ವಿಡಿಯೋ; ನದಿಗೆ ಜಿಗಿದ ತಾಯಿ, ಸೇತುವೆ ಮೇಲೆ ಮಗು ಏಕಾಂಗಿ

ವಿಜಯವಾಡ, ಫೆಬ್ರವರಿ 24 : ಎರಡೂವರೆ ವರ್ಷದ ಮಗುವನ್ನು ಸೇತುವೆ ಮೇಲೆ ಬಿಟ್ಟು ತಾಯಿ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ವಿಜಯವಾಡದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ

23 ವರ್ಷದ ರಜನಿ ಎಂಬ ಮಹಿಳೆ ಫೆಬ್ರವರಿ 21ರಂದು ಪ್ರಕಾಶಂ ಬ್ಯಾರೇಜ್‌ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎರಡೂವರೆ ವರ್ಷದ ಗಂಡು ಮಗುವಿನ ಜೊತೆ ಅವರು ಸೇತುವೆ ಮೇಲೆ ಬರುವ ವಿಡಿಯೋ ಈಗ ಸಿಕ್ಕಿದೆ.

ಸೇತುವೆ ಮೇಲೆ ನಡೆದು ಬರುವ ರಜನಿ ಒಮ್ಮೆ ಹಿಂದೆ ನೋಡಿದ್ದಾರೆ. ಮಗು ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಸೇತುವೆ ಮೇಲಿನಿಂದ ಕೃಷ್ಣಾ ನದಿಗೆ ಜಿಗಿದಿದ್ದಾರೆ. ಮಗು ಸೇತುವೆಯ ಕೆಳಗೆ ನೋಡುತ್ತಾ ನಿಂತಿದೆ. ಕೆಲವು ನಿಮಿಷಗಳ ಬಳಿಕ ಕೆಲವರು ಮಗುವಿನ ಬಳಿಗೆ ಧಾವಿಸಿ ಬರುತ್ತಾರೆ.

Women Attempt To Suicide In Vijayawada Video Viral

ಮೂರು ವರ್ಷದ ಹಿಂದೆ ರಜನಿ ಈಶ್ವರ ರೆಡ್ಡಿ ಎಂಬುವವರನ್ನು ವಿವಾಹವಾಗಿದ್ದರು. ಆರ್ಥಿಕ ವಿಚಾರವಾಗಿ ಪತಿ ಜೊತೆ ನಿರಂತರವಾಗಿ ಜಗಳವಾಡುತ್ತಿದ್ದರು. ಫೆಬ್ರವರಿ 20ರಂದು ಮನೆಯಲ್ಲಿ ಜಗಳ ನಡೆದಿದ್ದು, ಫೆ.21ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ರಜನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಗುವಿನ ಕೈ ಹಿಡಿದು ನಡೆದು ಬರುತ್ತಿದ್ದ ರಜನಿ ಬ್ಯಾರೇಜ್‌ನ 50ನೇ ನಂಬರ್ ಗೇಟ್‌ ಬಳಿ ಕೃಷ್ಣಾ ನದಿಗೆ ಜಿಗಿದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಇಲ್ಲಿದೆ.

Oneindia Kannada on Twitter

ಎರಡೂವರೆ ವರ್ಷದ ಮಗುವನ್ನು ಸೇತುವೆ ಮೇಲೆ ಬಿಟ್ಟು ತಾಯಿ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ವಿಜಯವಾಡದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ #Hyderabad | #Attemptsuicide | #Vijayawada https://t.co/DzvcxMqYJN

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+