆ 35 ಇದ್ದವು.

2020ರಲ್ಲಿ ಭಾರತದಲ್ಲಿ 133 ಮಂದಿ ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವ ವರದಿಯಾಗಿದೆ. ಈ ಸಂಖ್ಯೆ 2019ರಲ್ಲಿ 201, 2018ರಲ್ಲಿ 218 ಆಗಿತ್ತು ಎಂದು NCRB ಮಾಹಿತಿ ತೋರಿದೆ.

ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವಿನ ಪ್ರಕರಣಗಳು 51 ಆಗಿದೆ. 2019ರಲ್ಲಿ 147, 2018ರಲ್ಲಿ 40 ಪ್ರಕರಣಗಳು ವರದಿಯಾಗಿವೆ. ಇತರೆ ನಿರ್ಲಕ್ಷ್ಯಗಳಿಗೆ ಸಂಬಂಧಿಸಿದ ಮರಣ ಪ್ರಕರಣಗಳಲ್ಲಿ 6367 ಪ್ರಕರಣಗಳು 2020ರಲ್ಲಿ ದಾಖಲಾಗಿವೆ. 2019ರಲ್ಲಿ 7912, 2018ರಲ್ಲಿ 8687 ಪ್ರಕರಣಗಳು ವರದಿಯಾಗಿದ್ದವು.

ಮಾರ್ಚ್ 25, 2020ರಿಂದ ಮೇ 31 2020ರವೆಗೆ ಇಡೀ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಹೇರಲಾಗಿತ್ತು. ಈ ಕಾರಣವಾಗಿ ಈ ಅವಧಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿನ ಓಡಾಟ ಬಹಳ ಸೀಮಿತವಾಗಿತ್ತು ಎಂದು ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖಿಸಿದೆ.

English summary
India recorded 1.20 lakh cases of "deaths due to negligence relating to road accidents" in 2020 -- 328 people losing their lives every day on an average, according to government data
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X