ಪಶುವೈದ್ಯೆ ಮೇಲೆ ಅತ್ಯಾಚಾರ; ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

ಹೈದರಾಬಾದ್, ಡಿಸೆಂಬರ್ 03 : ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಪೈಶಾಚಿಕ ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದಿದ್ದು ಹೇಗೆ? ಎಂಬುದು ಒಂದು ರೋಚಕ ಕಥನ.

ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಲು ಕಾರಣವಾಗಿದ್ದು ಒಂದು ಫೋನ್ ಕರೆ ಮತ್ತು ಪಂಕ್ಚರ್ ಅಂಗಡಿಯ ಹುಡುಗ ನೀಡಿದ ಮಾಹಿತಿ. ಬುಧವಾರ ರಾತ್ರಿ 27 ವರ್ಷದ ಪಶುವೈದ್ಯೆಯನ್ನು ನಾಲ್ವರು ಅಪಹರಿಸಿದ್ದರು. ಗುರುವಾರ ಬೆಳಗ್ಗೆ ಆಕೆಯ ಶವ ಸುಟ್ಟ ರೀತಿಯಲ್ಲಿ ಪತ್ತೆಯಾಗಿತ್ತು.

ಪಶುವೈದ್ಯೆ ಟೋಲ್ ಬಳಿ ನಿಲ್ಲಿಸಿದ್ದ ಸ್ಕೂಟಿ ಪಂಕ್ಚರ್ ಮಾಡಿದ್ದ ಆರೋಪಿಗಳು. ಬಳಿಕ ಆಕೆಗೆ ಸಹಾಯ ಮಾಡುವ ನೆಪದಲ್ಲಿ ಬಂದು ಆಕೆಯನ್ನು ಅಪಹರಣ ಮಾಡಿದ್ದರು. ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಡಲು ಪ್ರಯತ್ನ ನಡೆಸಿದ್ದರು.

ಟೋಲ್ ಪ್ಲಾಜಾದ ಬಳಿ ಪಶುವೈದ್ಯೆ ಸ್ಕೂಟಿ ನಿಲ್ಲಿಸಿದ್ದರು. ಪ್ಲಾಜಾದಿಂದ ಸುಮಾರು 27 ಕಿ. ಮೀ. ದೂರದಲ್ಲಿ ಸೇತುವೆ ಕೆಳಗೆ ಆಕೆಯ ಶವ ಸುಟ್ಟ ರೀತಿಯಲ್ಲಿ ಪತ್ತೆಯಾಗಿತ್ತು. ಪೆಟ್ರೋಲ್ ಸುರಿದು ಬೆಂಕಿ ಹಾಕಿರುವುದು ಪೊಲೀಸರ ಪ್ರಾಥಮಿಕ ಪರಿಶೀಲನೆ ವೇಳೆಯೇ ತಿಳಿಯಿತು.

ಪೊಲೀಸರಿಗೆ ಒಂದು ಫೋನ್ ಕಾಲ್

ಪೊಲೀಸರಿಗೆ ಒಂದು ಫೋನ್ ಕಾಲ್

ಗುರುವಾರ ಬೆಳಗ್ಗೆ ಪಶುವೈದ್ಯೆಯ ಶವ ಸುಟ್ಟ ರೀತಿಯಲ್ಲಿ ಸಿಕ್ಕಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಶವ ಸಿಕ್ಕ ವಿಚಾರ ಬೆಳಕಿಗೆ ಬಂದ ಕೆಲವೇ ಹೊತ್ತಿನಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಒಂದು ಫೋನ್ ಕರೆ ಬಂದಿತ್ತು. ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವಾತ ಇಬ್ಬರು ತಡರಾತ್ರಿ 12.30ರ ಸುಮಾರಿಗೆ ಬಾಟಲ್ ಹಿಡಿದು ಪೆಟ್ರೋಲ್ ತೆಗೆದುಕೊಂಡು ಹೋಗಲು ಬಂದಿದ್ದರು ಎಂದು ಮಾಹಿತಿ ನೀಡಿದ್ದ. ಶವವನ್ನು ಪೆಟ್ರೋಲ್ ಹಾಕಿ ಸುಟ್ಟ ಮಾಹಿತಿ ತಿಳಿದಿದ್ದ ಪೊಲೀಸರು ತಕ್ಷಣ ಅಲರ್ಟ್ ಆಗಿದ್ದರು.

ಟೈರ್ ಅಂಗಡಿ ಹುಡುಗ ಕೊಟ್ಟ ಸುಳಿವು

ಟೈರ್ ಅಂಗಡಿ ಹುಡುಗ ಕೊಟ್ಟ ಸುಳಿವು

ಪಶುವೈದ್ಯೆಯ ಸ್ಕೂಟಿ ಗಾಳಿ ತೆಗೆದಿದ್ದ ಆರೋಪಿಗಳು ಆಕೆಗೆ ಸಹಾಯ ಮಾಡುವ ಸೋಗಿನಲ್ಲಿ ಬಂದಿದ್ದರು. ಟೋಲ್ ಪ್ಲಾಜಾದ ಹತ್ತಿರ ವಿರುವ ಪಂಕ್ಚರ್ ಶಾಪ್‌ಗೆ ಬಂದು ಕೆಂಪು ಸ್ಕೂಟಿಗೆ ಗಾಳಿ ತುಂಬಿಸಿಕೊಂಡಿದ್ದರು. ಪೊಲೀಸರಿಗೆ ಈ ಕುರಿತು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಮಾಹಿತಿ ನೀಡಿದ್ದ. ಟೋಲ್ ಪ್ಲಾಜಾ ಬಳಿ ನಿಲ್ಲಿಸಿದ್ದ ಸ್ಕೂಟಿ ಮಾಹಿತಿ ಪಡೆದಿದ್ದ ಪೊಲೀಸರು ಈ ಸುಳಿವನ್ನು ಗಭೀರವಾಗಿ ತೆಗೆದುಕೊಂಡು ತನಿಖೆ ಚುರುಕುಗೊಳಿಸಿದ್ದರು.

ಸಿಸಿಟಿವಿ ದೃಶ್ಯಾವಳಿ ಲಭ್ಯ

ಸಿಸಿಟಿವಿ ದೃಶ್ಯಾವಳಿ ಲಭ್ಯ

ಎರಡು ಸುಳಿವುಗಳ ಜಾಡು ಹಿಡಿದ ಪೊಲೀಸರು ಟೋಲ್ ಪ್ಲಾಜಾ, ಪೆಟ್ರೋಲ್ ಬಂಕ್, ಹೆದ್ದಾರಿಯ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದರು. ಆಗ ಪೆಟ್ರೋಲ್ ಬಂಕ್‌ನಿಂದ ಕರೆ ಮಾಡಿದ್ದ ವ್ಯಕ್ತಿ ಆರೋಪಿಗಳ ಗುರುತು ಹಿಡಿದ. ಇತರ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರ ಅನುಮಾನದ ಚಲನವಲನ ನೋಡಿದ ಪೊಲೀಸರು ಅವರನ್ನು ಬಂಧಿಸಲು ಮಿಂಚಿನ ಕಾರ್ಯಾಚರಣೆ ನಡೆಸಿದರು. ಮೊದಲು ಲಾರಿ ಮಾಲೀಕನನ್ನು ಹುಡುಕಿದರು. ಆತ ತನ್ನ ಬಳಿ ಕೆಲಸಕ್ಕಿದ್ದ ಹುಡುಗರ ಮಾಹಿತಿ ನೀಡಿದ್ದ.

ಲಾರಿಗಳು ನಿಂತಿವೆ ಎಂಬ ಮಾಹಿತಿ

ಲಾರಿಗಳು ನಿಂತಿವೆ ಎಂಬ ಮಾಹಿತಿ

ಪಶುವೈದ್ಯೆ ಬುಧವಾರ ರಾತ್ರಿ ತನ್ನ ಸಹೋದರಿಗೆ ಕರೆ ಮಾಡಿದಾಗ ಇಲ್ಲಿ ಲಾರಿಗಳು ನಿಂತಿವೆ. ಸ್ಕೂಟಿ ಪಂಕ್ಚರ್ ಆಗಿದೆ ಎಂಬ ಮಾಹಿತಿ ನೀಡಿದ್ದಳು. ಇದನ್ನು ಕುಟುಂಬದವರು ಪೊಲೀಸರಿಗೆ ನೀಡಿದ ದೂರಿನಲ್ಲಿಯೂ ಉಲ್ಲೇಖಿಸಿದ್ದರು. ಇದು ಪೊಲೀಸರ ತನಿಖೆಗೆ ಸಹಾಯವಾಯಿತು. ಆರೋಪಿಗಳನ್ನು ಶೀಘ್ರವೇ ಬಂಧಿಸಲು ನೆರವಾಯಿತು. ಲಾರಿ ಮಾಲೀಕ ನೀಡಿದ ಮಾಹಿತಿ, ಸಿಸಿಟಿವಿಯಲ್ಲಿ ಸೆರೆ ಸಿಕ್ಕ ವ್ಯಕ್ತಿಗಳ ಚಹರೆ ಹೋಲಿಕೆ ಆಗಿತ್ತು. ಪೊಲೀಸರ ಶಂಕೆ ನಿಜವಾಗಿತ್ತು.

ವ್ಯವಸ್ಥಿತ ಸಂಚು ಮಾಡಿದ್ದ ಆರೋಪಿಗಳು

ವ್ಯವಸ್ಥಿತ ಸಂಚು ಮಾಡಿದ್ದ ಆರೋಪಿಗಳು

ಪಶುವೈದ್ಯೆ ಸ್ಕೂಟಿ ಪಂಕ್ಚರ್ ಮಾಡುವುದರಿಂದ ಹಿಡಿದು ಆಕೆಯನ್ನು ಸುಟ್ಟು ಹಾಕುವ ತನಕ ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿದ್ದರು. 6.15ಕ್ಕೆ ಸಂತ್ರಸ್ತೆ ಟೋಲ್ ಬಳಿ ಬೈಕ್ ನಿಲ್ಲಿಸಿ ಹೋದರು. ಆಕೆ 9.15ಕ್ಕೆ ವಾಪಸ್ ಬರುವ ತನಕ ಆರೋಪಿಗಳು ಲಾರಿ ನಿಲ್ಲಿಸಿಕೊಂಡು ಕಾದಿದ್ದರು. ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಬಳಿಕ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+