ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಜೈಲಿನಿಂದ ಬಿಡುಗಡೆಯಾದ ಬಂಡಿ ಸಂಜಯ್‌ ಬೆನ್ನಿಗೆ ಬಿಜೆಪಿ

|
Google Oneindia Kannada News

ಹೈದ್ರಾಬಾದ್, ಜನವರಿ 13: ತೆಲಂಗಾಣದಲ್ಲಿ ಕೊವಿಡ್-19 ನಿಯಮಗಳ ಉಲ್ಲಂಘನೆ ಆರೋಪದಡಿ ಬಿಜೆಪಿ ರಾಜ್ಯಧ್ಯಕ್ಷ ಬಂಡಿ ಸಂಜಯ್ ಕುಮಾರ್ ಬಂಧನವು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಬಿಜೆಪಿ ನಾಯಕರು ದೂಷಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವ ಭಗವಂತ್ ಖೂಬಾ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸೇರಿದಂತೆ ಹಲವು ಬಿಜೆಪಿ ನಾಯಕರು ತೆಲಂಗಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಆಡಳಿತವಿರುವ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಅಸ್ತಿತ್ವವಿಲ್ಲ, ಆದರೆ, ರಾಜಕೀಯ ವೀಕ್ಷಕರ ಪ್ರಕಾರ, ಸಂಜಯ್ ಬಂಧನದಲ್ಲಿ ಪಕ್ಷಕ್ಕೆ ಒಂದು ಅವಕಾಶ ಸಿಕ್ಕಂತೆ ಆಗಿದೆ.

'ಅಧಿಕಾರ ಕಳೆದುಕೊಳ್ಳಲು ಟಿಆರ್ಎಸ್ ದಿನಗಣನೆ ಆರಂಭ''ಅಧಿಕಾರ ಕಳೆದುಕೊಳ್ಳಲು ಟಿಆರ್ಎಸ್ ದಿನಗಣನೆ ಆರಂಭ'

ಕಳೆದ 2021ರ ಡಿಸೆಂಬರ್‌ನಲ್ಲಿ ಅದೇ ರೀತಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನಿಯಮಗಳ ಉಲ್ಲಂಘನೆ ಆರೋಪದ ಅಡಿ ಅವರನ್ನು ಬಂಧಿಸಲಾಗಿತ್ತು. ಕಾಂಗ್ರೆಸ್ ವಿರುದ್ಧ ಅಂದು ಬಿಜೆಪಿ ಕೆಂಡ ಕಾರಿದ್ದು, ಈಗ ಅದು ಉಲ್ಟಾ ಆಗಿದೆ.

ಬಂಡಿ ಸಂಜಯ್ ಕುಮಾರ್ ಬಂಧನ ಮತ್ತು ಹಿನ್ನೆಲೆ ಏನು?

ಬಂಡಿ ಸಂಜಯ್ ಕುಮಾರ್ ಬಂಧನ ಮತ್ತು ಹಿನ್ನೆಲೆ ಏನು?

ರಾಜ್ಯದಲ್ಲಿ ಶಿಕ್ಷಕರು ಮತ್ತು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ವಿವಾದಾತ್ಮಕ ಸರ್ಕಾರಿ ಆದೇಶ (ಜಿಒ-317) ವಿರೋಧಿಸಿ ಬಂಡಿ ಸಂಜಯ್ ಕುಮಾರ್ ಪ್ರತಿಭಟನೆ ನಡೆಸುತ್ತಿದ್ದರು. ಕಳೆದ ಜನವರಿ 2ರಂದು ನಡೆದ ಹೈಡ್ರಾಮಾ ವೇಳೆ ಕರೀಂನಗರದ ಬಿಜೆಪಿ ಕಚೇರಿಯಲ್ಲಿದ್ದ ಪಕ್ಷದ ಮುಖ್ಯಸ್ಥ ಸಂಜಯ್ ಕುಮಾರ್ ಅನ್ನು ಪೊಲೀಸರು ಬಂಧಿಸಿದ್ದರು. ಕೋವಿಡ್ -19 ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಸಂಜಯ್ ಕುಮಾರ್ ಸೇರಿದಂತೆ ಇತರ 11 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು, ಸಂಜಯ್ ಕುಮಾರ್ ವಿರುದ್ಧ ಗದ್ದಲದ ವೇಳೆ ಸಾರ್ವಜನಿಕ ಸೇವಕನ ಮೇಲೆ ಹಲ್ಲೆ ನಡೆಸಿದ ಆರೋಪವೂ ಸೇರಿದೆ.

ತೆಲಂಗಾಣದಲ್ಲಿ ಪ್ರತಿಭಟನೆಗೆ ಬಿಜೆಪಿ ಕರೆ

ತೆಲಂಗಾಣದಲ್ಲಿ ಪ್ರತಿಭಟನೆಗೆ ಬಿಜೆಪಿ ಕರೆ

ರಾಜ್ಯದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಕೋರ್ಟ್ ಅವರನ್ನು 14 ದಿನಗಳ ಕಸ್ಟಡಿಗೆ ಒಪ್ಪಿಸಿತು. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಕ್ಕೆ ಕರೆ ನೀಡಿದರು. ತೆಲಂಗಾಣದಲ್ಲಿ ಧರ್ಮಯುದ್ಧದಲ್ಲಿ ಭಾಗವಹಿಸುವುದಕ್ಕೆ ಕೇಂದ್ರದಿಂದಲೇ ನಾಯಕರನ್ನು ಕಳುಹಿಸಿತು. ಸಂಜಯ್ ಕುಮಾರ್ ಬಿಡುಗಡೆ ನಂತರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಸಂಜಯ್ ಕುಮಾರ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು, ರಾಜ್ಯದ ಕೆ. ಚಂದ್ರಶೇಖರ ರಾವ್ ಸರ್ಕಾರದ ವಿರುದ್ಧ ಹೋರಾಟವನ್ನು ಮುಂದುವರೆಸುವಂತೆ ಸೂಚಿದ್ದಾರೆ.

ಜ.5ರಂದೇ ತೆಲಂಗಾಣಕ್ಕೆ ಜೆಪಿ ನಡ್ಡಾ

ಜ.5ರಂದೇ ತೆಲಂಗಾಣಕ್ಕೆ ಜೆಪಿ ನಡ್ಡಾ

ಬಂಡಿ ಸಂಜಯ್ ಬಂಧನದ ಬಳಿಕ ಕಳೆದ ಜನವರಿ 5ರಂದು ತೆಲಂಗಾಣಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜಾಮೀನು ನೀಡಿದ್ದರು. ರಾಜ್ಯದಲ್ಲಿ ಬಿಜೆಪಿ ಮೆರವಣಿಗೆ ನಡೆಸುವುದು ನಡ್ಡಾರವರ ಮೂಲ ಯೋಜನೆ ಆಗಿತ್ತು. ಆದರೆ ಕೊವಿಡ್-19 ನಿಯಮಗಳು ಜಾರಿಯಲ್ಲಿದ್ದ ಹಿನ್ನೆಲೆ ಪೊಲೀಸರು ಅದಕ್ಕೆ ಅವಕಾಶ ನೀಡಿರಲಿಲ್ಲ. ತದನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ನಡ್ಡಾ, ತೆಲಂಗಾಣದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದ್ದು, ಟಿಆರ್ಎಸ್ ಸರ್ಕಾರದ ನಿರಂಕುಶ ಪ್ರಭುತ್ವದ ವಿರುದ್ಧ ಧರ್ಮಯುದ್ಧ ನಡೆಸುವುದಾಗಿ ಹೇಳಿಕೆ ನೀಡಿದ್ದರು. ತೆಲಂಗಾಣದ ಹುಜುರ್ ಬಾದ್ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಿಂದ ಕೆಸಿಆರ್ ತೆಲೆ ಕೆಡಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಬಂಡಿ ಸಂಜಯ್ ಮೇಲೆ ಲಕ್ಷ್ಯ ವಹಿಸಿದ ಕೆಸಿಆರ್

ಬಂಡಿ ಸಂಜಯ್ ಮೇಲೆ ಲಕ್ಷ್ಯ ವಹಿಸಿದ ಕೆಸಿಆರ್

2020 ರಲ್ಲಿ ಬಿಜೆಪಿಗೆ ನಿರ್ಣಾಯಕವಾದ ದುಬ್ಬಾಕ ಉಪಚುನಾವಣೆಯಲ್ಲಿ ಪಕ್ಷವು ಸೋತಾಗ ಟಿಆರ್‌ಎಸ್ ಹಿನ್ನಡೆ ಅನುಭವಿಸಿತ್ತು. ಅದೇ ವರ್ಷ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಚುನಾವಣೆಯಲ್ಲಿ ಕಳೆದ 2016ಕ್ಕೆ ಹೋಲಿಸಿದರೆ ಬಿಜೆಪಿಯು 10 ಪಟ್ಟು ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತು. ಇದರ ಮಧ್ಯೆ ಟಿಆರ್‌ಎಸ್ ಅರ್ಧದಷ್ಟು ಗಡಿ ದಾಟಲು ಸಾಧ್ಯವಾಗಿರಲಿಲ್ಲ. 2021 ನವೆಂಬರ್‌ನಲ್ಲಿ ಟಿಆರ್‌ಎಸ್ ತನ್ನ ಎಲ್ಲಾ ಶಕ್ತಿಯನ್ನು ಬಳಸಿ ಮತ್ತು ಕೆಸಿಆರ್ ವೈಯಕ್ತಿಕವಾಗಿ ಪ್ರಚಾರ ಮಾಡಿದ ಹೊರತಾಗಿಯೂ, ಹುಜೂರಾಬಾದ್ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಚುನಾವಣೆ ಉಚ್ಚಾಟಿತ ಸಚಿವ ಈಟಾಲ ರಾಜೇಂದರ್ ಮತ್ತು ಕೆಸಿಆರ್ ನಡುವಿನ ಪೈಪೋಟಿಯಿಂದ ತೀವ್ರ ಕುತೂಹಲ ಕೆರಳಿಸಿತ್ತು. ಅವರು ಟಿಆರ್‌ಎಸ್ ತೊರೆದು ಜೂನ್‌ನಲ್ಲಿ ಬಿಜೆಪಿಗೆ ತೆರಳಿದ್ದರು.

Recommended Video

Priyanka Gandhi ಬಗ್ಗೆ ನಿಮಗೆ ಗೊತ್ತಿರದ ಸತ್ಯಗಳು | Oneindia Kannada

English summary
Why all BJP leader put weight behind Telangana BJP chief Bandi Sanjay after his arrest. He was arrested on 2 January while he was staging a protest against a govt order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X