ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ, ಹತ್ಯೆಗೆ ಮೊದಲೇ ನಡೆದಿತ್ತಾ ಪ್ಲಾನ್?

ಹೈದರಾಬಾದ್, ನವೆಂಬರ್ 29: ಪಶುವೈದ್ಯೆಯ ಅತ್ಯಾಚಾರ ಹತ್ಯೆಗೆ ಮೊದಲೇ ಪ್ಲಾನ್ ನಡೆದಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ವೈದ್ಯೆ ಶಮ್ಶಾಬಾದ್​ನಿಂದ ಕೊಲ್ಲುರ್​ ಗ್ರಾಮಕ್ಕೆ ತೆರಳಿದ್ದರು. ನಂತರ ಮರಳಿ ಟೋಲ್​ ಪ್ಲಾಜಾ ಸಮೀಪ ಸ್ಕೂಟಿ ನಿಲ್ಲಿಸಿ ಮತ್ತೊಂದು ಕಡೆಗೆ ಕ್ಯಾಬ್​ನಲ್ಲಿ ತೆರಳಿದ್ದರು.

ಮತ್ತೆ ಬಂದು ಸ್ಕೂಟಿಯಲ್ಲಿ ಸ್ವಲ್ಪ ದೂರ ತೆರಳುವಾಗ ಬೈಕ್​ ಪಂಕ್ಚರ್​ ಆಗಿರುವುದು ಬೆಳಕಿಗೆ ಬಂದಿದೆ. ಉದ್ದೇಶಪೂರ್ವಕವಾಗಿ ಬೈಕ್​ ಪಂಕ್ಚರ್​ ಮಾಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

26 ವರ್ಷದ ಪಶುವೈದ್ಯೆಯ ಅತ್ಯಾಚಾರ, ಕೊಲೆ

26 ವರ್ಷದ ಪಶುವೈದ್ಯೆಯ ಅತ್ಯಾಚಾರ, ಕೊಲೆ

26 ವರ್ಷದ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ನಗರದ ಹೊರವಲಯದಲ್ಲಿ ಸುಟ್ಟು ಹಾಕಲಾಗಿತ್ತು. ಪಶುವೈದ್ಯೆ ಗುರುವಾರ ರಾತ್ರಿ ಕೆಲಸ ಮುಗಿಸಿ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಜನನಿಬಿಡ ಪ್ರದೇಶದಲ್ಲಿ ರಾತ್ರಿ 9.30ರ ಸುಮಾರಿಗೆ ಆಕೆಯ ಬೈಕ್ ​ಪಂಕ್ಚರ್​ ಆಗಿದೆ. ಈ ವೇಳೆ ಇಬ್ಬರು ಯುವಕರು ಆಕೆಯ ಸ್ಕೂಟಿಯನ್ನು ತೆಗೆದುಕೊಂಡು ಹೋಗಿ ಪಂಕ್ಚರ್​ ಕಟ್ಟಿಸಿಕೊಂಡು ಬರುವುದಾಗಿ ಹೇಳಿದ್ದರು.

ಲಾರಿ ಚಾಲಕರಿದ್ದಾರೆ, ಭಯವಾಗ್ತಿದೆ ಅಮ್ಮಾ...

ಲಾರಿ ಚಾಲಕರಿದ್ದಾರೆ, ಭಯವಾಗ್ತಿದೆ ಅಮ್ಮಾ...

ಸುತ್ತಲೂ ಕತ್ತಲು, ಲಾರಿ ಚಾಲಕರು ಬೇರೆ ಇದ್ದಾರೆ ಭಯವಾಗುತ್ತಿದೆ ಎಂದು ಮನೆಗೆ ಕರೆ ಮಾಡಿ ಆಕೆ ತಿಳಿಸಿದ್ದಳು. ಈ ವಿಚಾರವನ್ನು ಆಕೆ ಮನೆಗೆ ಕರೆ ಮಾಡಿ ಹೇಳಿದ್ದರು. ಅಷ್ಟೇ ಅಲ್ಲ, ಪಕ್ಕದಲ್ಲಿ ಲಾರಿ ಚಾಲಕರಿದ್ದಾರೆ. ಅವರನ್ನು ನೋಡಿ ನನಗೆ ಭಯವಾಗುತ್ತಿದೆ ಎಂದು ಆಕೆ ದೂರವಾಣಿ ಕರೆಯಲ್ಲಿ ಹೇಳಿದ್ದರು. ನಂತರ ಆಕೆ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ರಾತ್ರಿ 11 ಗಂಟೆಗೆ ಕುಟುಂಬದವರು ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಶವ ಸಿಕ್ಕಿದ್ದು ಬೆಳಗ್ಗೆ

ಶವ ಸಿಕ್ಕಿದ್ದು ಬೆಳಗ್ಗೆ

ಪಶುವೈದ್ಯೆ ಮೇಲೆ ಲಾರಿ ಚಾಲಕರು ಅತ್ಯಾಚಾರ ನಡಿಸಿ, ಆಕೆಯನ್ನು ಕೊಲೆ ಮಾಡಿದ್ದಾರೆ ಎನ್ನುವ ಶಂಕೆ ಇದೆ. ಅತ್ಯಾಚಾರ ಮಾಡಿದ ನಂತರ ಶಂಶಾಬಾದ್​ನ ತೊಂಡುಪಲ್ಲಿಯಲ್ಲಿ ಟೋಲ್​ ಪ್ಲಾಜಾ ಸಮೀಪ ಈಕೆಯನ್ನು ಕೊಂದು, ಅಲ್ಲಿಂದ 25 ಕಿ.ಮೀ ದೂರದಲ್ಲಿ ಆಕೆಯನ್ನು ಸುಡಲಾಗಿದೆ.

ಆರೋಪಿಗಳ ಬಂಧನ

ಆರೋಪಿಗಳ ಬಂಧನ

ಘಟನೆ ವಿವರಿಸಿದ ನಂತರ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಟೋಲ್​ ಸಿಸಿಟಿವಿಗಳನ್ನು ಪರಿಶೀಲಿಸಿದ್ದರು. ನಂತರ ಇಬ್ಬರು ಲಾರಿ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಸಂತ್ರಸ್ತೆಯ ಬಟ್ಟೆ ಹಾಗೂ ಚಪ್ಪಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+