ಸ್ವಾಮಿ ಪರಿಪೂರ್ಣಾನಂದ-ದಕ್ಷಿಣದ ಯೋಗಿ ಆದಿತ್ಯನಾಥ್ ಬಿಜೆಪಿಗೆ?
ಹೈದರಾಬಾದ್, ಸೆಪ್ಟೆಂಬರ್ 06: ದಕ್ಷಿಣದ ಯೋಗಿ ಆದಿತ್ಯನಾಥ್ ಎಂದೇ ಕರೆಸಿಕಳ್ಳುವ ಶ್ರೀಪೀಠದ ಸ್ವಾಮಿ ಪರಿಪೂರ್ಣಾನಂದ ಬಿಜೆಪಿಗೆ ಸೇರುವುದು ಬಹುತೇಕ ಖಚಿತವಾಗಿದೆ.
'ನನ್ನ ಸಿದ್ಧಾಂತಗಳು ಮತ್ತು ಬಿಜೆಪಿ ಸಿದ್ಧಾಂತಗಳು ಹೊಂದಿಕೆಯಾದರೆ ಖಂಡಿತ ಬಿಜೆಪಿಗೆ ಸೇರುತ್ತೇನೆ. ನನ್ನಲ್ಲಿ ಆ ಸಾಮರ್ಥ್ಯವಿದ್ದರೆ ಪಕ್ಷವೇ ನನ್ನು ಆರಿಸುತ್ತದೆ' ಎಂದು ತೆಲಂಗಾಣದ ಖ್ಯಾತ ಸ್ವಾಮೀಜಿ ಪರಿಪೂರ್ಣಾನಂದ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಪರಿಪೂರ್ಣಾನಂದ ಅವರನ್ನು ಆರು ತಿಂಗಳ ಕಾಲ ಹೈದರಾಬಾದಿನಿಂದ ಗಡಿಪಾರು ಮಾಡಲಾಗಿತ್ತು. ನಂತರ ಅವರು ಹೈಕೋರ್ಟ್ ಗೆ ಮನವಿ ಸಲ್ಲಿಸಿದ ಪರಿಣಾಮ ಅವರ ಗಡಿಪಾರನ್ನು ತೆರವುಗೊಳಿಸಲಾಗಿತ್ತು.

ದಕ್ಷಿಣ ಭಾರತದ ಯೋಗಿ ಆದಿತ್ಯನಾಥ್ ಎಂದೇ ಪೂರ್ಣಾನಂದ ಅವರನ್ನು ಕರೆಯಲಾಗುತ್ತದೆ. ಆದರೆ ತಮ್ಮನ್ನು ಹಾಗೆ ಕರೆಯುವುದನ್ನು ವಿರೋಧಿಸುವ ಪೂರ್ಣಾನಂದ, 'ಯೋಗಿ ಆದಿತ್ಯನಾಥ್ ಅವರು ರಾಜಕೀಯದಲ್ಲಿ ಪಳಗಿದವರು. ನಾವಿಬ್ಬರೂ ಒಂದೇ ಹಿನ್ನೆಲೆಯಿಂದ ಬಂದವರು, ನಮ್ಮಿಬ್ಬರ ವಯಸ್ಸೂ ಒಂದೇ. ಆದರೆ ಅವರು ರಾಜಕೀಯ ಕ್ಷೇತ್ರದಲ್ಲಿ ನನಗಿಂತ ಪರಿಣಿತರು. ಅವರ ವೈಚಾರಿಕತೆ ಮತ್ತು ಕಾರ್ಯಶೈಲಿ ಭಿನ್ನವಾದುದು. ನಾಲ್ಕು ಬಾರಿ ಸಂಸದರಾದ ಅನುಭವ ಉಳ್ಳವರು. ಆದ್ದರಿಂದ ಈ ಕ್ಷೇತ್ರದಲ್ಲಿ ನಾನು ಅವರಿಗಿಂತ ಬಹಳ ಚಿಕ್ಕವನು' ಎಂದು ವಿಧೇಯವಾಗಿ ಹೇಳುತ್ತಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಪೂರ್ಣಾನಂದ ಅವರು ಬಿಜೆಪಿಗೆ ಸೇರುವುದು ನಿಶ್ಚಿತ.












Click it and Unblock the Notifications